ಆರ್ಟಿಕಲ್ 370 ರದ್ದು: ರಾಮನಗರದಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ
ಬಿ.ಎಸ್ ಯಡಿಯೂರಪ್ಪ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಆರ್ಟಿಕಲ್ 370 ನೇ ವಿಧಿ ರದ್ದು ಬಗ್ಗೆಯೂ ಮಾತನಾಡಿದ್ದಾರೆ.
ರಾಮನಗರ(ಆ. 05) ಕಾಶ್ಮೀರಕ್ಕೆ ಒಳ್ಳೆಯದಾಗುವುದಿದ್ದರೆ ಈ ಮಸೂದೆಗೆ ಯಾವುದೇ ತೊಂದರೆಯಿಲ್ಲ. ಈ ಮಸೂದೆಯಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ ಎಂದು ಆರ್ಟಿಕಲ್ 370 ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಸಿಎಂ ಕುಮಾರಸ್ವಾಮಿ ವಿಶ್ಲೇಷಣೆ ಮಾಡಿದ್ದಾರೆ.
ಚನ್ನಪಟ್ಟಣದ ಚಕ್ಕೆರೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಯಡಿಯೂರಪ್ಪನವರು ಆರೋಪ ಮಾಡಿದ್ದರು. ನಮ್ಮ ಸರ್ಕಾರದ ವಿರುದ್ಧ ಯಡಿಯೂರಪ್ಪನವರು ಆರೋಪ ಮಾಡಿದ್ದರು. ಆದರೆ ಈಗ ಅವರ ಸರ್ಕಾರದಲ್ಲಿ ಏನು ನಡೆಯುತ್ತಿದೆ ಅನ್ನೋದನ್ನ ಅವರೇ ಹೇಳಬೇಕು ಎಂದು ಸವಾಲೆಸೆದರು.
ಆರ್ಟಿಕಲ್ 370 ರದ್ದು: ಮೋದಿ-ಶಾ ಜೋಡಿಗೆ ಅಡ್ವಾಣಿ ಅಭಿನಂದನೆ
ಬಿಜೆಪಿ ಸರಕಾರದಲ್ಲಿಏನು ನಡೆಯುತ್ತಿದೆ ಎಂದು ಯಡಿಯೂರಪ್ಪ ಅವರನ್ನೇ ನೀವು ಕೇಳಬೇಕು ಎಂದು ಮಾಧ್ಯಮದವರಿಗೂ ನಯವಾಗಿ ಕುಟುಕಿದರು.
ದೋಸ್ತಿ ಸರ್ಕಾರ ವಿಶ್ವಾಸ ಮತ ಕಳೆದುಕೊಳ್ಳುವ ದಿನಕ್ಕೂ ಮುನ್ನ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವರ್ಗಾವಣೆ ಜೋರಾಗಿ ನಡೆದಿತ್ತು. ದೋಸ್ತಿ ಪತನದ ನಂತರ ಅಧಿಕಾರಕ್ಕೇರಿದ ಬಿಎಸ್ ಯಡಿಯೂರಪ್ಪ ಹಲವು ವರ್ಗಾವಣೆ ರದ್ದು ಮಾಡಿ ಆದೇಶ ಹೊರಡಿಸಿದ್ದರು. ಇದೇ ಕಾರಣಕ್ಕೆ ಕುಮಾರಸ್ವಾಮಿ ವರ್ಗಾವಣೆ ವಿಚಾರದಲ್ಲಿ ಮತ್ತೆ ಆರೋಪ ಮಾಡಿದ್ದಾರೆ.