ಮರಳಿನಲ್ಲಿ ನಡೆದಾಡುವ ದೇವರ ಕಲಾಕೃತಿ

Artist Created Siddagangashree Sand Art
Highlights

ಕೆಲಗೇರಿಯ ತಮ್ಮ ಮನೆ ಎದುರು 9 ಅಡಿ ಎತ್ತರ ಹಾಗೂ ಎಂಟು ಅಡಿ ಅಗಲ ಮರಳಿನಲ್ಲಿ ರಂಗೋಲಿ ಪುಡಿಯನ್ನು ಬಣ್ಣವಾಗಿ ಬಳಸಿ ಮಂಜುನಾಥ್ ಅವರು ಅದ್ಭುತವಾಗಿ ಶ್ರೀಗಳ ಚಿತ್ರವನ್ನು ಬಿಡಿಸಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನದ ಅಂಗವಾಗಿ ಇಲ್ಲಿನ ಖ್ಯಾತ ಕಲಾವಿದ ಮಂಜುನಾಥ ಹಿರೇಮಠ ಅವರು ಮರಳಿನಲ್ಲಿ ಅವರ ಕಲಾಕೃತಿಯನ್ನು ಬಿಡಿಸಿದ್ದಾರೆ.

ಕೆಲಗೇರಿಯ ತಮ್ಮ ಮನೆ ಎದುರು 9 ಅಡಿ ಎತ್ತರ ಹಾಗೂ ಎಂಟು ಅಡಿ ಅಗಲ ಮರಳಿನಲ್ಲಿ ರಂಗೋಲಿ ಪುಡಿಯನ್ನು ಬಣ್ಣವಾಗಿ ಬಳಸಿ ಮಂಜುನಾಥ್ ಅವರು ಅದ್ಭುತವಾಗಿ ಶ್ರೀಗಳ ಚಿತ್ರವನ್ನು ಬಿಡಿಸಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಕುಟುಂಬ ಸಮೇತ ಈ ಮರಳು ಕಲಾಕೃತಿಯನ್ನು ಜನರು ವೀಕ್ಷಿಸುತ್ತಿದ್ದಾರೆ.

ಮಂಜುನಾಥ ಅವರು ಶ್ರೀಗಳಿಗೆ ಈ ಮೂಲಕ ಜನ್ಮದಿನದ ಶುಭಾಷಯಗಳನ್ನು ಕೋರಿದ್ದಲ್ಲದೇ, ಆದಷ್ಟು ಶೀಘ್ರ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ಆಗ್ರಹಿಸಿದ್ದಾರೆ.

loader