ಹತ್ತಿರವಿರುವ ಚಿತ್ರಗಳನ್ನು ಯಾರೂ ನಿರ್ದೇಶನ ಮಾಡುತ್ತಿಲ್ಲ. ಹಾಗಾಗಿ, ಇಂಥ ಚಿತ್ರ ನಿರ್ದೇಶನ ಮಾಡಲು ಇದು ಸುಸಂದರ್ಭ ಎಂಬುದಾಗಿ ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಇದು ವಿಶ್ವದ ಮೊದಲ ವರ್ಚ್ಯುವಲ್ ರಿಯಾಲಿಟಿ (ವಿಆರ್) ಮಲ್ಟಿ ಸೆನ್ಸೋರಿ ಎಪಿಸೋಡಿಕ್ ಫ್ಯೂಚರ್ ಫಿಲ್ಮ್ ಆಗಿರಲಿದೆ

ನವದೆಹಲಿ(ಮೇ.06): ಮೂರು ದಶಕಗಳ ದೀರ್ಘಕಾಲ ಸಂಗೀತ ಕ್ಷೇತ್ರದ ನಿರ್ದೇಶಕರಾಗಿದ್ದ ಎ.ಆರ್. ರೆಹಮಾನ್ ಅವರು ಇದೀಗ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ.

ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದ ಎ.ಆರ್. ರೆಹಮಾನ್ ಅವರು ಇದೀಗ ‘ಲೆ ಮಸ್ಕ್’ ಚಿತ್ರದ ನಿರ್ದೇಶನ ಮಾಡಲು ಮುಂದಾಗಿದ್ದು, ಇದು ಅವರ ಮೊದಲ ನಿರ್ದೇಶನದ ಚಿತ್ರವಾಗಲಿದೆ. ಜೂಲಿಯೆಟ್ ಪಾತ್ರದ ಸುತ್ತಲೇ ಗಿರಕಿ ಹೊಡೆಯುವ ಈ ಚಿತ್ರದಲ್ಲಿ ಪ್ರೆಂಚ್ ನಟಿ ನೋರಾ ಅರ್ನೆಜೆಡಾರ್ ಅಭಿನಯಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ರೆಹಮಾನ್, ‘ವಾಸ್ತವತೆಗೆ ಹತ್ತಿರವಿರುವ ಚಿತ್ರಗಳನ್ನು ಯಾರೂ ನಿರ್ದೇಶನ ಮಾಡುತ್ತಿಲ್ಲ. ಹಾಗಾಗಿ, ಇಂಥ ಚಿತ್ರ ನಿರ್ದೇಶನ ಮಾಡಲು ಇದು ಸುಸಂದರ್ಭ ಎಂಬುದಾಗಿ ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಇದು ವಿಶ್ವದ ಮೊದಲ ವರ್ಚ್ಯುವಲ್ ರಿಯಾಲಿಟಿ (ವಿಆರ್) ಮಲ್ಟಿ ಸೆನ್ಸೋರಿ ಎಪಿಸೋಡಿಕ್ ಫ್ಯೂಚರ್ ಫಿಲ್ಮ್ ಆಗಿರಲಿದೆ