ಪ್ರಧಾನಿ ಮೋದಿ ಅವರು ಕೈಗೊಂಡಿ­ರುವ ನಿರ್ಧಾರವನ್ನು ಅತ್ಯಂತ ದಿಟ್ಟಎಂದು ಬಣ್ಣಿಸಿದ ವಿತ್ತ ಸಚಿವ ಅರುಣ್‌ ಜೇಟ್ಲಿ, ಈ ಕ್ರಮದಿಂದ ಸಮಾಜದ ಸರ್ವಜನರಿಗೂ ಅನುಕೂಲವಾಗಲಿದೆ, ಎಲ್ಲ ವರ್ಗವೂ ಈ ಕ್ರಮವನ್ನು ಸ್ವಾಗತಿಸಬೇಕು ಎಂದಿದ್ದಾರೆ.

ನವದೆಹಲಿ: ಹಳೆಯ ನೋಟುಗಳನ್ನು ಹೊಸ ನೋಟು­­­­ಗಳಿಗೆ ಬದಲಾಯಿಸಿ­ಕೊಳ್ಳುವಾಗ ಎಲ್ಲಾ ತೆರಿಗೆ ಕಾನೂನುಗಳೂ ಅನ್ವಯ­ವಾಗುತ್ತವೆ, ಇದು ತೆರಿಗೆಗಳ್ಳರಿಗೆ ಕ್ಷಮಾದಾನ ಯೋಜನೆ ಅಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಜತೆಗೆ, ಕಪ್ಪು ಹಣ ನಿಯಂತ್ರಣ ಮತ್ತು ಆರ್ಥಿಕ ಭಯೋತ್ಪಾದನೆ ನಿಗ್ರಹ­ಕ್ಕಾಗಿ 500 ಮತ್ತು 1000 ರೂ. ನೋಟು­ಗಳನ್ನು ರದ್ದುಮಾಡುವ ಕ್ರಮದಿಂದ ಆರ್ಥಿಕತೆ ದೃಢಗೊಳ್ಳಲಿದ್ದು, ಜಾಗತಿಕ ಮಟ್ಟದಲ್ಲಿ ರಾಷ್ಟ್ರದ ವಿಶ್ವಾಸಾರ್ಹತೆ ವೃದ್ಧಿಸಲಿದೆ ಎಂದೂ ಹೇಳಿ​ದ್ದಾರೆ. 

ಈ ನಡುವೆ ನೋಟು ಬದಲಾಯಿಸಿ­ಕೊಡುವ ಸಲುವಾಗಿ ಎಲ್ಲಾ ಬ್ಯಾಂಕುಗಳು ಶನಿವಾರ ಮತ್ತು ಭಾನುವಾರ ದಿನವಿಡೀ ಕಾರ್ಯ­ನಿರ್ವಹಿಸಲಿವೆ. ಹಳೆ ನೋಟು ನೀಡಿ ಹೊಸ ನೋಟು ಬದಲಾಯಿಸಿ­ಕೊಳ್ಳುವ ಪ್ರಕ್ರಿಯೆಯನ್ನು ಸರಳ ಮತ್ತು ಸುಸೂತ್ರಗೊಳಿಸಲು ಆರ್‌ಬಿಐ ಬ್ಯಾಂಕು­ಗಳಿಗೆ ಸೂಚನೆ ನೀಡಿದೆ. 

