Asianet Suvarna News Asianet Suvarna News

ಮನೆ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ತಿರಸ್ಕೃತಗೊಳ್ಳದಂತೆ ತಡೆಯುವ ಕೆಲವು ಸಲಹೆಗಳು

ಸಾಲ ನೀಡುವವರು 20 ಇಲ್ಲವೇ 30 ವರ್ಷದ ನಿಶ್ಚಿತ ಮಾಸಿಕ ವರಮಾನ ಇರುವವರನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಒಂದು ವೇಳೆ ನೀವು ಯೌವನಾವಸ್ಥೆಯನ್ನು ದಾಟಿದ್ದರೆ, ಕಡಿಮೆ ಅವಧಿಯ ಸಾಲವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಮಾಸಿಕ ಕಂತು(ಇಎಂಐ) ಮೊತ್ತ ಹೆಚ್ಚಾಗಬಹುದಾದರೂ, ಬ್ಯಾಂಕ್ ಸಾಲ ನೀಡುವ ಸಾಧ್ಯತೆ ಹೆಚ್ಚುತ್ತದೆ. ಜತೆಗೆ, ನೀವು ಕಟ್ಟುವ ಬಡ್ಡಿಯ ಪ್ರಮಾಣವೂ ಕಡಿಮೆಯಾಗಲಿದೆ.

Applying For A Home Loan Heres How To Avoid Getting Rejected

ಭೂಮಿಯ ಬೆಲೆ ಗಗನ ಮುಟ್ಟುತ್ತಿರುವುದರಿಂದ, ನಿಮ್ಮ ಬಳಿ ಲಭ್ಯವಿರುವ ಮೊತ್ತದಲ್ಲಿ ಮನೆ ಖರೀದಿ ಕಷ್ಟವಾಗುತ್ತಿದೆ. ಇಂತಹ ಕಷ್ಟದ ಸನ್ನಿವೇಶದಲ್ಲಿ ಹಣದ ಕೊರತೆಯನ್ನು ನೀಗಿಸಲು ಬ್ಯಾಂಕ್ ಸಾಲ ನೆರವಾಗಲಿದೆ ಮತ್ತು ಮನೆಯೊಂದನ್ನು ಹೂಡಿಕೆ ಇಲ್ಲವೇ ವಾಸಕ್ಕೆಂದು ಖರೀದಿಸಲು ಹಣದ ಕೊರತೆಯನ್ನು ನೀಗಿಸಲು ಇದು ಅತ್ಯಂತ ಪ್ರಶಸ್ತ ಮಾರ್ಗ ಎನ್ನಬಹುದು.

ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳವಾಗಿದ್ದರೂ, ನಾನಾ ಕಾರಣಗಳಿಂದಾಗಿ ಸಾಲದ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ. ಸಾಲ ಮರುಪಾವತಿ ಸಾಮರ್ಥ್ಯ ಕಡಿಮೆ ಇದೆ ಎಂದು ಬ್ಯಾಂಕ್ ಭಾವಿಸಬಹುದು. ವಾಪಸಾಗದ ಸಾಲ(ಎನ್ಪಿಎ)ವನ್ನು ಹೆಚ್ಚು ಮಾಡಿಕೊಳ್ಳಬಾರದು ಎಂಬುದು ಈ ತೀರ್ಮಾನಕ್ಕೆ ಕಾರಣ. ಗ್ರಾಹಕರ ಸಾಲ ತೀರಿಸುವ ಸಾಮರ್ಥ್ಯವನ್ನು ನಾನಾ ಮಾನದಂಡಗಳನ್ನು ಆಧರಿಸಿ, ಲೆಕ್ಕಿಸಲಾಗುತ್ತದೆ.

ಸಾಲದ ಅರ್ಜಿ ಪುರಸ್ಕೃತವಾಗುವ ಇಲ್ಲವೇ ತಿರಸ್ಕೃತವಾಗಲು ಕಾರಣವಾಗುವ ಪ್ರಮುಖ ಅಂಶಗಳನ್ನು ವಿವರವಾಗಿ ಪರಿಶೀಲಿಸೋಣ.

