ಸದ್ಯ ದೊರೆತಿರುವ ಸಿಸಿಟಿವಿ ದೃಶ್ಯಾವಳಿಗಳು ಉಗ್ರರ ಚಲನವಲನಗಳ ಬಹಿರಂಗಗೊಳಿಸಿದ್ದು, ಕಳೆದ ಶನಿವಾರ ಜಮ್ಮು ಕಾಶ್ಮೀರದ ಕತ್ವಾರ ಬಳಿ 3 ಉಗ್ರರು ಗಡಿ ನುಸುಳುವಾಗ ಎಚ್ಚೆತ್ತ ಯೋಧರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಶ್ರೀನಗರ (ನ.01): ಗಡಿಯಲ್ಲಿ ಎಷ್ಟೇ ಕಟ್ಟೆಚ್ಚರವಹಿಸಿದರೂ ಪಾಕಿಸ್ತಾನದ ಉಗ್ರರು ಗಡಿಯೊಳಗೆ ನುಸುಳಿ, ದಾಳಿ ನಡೆಸುತ್ತಲೇ ಬಂದಿದ್ದಾರೆ.
ಉಗ್ರರ ದಾಳಿಗೆ ತಕ್ಕ ಉತ್ತರ ದೊರೆತರು ಬುದ್ದಿ ಕಲಿಯದ ಪಾಕಿಸ್ತಾನ ಉಗ್ರರು ಪುಂಡಾಟಕ್ಕೆ ಬ್ರೇಕ್ ಮಾತ್ರ ಇನ್ನು ಬಿದ್ದಿಲ್ಲಾ. ಅಲ್ಲದೇ ಪಾಕ್’ನ ಉಗ್ರರು ಯಾವ ಸಂದರ್ಭದಲ್ಲಿ ಹಾಗೂ ಯಾವ ಮಾರ್ಗದಲ್ಲಿ ಗಡಿ ನುಸುಳುತ್ತಾರೆ ಎಂಬುದು ನಿಗೂಢವಾಗಿತ್ತು.
ಆದರೆ, ಸದ್ಯ ದೊರೆತಿರುವ ಸಿಸಿಟಿವಿ ದೃಶ್ಯಾವಳಿಗಳು ಉಗ್ರರ ಚಲನವಲನಗಳ ಬಹಿರಂಗಗೊಳಿಸಿದ್ದು, ಕಳೆದ ಶನಿವಾರ ಜಮ್ಮು ಕಾಶ್ಮೀರದ ಕತ್ವಾರ ಬಳಿ 3 ಉಗ್ರರು ಗಡಿ ನುಸುಳುವಾಗ ಎಚ್ಚೆತ್ತ ಯೋಧರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
