ನವರಾತ್ರಿ ಹಬ್ಬಕ್ಕೆ ವಿಷೇಶವಾಗಿ ಏನಾದರೂ ಸಿಹಿತಿನಿಸು ಮಾಡಬೇಕೆಂದು ಯೋಚಿಸುತ್ತಿರುವಿರಾ? ಹಾಗಾದರೆ ಸುಲಭವೂ, ರುಚಿಕರವೂ ಆದ ಸೇಬು ಹಲ್ವ ಮಾಡಿ ನೋಡಿ.

ನವರಾತ್ರಿ ಹಬ್ಬಕ್ಕೆ ವಿಷೇಶವಾಗಿ ಏನಾದರೂ ಸಿಹಿತಿನಿಸು ಮಾಡಬೇಕೆಂದು ಯೋಚಿಸುತ್ತಿರುವಿರಾ? ಹಾಗಾದರೆ ಸುಲಭವೂ, ರುಚಿಕರವೂ ಆದ ಸೇಬು ಹಲ್ವ ಮಾಡಿ ನೋಡಿ. ಮಾಡುವ ಬಗೆ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು: ಸೇಬು ಹಣ್ಣು 1, ಕೋವಾ 1/4 ಕಪ್, ಸಕ್ಕರೆ 1/4 ಕಪ್, ತುಪ್ಪ 1/4 ಕಪ್, ಏಲಕ್ಕಿ ಪುಡಿ 1/2 ಚಮಚ, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ 1/2 ಟೀ ಚಮಚ, ಕತ್ತರಿಸಿದ ಬಾದಾಮಿ 1/2 ಟೀ ಚಮಚ.

ಮಾಡುವ ವಿದಾನ: ಮೊದಲಿಗೆ ಸೇಬು ಹಣ್ಣನ್ನು ತುರಿದುಕೊಳ್ಳಿ, ನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಸಣ್ಣ ುರಿಯಲ್ಲಿ ಬಿಸಿ ಮಾಡಿಕೊಳ್ಳಿ, ಅದಕ್ಕೆ ಬಾದಾಮಿ ಮತ್ತು ಗೋಡಂಬಿ ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ, ನಂತರ ಬಾಣಲೆಗೆ ತುರಿದ ಸೇಬು ಹಾಕಿ 10 ನಿಮಿಷ ಕದಡುತ್ತಿರಿ, ನಂತರ ಅದಕ್ಕೆ ಕೋವಾ ಮತ್ತು ಸಕ್ಕರೆ ಸೇರಿಸಿ ಮಿಶ್ರ ಮಾಡಿ ಚನ್ನಾಗಿ ಕದಡಿ, ಈ ಮಿಶ್ರಣವು ತಳ ಬಿಟ್ಟ ನಂತರ ಅದಕ್ಕೆ ಹುರಿದಿಟ್ಟುಕೊಂಡ ಬಾದಾಮಿ, ಗೋಡಂಬಿ ಮತ್ತು ಏಲಕ್ಕಿ ಪುಡಿ ಸೇರಿಸಿದರೆ ರುಚಿಯಾದ ಸೇಬು ಹಲ್ವ ಸವಿಯಲು ಸಿದ್ದ