ಸಚಿನ್ ಪುತ್ರನಾದರೆ ನಮಗೆ ದೊಡ್ಡವರೇನಲ್ಲ ; ಇಲ್ಲಿ ಎಲ್ಲರೂ ಒಂದೆ

Arjun Tendulkar will be treated like any other player
Highlights

  • ಅಂಡರ್-19 ಬೌಲಿಂಗ್ ಕೋಚ್ ಸನತ್ ಕುಮಾರ್ ಸ್ಪಷ್ಟನೆ
  • ಒಬ್ಬ ಕೋಚ್ ಆಗಿ ನನಗೆ ಎಲ್ಲರೂ ಸಮಾನರು ಎಂದು ಹೇಳಿಕೆ 

ನವದೆಹಲಿ(ಜೂ.20): ‘ಭಾರತ ತಂಡದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ಕೂಡ ತಂಡದ ಎಲ್ಲರಂತೆ ಒಬ್ಬ ಆಟಗಾರನಷ್ಟೇ ಎಂದು ಭಾರತ ತಂಡದ ಅಂಡರ್-19 ಬೌಲಿಂಗ್ ಕೋಚ್ ಸನತ್ ಕುಮಾರ್ ಹೇಳಿದ್ದಾರೆ.

ಸನತ್ ಎರಡನೇ ಬಾರಿಗೆ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುತ್ತಿದ್ದು, ಸದ್ಯ ಶ್ರೀಲಂಕಾ ವಿರುದ್ಧದ ಸರಣಿಗಾಗಿ ಅಂಡರ್-19 ತಂಡಕ್ಕೆ ಬೌಲಿಂಗ್ ತರಬೇತಿ ನೀಡುತ್ತಿದ್ದಾರೆ. ‘ಒಬ್ಬ ಕೋಚ್ ಆಗಿ ನನಗೆ ಎಲ್ಲರೂ ಸಮಾನರು. ಹಾಗೆಯೇ ಅರ್ಜುನ್ ಕೂಡ. ಹುಡುಗರಲ್ಲಿರುವ ಪ್ರತಿಭೆಯನ್ನು ಹೊರತರುವುದಷ್ಟೇ ನನ್ನ ಕೆಲಸ. ಅಕ್ಟೋಬರ್‌ನಲ್ಲಿ
ಬಾಂಗ್ಲಾದಲ್ಲಿ ನಡೆಯಲಿರುವ ಅಂಡರ್-19 ಏಷ್ಯಾಕಪ್‌ವರೆಗೂ ಕಾರ್ಯನಿರ್ವಹಿಸಲಿದ್ದೇನೆ’ ಎಂದು ಸನತ್ ಹೇಳಿದ್ದಾರೆ.

loader