‘ಸರ್ವರಿಗೂ ಸೂರು’: ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಇದೆಯೇ? ಅರ್ಜಿ ಸಲ್ಲಿಸಲು ಮನವಿ

First Published 1, Feb 2018, 6:41 PM IST
Applications Invited For Shelter For All Scheme
Highlights
  • ‘ಸರ್ವರಿಗೂ ಸೂರು ಅಭಿಯಾನ 2022’ಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಲುವಾಗಿ ಸೂರು ಬೇಡಿಕೆ ಪ್ರಮಾಣದ ಸಮೀಕ್ಷೆ ನಡೆಸಲಿರುವ ಬಿಬಿಎಂಪಿ
  • ಖಾಲಿ ನಿವೇಶನ ಹೊಂದಿರುವ ಬಿಪಿಎಲ್ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ವಾರ್ಡ್ ಕಚೇರಿಗಳಲ್ಲಿ ನಮೂನೆ-4ಬಿ ಅರ್ಜಿ ಪಡೆದು ಸಲ್ಲಿಸಬಹುದು

ಬೆಂಗಳೂರು: ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಇಲಾಖೆಯು ದೇಶದ ಪ್ರತಿ ನಾಗರಿಕರಿಗೂ ಸೂರು ಒದಗಿಸುವ ಉದ್ದೇಶದಿಂದ ರೂಪಿಸಿರುವ ‘ಸರ್ವರಿಗೂ ಸೂರು ಅಭಿಯಾನ 2022’ಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಲುವಾಗಿ ಸೂರು ಬೇಡಿಕೆ ಪ್ರಮಾಣದ ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಫೆ.1ರಿಂದ 15ರವರೆಗೆ ಈ ಸಮೀಕ್ಷೆ ನಡೆಯಲಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿರುವ ಬಿಪಿಎಲ್ ಪಡಿತರ ಚೀಟಿದಾರರು ಅಥವಾ ಕನಿಷ್ಠ 21 ಚ.ಮೀಟರ್ ಕಾರ್ಪೆಟ್ ವಿಸ್ತೀರ್ಣದ ಮನೆಯುಳ್ಳ ಬಿಪಿಎಲ್/ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ತಮ್ಮ ವ್ಯಾಪ್ತಿಯ ವಾರ್ಡ್ ಕಚೇರಿಗಳಲ್ಲಿ ನಮೂನೆ-4ಬಿ ಅರ್ಜಿ ಪಡೆದು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಅರ್ಜಿ ಜತೆಗೆ ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಕುಟುಂಬದ ಆದಾಯ ಪ್ರಮಾಣ ಪತ್ರ, ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬಹುದು. ಪಾಲಿಕೆಯ ವೆಬ್‌ಸೈಟ್ www.bbmp.gov.in ನಲ್ಲೂ ನಮೂನೆ-4ಬಿ ಲಭ್ಯವಿದೆ. ಬಿಬಿಎಂಪಿ ಆಯುಕ್ತರು ಯೋಜನೆಯ ಪ್ರಧಾನ ಸಮೀಕ್ಷಾಧಿಕಾರಿಯಾಗಿದ್ದು, ಸಮೀಕ್ಷಾ ವರದಿ ತಯಾರಿಗೆ ಇತರೆ 8 ಅಧಿಕಾರಿಗಳ ತಂಡ ರಚಿಸಲಾಗಿದೆ. ಜನರು ಯೋಜನೆ ಉಪಯೋಗ ಪಡೆದು ಕೊಳ್ಳಬೇಕೆಂದು ಮೇಯರ್ ಸಂಪತ್‌ರಾಜ್ ತಿಳಿಸಿದ್ದಾರೆ.

 

loader