ವಯಸ್ಸು ಎಂಬುದು ಇಲ್ಲಿ ಮುಖ್ಯವಲ್ಲ:

ಬ್ಯಾಂಕ್'ಗಳು ಸಾಲ ಕೋರಿ ಅರ್ಜಿ ಸಲ್ಲಿಸಿದವರ ವಯಸ್ಸನ್ನು ಪ್ರಮುಖವಾಗಿ ಪರಿಗಣಿಸುತ್ತವೆ. ಒಂದು ವೇಳೆ ನೀವು ನಿವೃತ್ತಿಯನ್ನು ಸಮೀಪಿಸುತ್ತಿದ್ದರೆ, ಬ್ಯಾಂಕ್'ಗಳು ಸಾಲವನ್ನು ನಿರಾಕರಿಸುವ ಸಾಧ್ಯತೆ ಹೆಚ್ಚು ಇರಲಿದೆ. ಇದರ ಹಿಂದಿನ ತರ್ಕವೇನೆಂದರೆ, ಅರ್ಜಿದಾರನಿಗೆ ವಯಸ್ಸು ಹೆಚ್ಚಿದಂತೆ, ಆತನ ನಿವೃತ್ತಿಯ ಕಾಲ ಸಮೀಪಿಸುವುದರಿಂದ, ಅವರಿಗೆ 25-30 ವರ್ಷ ಅವಧಿಯ ಸಾಲವನ್ನು ಕೊಡುವುದು ಕಷ್ಟವಾಗಲಿದೆ. ಸಾಲ ನೀಡುವವರು 20 ಇಲ್ಲವೇ 30 ವರ್ಷದ ನಿಶ್ಚಿತ ಮಾಸಿಕ ವರಮಾನ ಇರುವವರನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಒಂದು ವೇಳೆ ನೀವು ಯೌವನಾವಸ್ಥೆಯನ್ನು ದಾಟಿದ್ದರೆ, ಕಡಿಮೆ ಅವಧಿಯ ಸಾಲವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಮಾಸಿಕ ಕಂತು(ಇಎಂಐ) ಮೊತ್ತ ಹೆಚ್ಚಾಗಬಹುದಾದರೂ, ಬ್ಯಾಂಕ್ ಸಾಲ ನೀಡುವ ಸಾಧ್ಯತೆ ಹೆಚ್ಚುತ್ತದೆ. ಜತೆಗೆ, ನೀವು ಕಟ್ಟುವ ಬಡ್ಡಿಯ ಪ್ರಮಾಣವೂ ಕಡಿಮೆಯಾಗಲಿದೆ.

ಎಷ್ಟು ಸಾಲ ಪಡೆಯಬಹುದು?:

ನಿಮಗೆ ಸಾಲವನ್ನು ಮಂಜೂರು ಮಾಡುವ ಮುನ್ನ ಸಾಲವನ್ನು ಮರು ಪಾವತಿಸುವ ಸಾಮರ್ಥ್ಯ ಇದೆಯೇ ಎಂಬುದನ್ನು ಬ್ಯಾಂಕ್-ಲೇವಾದೇವಿ ಸಂಸ್ಥೆಗಳು ಖಾತ್ರಿಪಡಿಸಿಕೊಳ್ಳುತ್ತವೆ. ಉದಾಹರಣೆಗೆ, ಅರ್ಜಿದಾರ ಈ ಹಿಂದೆ ಸಾಲ ಪಡೆದಿದ್ದು, ಆತ ಬಾಕಿಯನ್ನು ಉಳಿಸಿಕೊಂಡಿದ್ದರೆ, ಆ ಸಾಲಕ್ಕೆ ಕಟ್ಟಬೇಕಿರುವ ಮಾಸಿಕ ಕಂತನ್ನು ಆದಾಯದಿಂದ ಕಳೆಯಲಾಗುತ್ತದೆ. ಉಳಿಕೆ ವೇತನವನ್ನು ಪರಿಗಣಿಸಿ ಕೊಡಬಹುದಾದ ಸಾಲವನ್ನು ಲೆಕ್ಕ ಮಾಡುತ್ತವೆ. ಪಾವತಿಸಬೇಕಾದ ಸಾಲ ಮತ್ತು ನಿಗದಿತ ಆದಾಯದ ಅನುಪಾತ (ಎಫ್ಓಐಆರ್)ವು ಮಾಸಿಕ ವೇತನದ ಶೇ. 50ನ್ನು ದಾಟದಂತೆ ನೋಡಿಕೊಳ್ಳುವುದು ಉದ್ದೇಶ.

