ಈ ಶೋ ನಂತರ ಟೈಮ್ಸ್ ನೌ ಸಹೊದ್ಯೋಗಿಗಳೊಂದಿಗೆ ಅರ್ನಬ್  ಮಾತುಕತೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಮುಂಬೈ(ಅ.02): ಭಾರತೀಯ ಟಿವಿ ಮಾಧ್ಯಮ ಲೋಕದಲ್ಲಿ ತನ್ನದೇ ಅಧ್ಯಾಯ ಆರಂಭಿಸಿದ್ದ ಅರ್ನಬ್ ಗೋಸ್ವಾಮಿ ಟೈಮ್ಸ್ ನೌ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಸದ್ಯದ ಹಾಟ್ ಟಾಪಿಕ್ ಆಗಿದ್ದು, ನಿನ್ನೆ ರಾತ್ರಿ ಪ್ರಸಾರವಾದ 'ನ್ಯೂಸ್ ಅವರ್' ಅರ್ನಬ್ ಪಾಲಿಗೆ ಟೈಮ್ಸ್ ನಲ್ಲಿ ಕೊನೆಯ ಶೋ ಆಗಿದೆ. 

ಈ ಶೋ ನಂತರ ಟೈಮ್ಸ್ ನೌ ಸಹೊದ್ಯೋಗಿಗಳೊಂದಿಗೆ ಅರ್ನಬ್ ಮಾತುಕತೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಅರ್ನಬ್ ರಾಜೀನಾಮೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾದ ಹಿನ್ನಲೆಯಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. 'ನ್ಯೂಸ್ ಅವರ್' ಶೋ ನಂತರ ತನ್ನ ಸ್ಟಾಫ್ ನೊಂದಿಗೆ ಮಾತಾಡಿದ ಅರ್ನಬ್, 'ಗೇಮ್ ಸ್ಟಾರ್ಟ್ ನೌ' ಎಂದು ತಮ್ಮ ಮಾತನ್ನು ಆರಂಭಿಸಿದ್ದಾರೆ. 

'ಸ್ವತಂತ್ರ್ಯ ಮಾಧ್ಯಮವನ್ನು ಯಾರು ಸಹ ಮುಟ್ಟಲು ಸಾಧ್ಯವಿಲ್ಲ, ಸ್ವತಂತ್ರ್ಯ ಮಾಧ್ಯಮದ ಮೇಲಿನ ಭರವಸೆಯನ್ನು ಎಂದಿಗೂ ಕೈ ಬಿಡದಂತೆ ಸಲಹೆ ನೀಡಿದ್ದಾರೆ'.