ಶ್ರೀನಗರ (ನ.21): ಮುಸುಕುಧಾರಿ ಸಶಸ್ತ್ರ ವ್ಯಕ್ತಿಗಳು ಇಲ್ಲಿನ ಬ್ಯಾಂಕೊಂದಕ್ಕೆ ನುಗ್ಗಿ ನಿಷೇಧಿತ 500 ಹಾಗೂ 1000 ನೋಟುಗಳಿರುವ 13 ಲಕ್ಷ ರೂಮೌಲ್ಯದ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಶ್ರೀನಗರದಿಂದ 100 ಕಿಮೀ ದೂರದಲ್ಲಿರುವ ಮಲ್ಪೋರದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಈ ದರೋಡೆ ನಡೆದಿದೆ. ಉಗ್ರವಾದಿಗಳೇ ಈ ಕೆಲಸ ಮಾಡಿರಬಹುದು ಎಂದು ಪೋಲಿಸ್ ಮೂಲಗಳು ಸಂಶಯಿಸಿದೆ.

ದರೋಡೆ ನಡೆದ ಸಂದರ್ಭದಲ್ಲಿ ಬ್ಯಾಂಕಿನಲ್ಲಿ 12 ಮಂದಿ ಕೆಲಸ ಮಾಡುತ್ತಿದ್ದು ಯಾರೊಬ್ಬರಿಗೂ ಹಾನಿಯಾಗಿಲ್ಲ. ಈ ಸಮಯದಲ್ಲಿ ಭ್ಯಾಂಕಿನ ಭದ್ರತಾ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿದ್ದವೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.