ಒಂದು ವೇಳೆ ನೀವು ಬೇರಾವುದೇ ಸಾಲ ತೆಗೆದುಕೊಂಡಿದ್ದರೆ, ನಿಮ್ಮ ಪತಿ/ಪತ್ನಿ ಇಲ್ಲವೇ ಕುಟುಂಬದ ಸದಸ್ಯರನ್ನು ಜತೆ ಅರ್ಜಿದಾರರನ್ನಾಗಿ ಮಾಡಿಕೊಳ್ಳಬೇಕು. ಇದರಿಂದ ಅವರ ಆದಾಯವನ್ನೂ ಸೇರಿಸಿಕೊಂಡು, ನಿಮ್ಮ ಸಾಲ ಪಡೆದುಕೊಳ್ಳುವ ಸಾಮರ್ಧ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಉತ್ತಮ ಕ್ರೆಡಿಟ್ ಅಂಕ ಮುಖ್ಯವಾಗುತ್ತದೆ:

ಕ್ರೆಡಿಟ್ ಅಂಕ ಎನ್ನುವುದು ನಿಮ್ಮ ಆರ್ಥಿಕ ವರದಿ ಕಾರ್ಡ್. ಅದು ಸಾಲದ ಕಂತು ಮತ್ತು ಕ್ರೆಡಿಟ್ ಕಾರ್ಡ್'ನ ಬಿಲ್'ಗಳನ್ನು ಮರುಪಾವತಿಸುವ ಸಾಮರ್ಥ್ಯದ ಸೂಚಕ. ನಿಮ್ಮ ಪಾವತಿಗಳ ವಿವರ, ಕಂತು ಕಟ್ಟದೆ ಇದ್ದಲ್ಲಿ ಅದರ ಮಾಹಿತಿಯನ್ನು ನೀಡುತ್ತದೆ. ಈಗ ಬಹುತೇಕ ಬ್ಯಾಂಕ್/ಲೇವಾದೇವಿ ಸಂಸ್ಥೆಗಳು ವ್ಯಕ್ತಿಯೊಬ್ಬನಿಗೆ ಸಾಲ ನೀಡಬಹುದೇ ಎಂಬುದನ್ನು ನಿರ್ಧರಿಸಲು ಕ್ರೆಡಿಟ್ ಅಂಕವನ್ನು ಪರಿಗಣಿಸುತ್ತವೆ. 750ಕ್ಕಿಂತ ಹೆಚ್ಚು ಅಂಕವನ್ನು ಉತ್ತಮ ಎಂದು ಹಾಗೂ 600ಕ್ಕಿಂತ ಕಡಿಮೆ ಅಂಕವನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ.

ಕಡಿಮೆ ಸಾಲ ಅಂಕವಿರುವವರು ಅದನ್ನು ಉತ್ತಮ ಪಡಿಸಿಕೊಳ್ಳಲು ಮೊದಲಿಗೆ ಸಣ್ಣ ಮೊತ್ತದ ಸಾಲವನ್ನು ಪಡೆದುಕೊಂಡು, ಅದನ್ನು ತೀರಿಸಿ, ಬಳಿಕ ಗೃಹ ಸಾಲಕ್ಕೆ ಹೋಗುವುದು ಉತ್ತಮ.

ಇತರ ಕಾರಣಗಳು:

ಕೆಲವೊಮ್ಮೆ ಬ್ಯಾಂಕ್/ಲೇವಾದೇವಿ ಸಂಸ್ಥೆಗಳು ಸಾಲ ಕೋರಿ ಅರ್ಜಿ ಸಲ್ಲಿಸಿರುವವರು ವಿದ್ಯುತ್ ಬಿಲ್ ಸೇರಿದಂತೆ ಇತರ ಬಿಲ್'ಗಳನ್ನು ನಿಯಮಿತವಾಗಿ ಕಟ್ಟುತ್ತಿದ್ದಾರೆಯೇ ಎಂಬುದು ಸೇರಿದಂತೆ ಬಹು ಹಂತದ ಪರಿಶೀಲನೆ ನಡೆಸುವುದು ಇದೆ. ಕ್ರೆಡಿಟ್ ಕಾರ್ಡ್'ನ  ಮೊತ್ತ/ಕಂತು ಪಾವತಿಯಲ್ಲಿ ವಿಳಂಬ ಇನ್ನಿತರವು ಗ್ರಾಹಕರ ಸಾಲ ಪಡೆದುಕೊಳ್ಳುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಉದ್ಯೋಗದಲ್ಲಿ ಸ್ಥಿರತೆ:

