ಇತರ 13 ಬೇಡಿಕೆಗಳನ್ನು ಇಟ್ಟಿದ್ದು ಇವೆಲ್ಲಗಳನ್ನು ಈಡೇರಿಸಿದರೆ ಮಾತ್ರ ನಾವು ನಿಮ್ಮ ಜೊತೆ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸುತ್ತೇವೆ

ದುಬೈ(ಜೂ.23): ಭಯೋತ್ಪಾದನೆಗೆ ಇಂಬು ಕೊಡುತ್ತಿರುವ ವಿಶ್ವ ಪ್ರಸಿದ್ಧ 'ಅಲ್ ಜಜೀರ' ಟಿವಿ ಚಾನಲ್'ಅನ್ನು ಮುಚ್ಚಿದರೆ ಮಾತ್ರ ನಮ್ಮ ಜೊತೆ ಸಂಬಂಧ ಗಟ್ಟಿಯಾಗುತ್ತದೆ ಎಂದು ಅರಬ್ ಸೋದರ ರಾಷ್ಟ್ರಗಳು ಕತಾರ್ ದೇಶಕ್ಕೆ ನೇರ ಸಂದೇಶ ನೀಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಅಲ್ ಜಜೀರ' ಟಿವಿ ಚಾನಲ್'ಅನ್ನು ಮುಚ್ಚುವುದರ ಜೊತೆ ಇತರ 13 ಬೇಡಿಕೆಗಳನ್ನು ಇಟ್ಟಿದ್ದು ಇವೆಲ್ಲಗಳನ್ನು ಈಡೇರಿಸಿದರೆ ಮಾತ್ರ ನಾವು ನಿಮ್ಮ ಜೊತೆ ರಾಜತಾಂತ್ರಿಕ ಸಂಬಂಧವನ್ನು ಮುಂದುವರಿಸುತ್ತೇವೆ ಎಂದು ಮುಸ್ಲಿಂ ಸೋದರ ರಾಷ್ಟ್ರಗಳಾದ ಸೌದಿ ಅರೇಬಿಯಾ,ಯುಎಇ,ಈಜಿಫ್ಟ್ ಹಾಗೂ ಬಹ್ರೇನ್ ನೇರ ಸಂದೇಶ ನೀಡಿವೆ.

ರಾಜತಾಂತ್ರಿಕ ಸಂಬಂಧಗಳ ಜೊತೆ ಆರ್ಥಿಕ ಹಾಗೂ ಪ್ರವಾಸೋದ್ಯಮದ ಒಪ್ಪಂದಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಯೋತ್ಪಾದನೆಗೆ ನೆರವು ನೀಡುತ್ತಿರುವ ಕತಾರ್ ದೇಶದ ಮೇಲೆ ಕಠಿಣ ನಿರ್ಬಂಧ ವಿಧಿಸಿದೆ.