ಐಶ್ವರ್ಯ ಆರೋಪಿಸಿರುವ ಪ್ರಕಾರ, ವಾಟ್ಸಾಪ್'ನಲ್ಲಿ ಏಜಾಜ್ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ; ಲೈಂಗಿಕವಾಗಿ ಪ್ರಚೋದಿಸುವ ರೀತಿಯಲ್ಲಿ ಚ್ಯಾಟ್ ಮಾಡಿದ್ದಾನೆ.
ಮುಂಬೈ(ನ. 20): ರೂಪದರ್ಶಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಮಾಜಿ ಹಿಂದಿ ಬಿಗ್ ಬಾಸ್ ಸ್ಪರ್ಧಿ ಎಜಾಝ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 25 ವರ್ಷದ ರೂಪದರ್ಶಿ ಐಶ್ವರ್ಯ ಚೌಬೇ ಅವರ ದೂರಿನ ಮೇರೆಗೆ ವೆರ್ಸೋವಾ ಠಾಣೆಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಐಶ್ವರ್ಯ ಆರೋಪಿಸಿರುವ ಪ್ರಕಾರ, ವಾಟ್ಸಾಪ್'ನಲ್ಲಿ ಏಜಾಜ್ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ; ಲೈಂಗಿಕವಾಗಿ ಪ್ರಚೋದಿಸುವ ರೀತಿಯಲ್ಲಿ ಚ್ಯಾಟ್ ಮಾಡಿದ್ದಾನೆ. ಅಲ್ಲದೇ, ಜುಹು ಪ್ರದೇಶದಲ್ಲಿರುವ ಹೊಟೇಲ್'ವೊಂದಕ್ಕೆ ಬರುವಂತೆಯೂ ಕೇಳಿಕೊಂಡಿದ್ದಾನೆ. ಜೊತೆಗೆ, ವಾಟ್ಸಾಪ್'ನಲ್ಲಿ ಅಶ್ಲೀಲ ಫೋಟೋವೊಂದನ್ನು ಕಳುಹಿಸಿದ್ದಾನೆ. ಆಕೆ ಇದೇ ಜೂನ್ ತಿಂಗಳಲ್ಲಿ ವೆರ್ಸೋವಾ ಠಾಣೆಗೆ ತೆರಳಿ ಏಜಾಜ್ ವಿರುದ್ಧ ದೂರನ್ನೂ ದಾಖಲಿಸಿದ್ದಳು.
ಇದೇ ವೇಳೆ, ಏಜಾಜ್ ಖಾನ್ ಅವರು ಐಶ್ವರ್ಯ ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ. ಸದ್ಯ, ಬೊರಿವಿಲಿ ನ್ಯಾಯಾಲಯದಲ್ಲಿ ಖಾನ್'ರನ್ನು ಹಾಜರುಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.
