ಅಹಮದಾಬಾದ್[ನೆ.01] ‘ಕ್ಯಾ ಆಪ್ ಕಾ ಗರ್ಲ್ ಫ್ರೆಂಡ್ ಹೈ? ಆಪ್ ಸಿಂಗಲ್ ಹೈ ಯಾ ಮ್ಯಾರಿಡ್? ಆಪಸೆ ಫ್ರೆಂಡ್ ಶಿಪ್ ಕರನಿ ಹೈ, ಆರ್ ಯು ಸಿಂಗಲ್ ಆರ್ ಮ್ಯಾರಿಡ್? ಇಂಥ ಸಂದೇಶಗಳು ನಿಮ್ಮ ಮೊಬೖಲ್ ಗಳಿಗೆ ಬರುತ್ತಲೇ ಇರಬಹುದು. ಆದರೆ ಇವೆಲ್ಲ ನಿಮ್ಮನ್ನು ಟ್ರಾಪ್ ಮಾಡುವ ಒಂದು ಸುಂದರ ಒಳಸಂಚು!

ವಾಣಿಜ್ಯ ಉದ್ಯಮಿ ಒಬ್ಬರಿಗೆ ಈ ರೀತಿಯ ಕರೆಗಳು ನಿರಂತರವಾಗಿ ಬರುತ್ತಿದ್ದವು. ವಿಚಲಿತನಾದ ಉದ್ಯಮಿ ವಸ್ತ್ರಪುರ್  ಪೊಲೀಸರಿಗೆ ದೂರು ನೀಡಿದ್ದಾರೆ. 38 ವರ್ಷದ ವಿಜಯ್ ನಾರಂಗ್ ದೂರು ನೀಡಿದ್ದು ಅಪರಿಚಿತ ಮಹಿಳೆಯಿಂದ ನನಗೆ ಹಿಂಸೆ ಆಗುತ್ತಿದೆ ಎಂದು ಹೇಳಿದ್ದು ಸಂದೇಶಗಳು ಬರುತ್ತಿರುವ ದಾಖಲೆಯನ್ನು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ಸೆಕ್ಷನ್ 507ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.  ನಿಮ್ಮ ಮೊಬೈಲ್ ಗೂ ಇಂಥ ಸಂದೇಶ ಬರುತ್ತಿದೆಯೇ? ನೀವು ದೂರು ದಾಖಲಿಸುತ್ತೀರಾ? ಈ ಬಗ್ಗೆ ಹೇಳಿಕೆ ನೀಡಿರುವ ಇನ್ಸ್ ಪೆಕ್ಟರ್ ಜಡೇಜಾ ದೂರು ದಾಖಲಿಸಿಕೊಂಡಿದ್ದು ಯಾವ ಆಧಾರದ ಮೇಲೆ ವಿಚಾರಣೆ ನಡೆಸಬೇಕು ಎಂದು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.