Asianet Suvarna News Asianet Suvarna News

ಪಾಕ್ ಗಡಿಯಲ್ಲಿ ಹೊಸ ಸಮರ ಪಡೆ ಸೃಷ್ಟಿಗೆ ಸೇನೆಯಿಂದ ಸಿದ್ಧತೆ!

ಪಾಕ್ ಗಡಿಯಲ್ಲಿ ಹೊಸ ಸಮರ ಪಡೆ ಸೃಷ್ಟಿಗೆ ಸೇನೆಯಿಂದ ಸಿದ್ಧತೆ!| ಅಕ್ಟೋಬರ್‌ಗೆ ಆರಂಭ | ತ್ವರಿತ ದಾಳಿಗೆ ಅನುಕೂಲ

Army moves to raise integrated battle groups for greater punch across Pakistan China borders
Author
Bangalore, First Published Jun 20, 2019, 8:03 AM IST

ನವದೆಹಲಿ[ಜೂ.20]: ಪಾಕಿಸ್ತಾನ ಜತೆಗೆ ಒಂದು ವೇಳೆ ಯುದ್ಧವೇನಾ ದರೂ ನಡೆದರೆ ತ್ವರಿತವಾಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಮುಂದಾಗಿರುವ ಭಾರತೀಯ ಸೇನೆ, ಇದಕ್ಕಾಗಿ ಪ್ರತ್ಯೇಕ ಸಮರಪಡೆಯೊಂದನ್ನು ಸೃಷ್ಟಿಸಲು ಸಿದ್ಧತೆ ನಡೆಸಿದೆ. ಪಾಕಿಸ್ತಾನ ಗಡಿಯಲ್ಲಿ ಹೊಸ ಪಡೆ ಅಕ್ಟೋಬರ್‌ನೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಪಾಕ್ ಗಡಿಯಲ್ಲಿ ಕೆಲವೊಂದು ಸಮರ ಪಡೆಗಳನ್ನು ಅಸ್ತಿತ್ವಕ್ಕೆ ತಂದ ಬಳಿಕ, ಚೀನಾ ಗಡಿಯಲ್ಲೂ ಅದೇ ಪ್ರಯೋಗವನ್ನು ಮಾಡಲು ಭಾರತೀಯ ಸೇನೆ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಪಾಕ್ ಜತೆ ಯುದ್ಧ ನಡೆದಂತಹ ಸಂದರ್ಭದಲ್ಲಿ ಬ್ರಿಗೇಡ್‌ಗಳ ಬದಲಿಗೆ ಸಮರ ಪಡೆಯನ್ನೇ ಬಳಸುವ ಯೋಜನೆ ಸೇನೆಯದ್ದು. ಬ್ರಿಗೇಡ್‌ನಲ್ಲಿ 3ರಿಂದ 4 ಘಟಕಗಳು ಇರುತ್ತವೆ. ಪ್ರತಿ ಘಟಕದಲ್ಲೂ 800 ಯೋಧರು ಇರುತ್ತಾರೆ.

ಸಮರ ಪಡೆಯನ್ನು ಮೇಜರ್ ಜನರಲ್ ರ‌್ಯಾಂಕಿನ ಅಧಿಕಾರಿ ಮುನ್ನಡೆಸಲಿದ್ದು, ಅದರಲ್ಲಿ ತಲಾ ೫೦೦೦ ಯೋಧರು ಇರುತ್ತಾರೆ. ಸಾಂಪ್ರದಾಯಿಕ ಸಮರದಲ್ಲಿ ಸೇನೆ ಹೋರಾಡುವ ಗತಿಯನ್ನೇ ಪರಿಪೂರ್ಣವಾಗಿ ಹೊಸ ಸಮರಪಡೆ ಬದಲಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios