ಅಮೆರಿಕದ ಎನ್‌ಬಿಸಿ ನ್ಯೂಸ್‌ ಚಾನೆಲ್‌ನ ನಿರೂಪಕಿ ಮೆಗಿನ್‌ ಕೆಲ್ಲಿ ಅವರು ಭಾರತದ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ ಅವರ ಜಂಟಿ ಸಂದರ್ಶನವನ್ನೇನೋ ನಡೆಸಿದರು. ಆದರೆ ಕೆಲ್ಲಿ ಅವರು ಮೋದಿ ಅವರನ್ನು ‘ನೀವು ಟ್ವೀಟರ್‌ನಲ್ಲಿದ್ದೀರಾ' ಎಂದು ಕೇಳಿ ಫಜೀತಿಗೊಳಗಾಗಿದ್ದಾರೆ.
ಸೇಂಟ್ ಪೀಟರ್ಸ್ಬರ್ಗ್(ಜೂ.03): ಅಮೆರಿಕದ ಎನ್ಬಿಸಿ ನ್ಯೂಸ್ ಚಾನೆಲ್ನ ನಿರೂಪಕಿ ಮೆಗಿನ್ ಕೆಲ್ಲಿ ಅವರು ಭಾರತದ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರ ಜಂಟಿ ಸಂದರ್ಶನವನ್ನೇನೋ ನಡೆಸಿದರು. ಆದರೆ ಕೆಲ್ಲಿ ಅವರು ಮೋದಿ ಅವರನ್ನು ‘ನೀವು ಟ್ವೀಟರ್ನಲ್ಲಿದ್ದೀರಾ' ಎಂದು ಕೇಳಿ ಫಜೀತಿಗೊಳಗಾಗಿದ್ದಾರೆ.
ಸಂದರ್ಶನಕ್ಕೂ ಮೊದಲು ಮೋದಿ ಮತ್ತು ಪುಟಿನ್ ಅವರನ್ನು ಕೆಲ್ಲಿ ಬರಮಾಡಿಕೊಳ್ಳುತ್ತಾರೆ. ಆಗ ಮೋದಿ, ಶುಕ್ರವಾರವಷ್ಟೇ ಮಳೆಯಲ್ಲಿ ಕೆಲ್ಲಿ ಛತ್ರಿ ಹಿಡಿದುಕೊಂಡು ತೆಗೆಸಿಕೊಂಡ ಫೋಟೋವನ್ನು ಪ್ರಶಂಸಿಸಿ ಚಟಾಕಿ ಹಾರಿಸುತ್ತಾರೆ. ಆಗ ಕೆಲ್ಲಿ ಅವರು, ‘ನೀವು ಟ್ವೀಟರ್ನಲ್ಲಿದ್ದೀರಾ?' ಎಂದು ಕೇಳುತ್ತಾರೆ. ಆಗ ಮೋದಿ ಅವರು ನಕ್ಕು ಹೌದೆಂದು ತಲೆಯಾಡಿಸಿ ಸಂವಾದ ಮುಂದುವರಿಸುತ್ತಾರೆ.
ಈ ವಿಡಿಯೋ ಈಗ ವೈರಲ್ ಆಗಿದ್ದು, ಅವರ ‘ಜ್ಞಾನ' ಮತ್ತು ‘ಪೂರ್ವತಯಾರಿ'ಯನ್ನು ಜನರು ಪ್ರಶ್ನಿಸಿದ್ದಾರೆ. ಮೋದಿ ಟ್ವೀಟರ್ನಲ್ಲಿ ವಿಶ್ವದ ನಂ.2 ಜನಪ್ರಿಯ ವ್ಯಕ್ತಿಯಾಗಿದ್ದು, 3 ಕೋಟಿ ಫಾಲೋವರ್ ಹೊಂದಿದ್ದಾರೆ.