ಆದಾಯ ಘೋಷ​ಣೆ​ಯಲ್ಲಿ ನಮೂ​ದಿ​ಸಿದ ಮೊತ್ತಕ್ಕಿಂತ ಹೆಚ್ಚಾದ ಹಣಕ್ಕೆ ಶೇ.200 ರಷ್ಟುದಂಡ ವಿಧಿ​ಸ​ಲಾ​ಗು​ತ್ತದೆ ಎಂದು ಕೇಂದ್ರ ಎಚ್ಚ​ರಿ​ಸಿದೆ. ಇದು ಅಕ್ರಮ ತಡೆ​ಗ​ಟ್ಟುವ ನಿಟ್ಟಿ​ನಲ್ಲಿ ದಿಟ್ಟಕ್ರಮ ಎಂದೇ ಭಾವಿ​ಸ​ಲಾ​ಗಿ​ದೆ.
ಇದೇ ವೇಳೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನವೆಂಬರ್‌ 11ರವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ರದ್ದು ಮಾಡಲಾಗಿದೆ. ತೆರಿಗೆ ವಿನಾಯ್ತಿ ಮಿತಿ ವ್ಯಾಪ್ತಿಗೆ ಬರುವ ರೈತರು, ಗೃಹಿಣಿ­ಯರು, ಕಾರ್ಮಿಕರು .2.50 ಲಕ್ಷ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಕೈಗೊಂಡಿ­ರುವ ನಿರ್ಧಾರವನ್ನು ಅತ್ಯಂತ ದಿಟ್ಟಎಂದು ಬಣ್ಣಿಸಿದ ವಿತ್ತ ಸಚಿವ ಅರುಣ್‌ ಜೇಟ್ಲಿ, ಈ ಕ್ರಮದಿಂದ ಸಮಾಜದ ಸರ್ವಜನರಿಗೂ ಅನುಕೂಲವಾಗಲಿದೆ, ಎಲ್ಲ ವರ್ಗವೂ ಈ ಕ್ರಮವನ್ನು ಸ್ವಾಗತಿಸಬೇಕು ಎಂದಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮತಾನಾಡಿದ ಅವರು, ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಎರಡೂವರೆ ವರ್ಷದಲ್ಲಿ ಸರ್ಕಾರ ಹಲವು ಕ್ರಮಕೈಗೊಂಡಿದೆ. ಜನರು ತಮ್ಮ ಕಪ್ಪುಹಣವನ್ನು ಘೋಷಿಸಿ­ಕೊಂಡು ಅದನ್ನು ಅಧಿಕೃತಗೊಳಿಸಿ­ಕೊಳ್ಳಲು ಕಪ್ಪು ಹಣ ಕಾಯ್ದೆಯನ್ನು ರೂಪಿಸಿದ್ದೇವೆ ಎಂದರು.

ನಮ್ಮ ನಿರ್ಧಾರದಿಂದ ಕಪ್ಪುಹಣದ ಪರ್ಯಾಯ ಆರ್ಥಿಕತೆಗೆ ಹಿನ್ನಡೆಯಾ­ಗಲಿದೆ, ಏಕೆಂದರೆ ವ್ಯವಸ್ಥೆಯ ಹೊರಗಿ­ರುವ ನಗದು ಈಗ ನೇರವಾಗಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಬರಲಿದೆ. ನಾಗರಿಕರಿಗೆ ಕೆಲವು ಅನನುಕೂಲ­ಗಳಾಗುತ್ತವೆ. ಇವುಗಳನ್ನು ತಪ್ಪಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದೆ. ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ. ಕೆಲವು ಪ್ರಕರಣಗಳಲ್ಲಿ ಪ್ರಧಾನಿ 72 ಗಂಟೆಗಳ ಅವಧಿ ವರಿಗೆ ನೋಟು ಸ್ವೀಕರಿಸಲು ಅವಕಾಶ ನೀಡಿದ್ದಾರೆ. ಪರಿಸ್ಥಿತಿಯನ್ನು ನಾವು ಅವಲೋಕಿಸುತ್ತಿದ್ದೇವೆæ. ಮೆಟ್ರೋ, ಔಷಧ ಅಂಗಡಿ ಮತ್ತಿತರ ಕಡೆ­ಗಳಲ್ಲಿ .500, .1000 ನೋಟು­ಗಳನ್ನು ಸ್ವೀಕರಿಸಲಾಗಿದೆ ಎಂದರು. ಈ ನಿರ್ಧಾರದಿಂದ ಕೇಂದ್ರ­ಸರ್ಕಾ­ರವಷ್ಟೇ ಅಲ್ಲ ರಾಜ್ಯಸರ್ಕಾರಗಳೂ ಅನುಕೂಲ ಪಡೆಯಲಿವೆ ಎಂದರು. ಸುಧಾರಣಾ ಕ್ರಮಗಳಿಂದ ಬಡವರಿಗೆ ಅನನು­ಕೂಲವಾಗುವುದಿಲ್ಲ, ಪ್ರಮಾ­ಣಿಕ­­ವಾಗಿ ತೆರಿಗೆ ಪಾವತಿಸು­ವವರಲ್ಲಿ ನಮ್ಮ ನಿರ್ಧಾರದಿಂದ ತೃಪ್ತಭಾವ ಬಂದಿದೆ ಎಂದರು. 

(ಕೃಪೆ: ಕನ್ನಡಪ್ರಭ)