Asianet Suvarna News Asianet Suvarna News

ಉಸಿರಾಡುತ್ತಿದೆ ಪ್ರೀತಿ: ಶತಮಾನಗಳಾಯ್ತು ಈತ ಈಕೆಯನ್ನೇ ನೋಡ್ತಾ!

ಮಾನವ ಇತಿಹಾಸದಲ್ಲೇ ಅಪರೂಪದ ಸಂಶೋಧನೆ| ಹರಪ್ಪ ನಾಗರಿಕತೆಯ ಅವಧಿಯ ಜೋಡಿ ಅಸ್ಥಿಪಂಜರ ಪತ್ತೆ| ಪುಣೆಯ ಡೆಕ್ಕನ್ ಕಾಲೇಜ್ ಡೀಮ್ಡ್ ವಿವಿಯ ಮಾನವಶಾಸ್ತ್ರಜ್ಞರಿಂದ ಸಂಶೋಧನೆ| ಮಹಿಳಾ ಅಸ್ಥಿಪಂಜರದತ್ತ ನೋಡುತ್ತಿರುವ ಪುರುಷ ಅಸ್ಥಿಪಂಜರ

Archaeologists  Found Ancient Couple in Harappan Grave
Author
Bengaluru, First Published Jan 9, 2019, 1:18 PM IST

ಪುಣೆ(ಜ.09): ಪ್ರೀತಿ ಏಕೆ ಭೂಮಿ ಮೇಲಿದೆ ಅಂತಾ ಯಾರಾದ್ರೂ ಕೇಳಿದ್ರೆ ಬೇರೆ ಎಲ್ಲೂ ಜಾಗ ಇಲ್ಲವೇ ಅಂತಾನೇ ತಾನೇ ನೀವು ಹೇಳೊದು?. ಹೌದು, ಮನುಷ್ಯ ಸಮೇತ ಈ ಭುಮಿಯ ಸಕಲ ಚರಾಚರ ಪ್ರಾಣಿಗಳಲ್ಲಿ ಅಡಕವಾಗಿರುವ ಪ್ರೀತಿಗೆ ಭೂಮಿ ಬಿಟ್ಟರೆ ನಿಜಕ್ಕೂ ಬೇರೆಲ್ಲೂ ಜಾಗವಿಲ್ಲ.

ಸಾವಿರಾರು ವರ್ಷಗಳ ಹಿಂದೆ ನಾಶವಾಗಿರುವ ಸಿಂಧೂ ನಾಗರಿಕತೆಯ ಅವಧಿಯ ಜೋಡಿ ಅಸ್ಥಿಪಂಜರವೊಂದು ಈ ವಾದಕ್ಕೆ ಪುಷ್ಠಿ ನೀಡಿದೆ. ಹೌದು, ಹರಪ್ಪ ನಾಗರಿಕತೆಯ ಕಾಲದ ಜೋಡಿ ಅಸ್ಥಿಪಂಜರವೊಂದು ದೊರೆತಿದ್ದು, ಪುರುಷನ ಅಸ್ಥಿಪಂಜರದ ಮುಖ ಮಹಿಳೆಯ ಅಸ್ಥಿಪಂಜರದತ್ತ ನೋಡುತ್ತಿರುವ ಈ ದೃಶ್ಯ ಪ್ರಿತಿಗೆ ನಿಜಕ್ಕೂ ಹೊಸ ಭಾಷ್ಯ ಬರೆದಂತಿದೆ.

ಸಾವಿರಾರು ವರ್ಷಗಳ ಹಿಂದೆ ಸಮಾಧಿ ಮಾಡಲ್ಪಟ್ಟ ಈ ಜೋಡಿ ಅಸ್ಥಿಪಂಜರವನ್ನು ಪುಣೆಯ ಡೆಕ್ಕನ್ ಕಾಲೇಜ್ ಡೀಮ್ಡ್ ವಿವಿಯ ಮಾನವಶಾಸ್ತ್ರಜ್ಞರು ಸಂಶೋಧಿಸಿದ್ದಾರೆ.

ಇದೇ ಮೊದಲ ಬಾರಿಗೆ ಜೋಡಿ ಅಸ್ಥಿಪಂಜರವೊಂದು ದೊರೆತಿದ್ದು, ಪುರುಷ ಅಸ್ಥಿಪಂಜರದ ಮುಖ ಮಹಿಳಾ ಅಸ್ಥಪಿಪಂಜರದತ್ತ ನೋಡುತ್ತಿರುವುದು ನಿಜಕ್ಕೂ ಆಶ್ಚರ್ಯ ತಂದಿರುವುದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios