ಬೆಂಗಳೂರು (ಅ.28):  ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ದೀಪಾವಳಿ ಗಿಫ್ಟ್​ ನೀಡುವುದಾಗಿ ಹೇಳಿ ಕೈ ಕೊಟ್ಟಿದೆ.

ಇನ್ನೇನು ವಿವಿಧ 90 ನಿಗಮ-ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ನೇಮಕ ಮಾಡಿ ಅದೇಶ ಹೊರಡಿಸಲಾಗುತ್ತದೆ ಎಂದು ಹೇಳಲಾಗ್ತಿತ್ತು. ಈ ಪಟ್ಟಿಯಲ್ಲಿ 20 ಶಾಸಕರ ಹೆಸರೂ ಇತ್ತು. ಇದಕ್ಕೆ ಹೈಕಮಾಂಡ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿತ್ತು.

ಆದರೆ, ಕಾರ್ಯಕರ್ತರು ಹಾಗೂ ಹಿರಿಯ ನಾಯಕರ ಒತ್ತಡದ ಹಿನ್ನೆಲೆಯಲ್ಲಿ ನಿಗಮ ಮಂಡಳಿಗಳಿಗೆ ನೇಮಕಾತಿಯನ್ನು ಸಿಎಂ ಸಿದ್ದರಾಮಯ್ಯ ಮುಂದೂಡಿದ್ದಾರೆ.

ಇದರಿಂದ ದೀಪಾವಳಿಗೆ ಕೈ ಕಾರ್ಯಕರ್ತರಿಗೆ ನಿರಾಶೆ ಮೂಡಿದೆ. ದೀಪಾವಳಿ ಬಳಿಕ ನೇಮಕ ಮಾಡಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.