ಸಾಲಗಾರರ ಉದ್ಯೋಗ ಸ್ಥಿರತೆಯನ್ನೂ ಬ್ಯಾಂಕ್/ಲೇವಾದೇವಿ ಸಂಸ್ಥೆಗಳು ಪರಿಶೀಲಿಸುತ್ತವೆ. ಕಡಿಮೆ ಅವಧಿಯಲ್ಲಿ ಹಲವು ಕೆಲಸ ಬದಲಿಸುವವರ ಬದಲು ಉದ್ಯೋಗವೊಂದರಲ್ಲಿ ಕನಿಷ್ಠ ಎರಡು ವರ್ಷ ಇರುವವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ನಿರ್ಮಾಣಗಾರನ ಖಾತ್ರಿ:

ಮನೆಯೊಂದನ್ನು ಖರೀದಿಗೆ ಆಯ್ಕೆ ಮಾಡಿಕೊಳ್ಳುವ ಮುನ್ನ ಬಿಲ್ಡರ್'ಗಳ ಇತಿಹಾಸ ಮತ್ತು ಆತನ ಹಿಂದಿನ ಯೋಜನೆಗಳ ಕುರಿತು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಜತೆಗೆ, ಎಲ್ಲ ದಾಖಲೆಗಳು ಕಾನೂನಿನಂತೆ ಇವೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಎಲ್ಲ ದಾಖಲೆ ಕಾನೂನುಬದ್ಧವಾಗಿರುವ, ಮರುಮಾರಾಟದಿಂದ ಉತ್ತಮ ಬೆಲೆ ಬರುವ ಹಾಗೂ ಆಸ್ತಿ ಮೇಲೆ ಕಿರಿ ಪ್ರಾಯದವರು ಯಾವುದೇ ಹಕ್ಕು ಹೊಂದಿಲ್ಲದ ಆಸ್ತಿಗೆ ಬ್ಯಾಂಕ್'ಗಳು ಆದ್ಯತೆ ನೀಡುತ್ತವೆ.

ಗೃಹ ಸಾಲವನ್ನು ಪಡೆದುಕೊಳ್ಳಲು ಸಲ್ಲಿಸಬೇಕಾದ ಕಾಗದಪತ್ರಗಳು ಸಾಕಷ್ಟು ಇರಲಿದ್ದು, ಸಾಲದ ಅರ್ಜಿ ತಿರಸ್ಕೃತವಾಗದಂತೆ ನೋಡಿಕೊಳ್ಳಲು ಅವನ್ನು ಸೂಕ್ತವಾಗಿ ಸಲ್ಲಿಸಬೇಕಾಗುತ್ತದೆ. ಸಾಲ ಶೀಘ್ರವಾಗಿ ಮಂಜೂರು ಆಗಲು ಕೆವೈಸಿ ವಿವರಗಳು, ಆದಾಯದ ದಾಖಲೆಗಳು, ಬ್ಯಾಂಕ್ ಹೇಳಿಕೆಗಳು ಅಗತ್ಯವಾಗಿ ಬೇಕಿರಲಿದೆ.

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವವರು ಗಮನದಲ್ಲಿ ಇರಿಸಿಕೊಳ್ಳಬೇಕಾದ ಕೆಲವು ಅಂಶಗಳಿವು. ನಿಮ್ಮ ಸಾಲದ ಅರ್ಜಿ ಒಮ್ಮೆ ತಿರಸ್ಕೃತವಾದರೆ, ಮತ್ತೆ ಮತ್ತೆ ಸಾಲಕ್ಕೆ ಅರ್ಜಿ ಸಲ್ಲಿಸಬೇಡಿ. ಇದರಿಂದ ನಿಮ್ಮ ಸಾಲ ಪಡೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಬದಲಿಗೆ ಅರ್ಹತೆ ಪಡೆದುಕೊಳ್ಳಲು ಅಗತ್ಯವಾದದ್ದನ್ನು ಮಾಡಿ, ಬಳಿಕ ಅರ್ಜಿ ಸಲ್ಲಿಕೆಗೆ ಮುಂದಾಗಬೇಕು.

-ಅದಿಲ್ ಶೆಟ್ಟಿ, ಸಿಇಒ, ಬ್ಯಾಂಕ್  ಬಜಾರ್.ಕಾಂ

 

Follow Us:
Download App:
  • android
  • ios