ಟಗರು ಚಿತ್ರ ನಟನಿಂದ ದೋಖಾ!

Artist Devanath Cheating case Filed in Subramanya Nagara Police Station
Highlights

ಟಗರು ಚಿತ್ರದಲ್ಲಿ  ಶಿವರಾಜ್ ಕುಮಾರ್ ನಟಿಸಿದ್ದ ನಟಿಸಿದ್ದ ದೇವನಾಥ್ ಎನ್ನುವವರ ಮೇಲೆ ಸುಮಾರು 53 ಲಕ್ಷ ವಂಚನೆ ಆರೋಪ ಕೇಳಿ ಬಂದಿದೆ.  ಒಂದು ಸೈಟ್’ನಲ್ಲಿನ ಮನೆಯನ್ನು ಇಬ್ಬರಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. 

ಬೆಂಗಳೂರು (ಜೂ. 22): ಟಗರು ಚಿತ್ರದಲ್ಲಿ  ಶಿವರಾಜ್ ಕುಮಾರ್ ನಟಿಸಿದ್ದ ನಟಿಸಿದ್ದ ದೇವನಾಥ್ ಎನ್ನುವವರ ಮೇಲೆ ಸುಮಾರು 53 ಲಕ್ಷ ವಂಚನೆ ಆರೋಪ ಕೇಳಿ ಬಂದಿದೆ.  ಒಂದು ಸೈಟ್’ನಲ್ಲಿನ ಮನೆಯನ್ನು ಇಬ್ಬರಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. 

ಸುಬ್ರಮಣ್ಯಪುರದ ಸಿಂಹಾದ್ರಿ ಲೇ ಔಟ್ ನಲ್ಲಿನ 30/40 ಸೈಟ್  ಮನೆಯ ಮಾರಾಟ ಮಾಡುವುದಾಗಿ ಪ್ರಶಾಂತ್ ಎಂಬಾತನ ಬಳಿ ದೇವನಾಥ್ 75 ಲಕ್ಷಕ್ಕೆ ಮಾತುಕತೆ ನಡೆಸಿದ್ದರು. 53 ಲಕ್ಷವನ್ನು  ಅಡ್ವಾನ್ಸ್ ಪಡೆದಿದ್ದರು. ಆದರೆ ಈಗಾಗಲೇ  ಪ್ರಶಾಂತ್ ಗೆ ಗೊತ್ತಾಗದೆ 1.2 ಕೋಟಿಗೆ ಸೇಲ್ ಅಗ್ರಿಮೆಂಟ್ ಮಾಡಿಸಿದ್ದ.  ಈ ವೇಳೆಯಲ್ಲಿ ಮನೆಯ ಮೂಲ ದಾಖಲೆಗಳನ್ನ ಕೇಳಿದ್ದ ಪ್ರಶಾಂತ್’ಗೆ  ಅಗ್ರಿಮೆಂಟ್ ಸಮಯದಲ್ಲಿ  ದಾಖಲೆಗಳನ್ನು ಕೊಡುವುದಾಗಿ ದೇವನಾಥ್ ನಂಬಿಸಿದ್ದ. 

ಅನುಮಾಗೊಂಡು ಮನೆ ಬಳಿ‌ ಹೋಗಿ ವಿಚಾರಿಸಿದಾಗ ಕಿಶೋರ್ ಎಂಬಾತನಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ.   ಈ‌ ವೇಳೆ ಮನೆಯ ‌ಬಳಿ ಬಂದು ಪ್ರಶಾಂತ್ ಗಲಾಟೆ ಮಾಡಿದ್ದಾರೆ.  ಅಡ್ವಾನ್ಸ್ ಹಣ ಕೊಡಲ್ಲ.  ಬೇಕಾಗಿದ್ದು ‌ಮಾಡಿಕೋ‌.  ಇನ್ನೊಂದು ಬಾರಿ ಬಂದ್ರೆ ಕೈಕಾಲು‌ ಮುರಿಯುವುದಾಗಿ ದೇವನಾಥ್ ಬೆದರಿಕೆ ಹಾಕಿದ್ದಾನೆ.   ಈ‌ ಬಗ್ಗೆ ವಂಚನೆ ಕೇಸ್ ದಾಖಲು‌ ಮಾಡಿಕೊಂಡಿರುವ ಸುಬ್ರಮಣ್ಯಪುರ ಪೊಲೀಸರು ಸದ್ಯ ಪರಾರಿಯಾಗಿರುವ ದೇವನಾಥನಿಗಾಗಿ  ಹುಡುಕಾಟ ನಡೆಸುತ್ತಿದ್ದಾರೆ. 

loader