ನವದೆಹಲಿ[ಆ.25]: ಅರುಣ್‌ ಜೇಟ್ಲಿ ಅವರಿಗೆ ‘66’ ಸಂಖ್ಯೆ ಮೇಲೆ ಇನ್ನಿಲ್ಲದ ಪ್ರೇಮ ಇತ್ತು. ಸಂಖ್ಯಾಶಾಸ್ತ್ರದ ನಂಬಿಕೆಯೋ ಏನೋ ಗೊತ್ತಿಲ್ಲ. 

ಅವರ ಬಳಿ ಇದ್ದ ಕಾರುಗಳ ಸಂಖ್ಯೆ 66ರಿಂದಲೇ ಪ್ರಾರಂಭವಾಗುತ್ತಿದ್ದವು. 2014ರ ಲೋಕಸಭೆ ಚುನಾವಣೆಗೆ ಪಂಜಾಬ್‌ನ ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೇಟ್ಲಿ ಅವರು ತಮ್ಮ ಬಳಿ ಮರ್ಸಿಡಿಸ್‌ ಬೆಂಜ್‌, ಬಿಎಂಡಬ್ಲ್ಯು, ಹೋಂಡಾ ಅಕಾರ್ಡ್‌, ಪೋರ್ಶ್, ಟೊಯೋಟಾ ಫಾರ್ಚೂನರ್‌ ಕಾರುಗಳಿವೆ ಎಂದು ಘೋಷಿಸಿದ್ದರು. 

ಈ ಪೈಕಿ 4 ಕಾರುಗಳ ನೋಂದಣಿ ಸಂಖ್ಯೆ 6666 ಎಂದೇ ಇತ್ತು. ಒಂದು ಕಾರು ಮಾತ್ರ 6660 ಎಂಬ ನೋಂದಣಿ ಸಂಖ್ಯೆಯನ್ನು ಹೊಂದಿತ್ತು. ವಿಧಿಯಾಟ ಎಂದರೆ, ಜೇಟ್ಲಿ ಅವರು 66ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ.