. ಅಲ್ಲದೆ ಈ ನೀತಿಯು ದೇಶಕ್ಕೆ ಮಾರಕ ತರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಈ ಕಂಪನಿಗಳು ಕೋರ್ಟ್ ಮೋರೆ ಹೋಗಿದ್ದು, ಈ ವಿವಾದಾತ್ಮಕ ನೀತಿಯನ್ನು ಸಂಪೂರ್ಣವಾಗಿ ತಡೆ ಹಾಕಬೇಕೆಂದು ಮನವಿ ಮಾಡಿವೆ

ವಾಷಿಂಗ್ಟನ್(ಫೆ.06): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 6 ಮುಸ್ಲಿಂ ದೇಶಗಳ ವಲಸಿಗರು ಹಾಗೂ ನಿರಾಶ್ರಿತರನ್ನು ನಿಷೇಧಿಸುವ ನೀತಿಯ ವಿರುದ್ಧ ವಿಶ್ವದ ದಿಗ್ಗಜ ಕಂಪನಿಗಳಾದ ಆ್ಯಪಲ್, ಗೂಗಲ್, ಫೇಸ್'ಬುಕ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಸಂಸ್ಥೆಗಳು ಸಿಡಿದೆದ್ದಿವೆ.

ಟ್ರಂಪ್ ಅವರ ವಲಸೆ ನಿಷೇಧ ನೀತಿಯು ಅಮೆರಿಕಾದ ವ್ಯವಹಾರ, ಸಂಶೋಧನೆ ಹಾಗೂ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಲಸಿಗರು ಹಾಗೂ ಅವರ ಮಕ್ಕಳು ದೇಶದ ಹಲವು ಪ್ರತಿಷ್ಟಿತ ಕಂಪನಿಗಳನ್ನು ಸ್ಥಾಪಿಸಿದ್ದಾರೆ. ಅಲ್ಲದೆ ಈ ನೀತಿಯು ದೇಶಕ್ಕೆ ಮಾರಕ ತರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಈ ಕಂಪನಿಗಳು ಕೋರ್ಟ್ ಮೋರೆ ಹೋಗಿದ್ದು, ಈ ವಿವಾದಾತ್ಮಕ ನೀತಿಯನ್ನು ಸಂಪೂರ್ಣವಾಗಿ ತಡೆ ಹಾಕಬೇಕೆಂದು ಮನವಿ ಮಾಡಿವೆ. ಆ್ಯಪಲ್, ಗೂಗಲ್, ಫೇಸ್'ಬುಕ್, ಮೈಕ್ರೋಸಾಫ್ಟ್ ಜೊತೆಗೆ ಇಬೇ,ಊಬರ್, ಲೆವಿ ಸ್ಟ್ರಾಸ್ ಸೇರಿದಂತೆ 100ಕ್ಕೂ ಹೆಚ್ಚು ಸಂಸ್ಥೆಗಳು ಅಮೆರಿಕಾ ಅಧ್ಯಕ್ಷರ ನೀತಿಯನ್ನು ವಿರೋಧಿಸಿವೆ.

ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ನಂತರ 7 ಮುಸ್ಲಿಂ ರಾಷ್ಟ್ರಗಳ ವಲಸಿಗರು ಹಾಗೂ ನಿರಾಶ್ರಿತರನ್ನು ನಿಷೇಧಿಸಿದ್ದರು. ಈ ಆದೇಶವು ಹೆಚ್ಚು ವಿವಾದ ಪಡೆದುಕೊಂಡಿಲ್ಲದೆ ದೇಶಾದ್ಯಂತ ಪ್ರತಿಭಟನೆಗಳಾಗಿದ್ದವು. ಸ್ವಯಂ ಸೇವಾ ಸಂಸ್ಥೆಯೊಂದು ಕೋರ್ಟ್'ಗೆ ಸಾರ್ವಜನಿಕ ಹಿತಾಸಕ್ತಿ ಹೂಡಿ ಟ್ರಂಪ್ ಆದೇಶಕ್ಕೆ ತಾತ್ಕಾಲಿಕ ತಡೆ ತಂದಿತ್ತು.