ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದ 70ಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶವಿದೆ. ಆಸಕ್ತರು ಹಾಗು ಪ್ರಶಸ್ತಿಗೆ ಹೆಸರು ಸೂಚಿಸುವವರು ಅ.30ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಬೆಂಗಳೂರು(ನ.20): ಆಸ್ಟ್ರೇಲಿಯಾದ ಯುನೈಟೆಡ್ ಕನ್ನಡ ಸಂಘ ಹಾಗೂ ಹೃದಯ ವಾಹಿನಿ ಸಂಸ್ಥೆಗಳಿಂದ ಮಾ.11 ಮತ್ತು 12ರಂದು ಆಯೋಜಿಸಲಾಗಿರುವ 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾ ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯದ 70ಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶವಿದೆ. ಆಸಕ್ತರು ಹಾಗು ಪ್ರಶಸ್ತಿಗೆ ಹೆಸರು ಸೂಚಿಸುವವರು ಅ.30ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಇದೇ ವೇಳೆ 2015 ಮತ್ತು 2016ರಲ್ಲಿ ಪ್ರಕಟವಾದ ಕನ್ನಡ ಕೃತಿಗಳ ಲೋಕಾರ್ಪಣೆಗೆ ಅವಕಾಶವಿದೆ. ಲೇಖಕರು ಇದರ ಸದ್ಬಳಕೆ ಮಾಡಿಕೊಳ್ಳಬಹುದು. ಹೃದಯವಾಹಿನಿ, ಮಂಜುನಾಥ್ ಅಸೋಸಿಯೇಟ್ಸ್, ರಘು ಬಿಲ್ಡಿಂಗ್ ಉರ್ವಸ್ಟೋರ್, ಮಂಗಳೂರು-575006 ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 0824-4281531 ಹಾಗೂ 98865 10087 ಸಂಪರ್ಕಿಸಬಹುದು.