Asianet Suvarna News Asianet Suvarna News

ಸ್ಕೂಲ್ ಮಕ್ಕಳಿಗಾಗಿ ಆಪಲ್ ಐಪ್ಯಾಡ್; ಆದರೆ ಇದರ ಪೆನ್ಸಿಲ್ ಬೆಲೆ..?

ಈಗಾಗಲೇ ಈ ಐಪ್ಯಾಡ್ ಅಮೆರಿಕಾದಲ್ಲಿ ಲಭ್ಯವಾಗುತ್ತಿದ್ದು, ಏಪ್ರಿಲ್‌'ನಲ್ಲಿ ಭಾರತದಾದ್ಯಂತ ಸಿಗಲಿದೆ. ಈ ಐಪ್ಯಾಡ್‌'ಗೆ ಕ್ಲಾಸ್ ರೂಮುಗಳ ಮೇಲೆ ಜಾಸ್ತಿ ಒಲವು ಇರುವುದರಿಂದ ಇದರೊಂದಿಗೆ ಒಂದು ಪೆನ್ಸಿಲ್ ಇರಲಿದೆ.

Apple introduces new 9 7 inch iPad with Apple Pencil support

ತಂತ್ರಜ್ಞಾನದಿಂದಾಗಿ ನಮ್ಮೆಲ್ಲಾ ಕೆಲಸಗಳು ಸುಲಭವಾಗುತ್ತವೆ ಎಂದು ಜಗತ್ತು ಭಾವಿಸಿಕೊಂಡು ಬಹಳ ದಿನಗಳಾಗಿ ಹೋಗಿವೆ. ಹಾಗಾಗಿ ಹೊಸ ಹೊಸ ತಂತ್ರಜ್ಞಾನವನ್ನು ಹೊತ್ತ ಗ್ಯಾಡ್ಜೆಟ್‌'ಗಳು ಒಂದರ ಹಿಂದೊಂದು ಮಾರುಕಟ್ಟೆಗೆ ಆಗಮಿಸುತ್ತಲೇ ಇವೆ. ಸಂದರ್ಭ ಹೀಗಿರುವಾಗ ಆ್ಯಪಲ್ ಕಂಪನಿಯವರು ಸ್ವಲ್ಪ ಹುಷಾರಾಗಿ ಸ್ಕೂಲು ಮಕ್ಕಳು, ಶಿಕ್ಷಕರನ್ನು ಗಮನದಲ್ಲಿಟ್ಟುಕೊಂಡು ಒಂದು 9.7 ಇಂಚಿನ ಐಪ್ಯಾಡ್ ಅನ್ನು ಬಿಡುಗಡೆ ಮಾಡಿದೆ.

ಈಗಾಗಲೇ ಈ ಐಪ್ಯಾಡ್ ಅಮೆರಿಕಾದಲ್ಲಿ ಲಭ್ಯವಾಗುತ್ತಿದ್ದು, ಏಪ್ರಿಲ್‌'ನಲ್ಲಿ ಭಾರತದಾದ್ಯಂತ ಸಿಗಲಿದೆ. ಈ ಐಪ್ಯಾಡ್‌'ಗೆ ಕ್ಲಾಸ್ ರೂಮುಗಳ ಮೇಲೆ ಜಾಸ್ತಿ ಒಲವು ಇರುವುದರಿಂದ ಇದರೊಂದಿಗೆ ಒಂದು ಪೆನ್ಸಿಲ್ ಇರಲಿದೆ.

ಐಪ್ಯಾಡ್ ಪ್ರೋನಲ್ಲೂ ಈ ಪೆನ್ಸಿಲ್ ಇತ್ತು. ಇದನ್ನು ಬಳಸಿ ಮಕ್ಕಳು ನೋಟ್ಸ್ ಮಾಡಿಕೊಳ್ಳಬಹುದು. ಚಿತ್ರ ಬಿಡಿಸಬಹುದು. ಇಂಟರೆಸ್ಟಿಂಗ್ ಅಂದ್ರೆ ಈ ಐಪ್ಯಾಡ್‌'ನಲ್ಲಿ ಪಾಮ್ ರಿಜೆಕ್ಷನ್ ತಂತ್ರಜ್ಞಾನ ಇದೆ. ಮಕ್ಕಳು ಚಿತ್ರ ಬಿಡಿಸುವ ಒಂದು ಕೈಯನ್ನು ಐಪ್ಯಾಡ್ ಮೇಲೆ ಇಟ್ಟುಕೊಂಡರೂ ಏನೂ ತೊಂದರೆಯಾಗದು. ಆದರೆ ಒಂದು ಗಮನಸಿಬೇಕಾದ ಅಂಶವೆಂದರೆ ಈ ಪೆನ್ಸಿಲ್ ಅನ್ನು ಸೆಪರೇಟಾಗಿ ಖರೀದಿಸಬೇಕು. ಎಂಟು ಮೆಗಾ ಪಿಕ್ಸೆಲ್ ಬ್ಯಾಕ್ ಕ್ಯಾಮೆರಾ ಹೊಂದಿದ್ದು, ಇದರ ಮೂಲಕ ವೀಡಿಯೋ ರೆಕಾರ್ಡ್ ಮಾಡಬಹುದು. 1.2 ಮೆಗಾ ಪಿಕ್ಸೆಲ್ ಫೇಸ್ ಟೈಂ ಫ್ರಂಟ್ ಕ್ಯಾಮೆರಾ ಕೂಡ ಇದೆ.

ಇದರ ವಿಶೇಷತೆಯೆಂದರೆ ಸ್ಕೂಲ್‌'ವರ್ಕ್ ಎಂಬ ಆ್ಯಪ್. ಈ ಆ್ಯಪ್ ಮೂಲಕ ಹೋಂವರ್ಕು ಇತ್ಯಾದಿ ಸ್ಕೂಲಿಗೆ ಸಂಬಂಧಪಟ್ಟ ಎಲ್ಲವನ್ನೂ ಮಾಡಿಕೊಳ್ಳಬಹುದು. ಈ ಎಲ್ಲಾ ಕೆಲಸಗಳನ್ನು ಮಾಡಿ ಸೇವ್ ಮಾಡಲು ಐಕ್ಲೌಡ್‌ನಲ್ಲಿ 200 ಜಿಬಿ ಫ್ರೀ ಜಾಗ ಇದೆ. ಈ ಐಪ್ಯಾಡ್‌ನ ಆರಂಭಿಕ ಬೆಲೆ ರೂ.28,000. ಪೆನ್ಸಿಲ್ ಬೆಲೆ ರೂ.7,600.

Follow Us:
Download App:
  • android
  • ios