ಸೇಬು ಮತ್ತು ಬಾದಾಮಿ ಯಿಂದ ರುಚಿಯಾದ ಹಲ್ವ ತಯಾರಿಸಬಹುದು. ಹೇಗೆ ಎಂದು ಇಲ್ಲಿ ನೋಡಿ.
ಮನೆಗೆ ಬಂದುಗಳು ಬರುತ್ತಾರೆ ಏನಾದರೂ ಸಿಹಿ ತಿನಿಸು ಮಾಡುವ ಬಯಕೆಯಾಗಿದೆಯೇ? ಹಾಗಾದರೆ ಚಿಂತಿಸಬೇಡಿ ಸೇಬು ಮತ್ತು ಬಾದಾಮಿ ಯಿಂದ ರುಚಿಯಾದ ಹಲ್ವ ತಯಾರಿಸಬಹುದು. ಹೇಗೆ ಎಂದು ಇಲ್ಲಿ ನೋಡಿ.
ಸೇಬು ಮತ್ತು ಬಾದಾಮಿ ಹಲ್ವ ಮಾಡಲು ಬೇಕಾಹುವ ಸಾಮಗ್ರಿಗಳು:
ತುರಿದ 4 ಸೇಬು ಹಣ್ಣುಗಳು, 1 ಕಪ್ ಬಾದಾಮಿ, 2 ಏಲಕ್ಕಿ, 1 ಕಪ್ ಹಾಲು ಅಥವಾ ಹಾಲಿನ ಪೌಡರ್, 3/4 ಕಪ್ ಸಕ್ಕರೆ, 1/4 ಕಪ್ ತುಪ್ಪ.
ಸೇಬು ಮತ್ತು ಬಾದಾಮಿ ಹಲ್ವ ಮಾಡುವ ವಿಧಾನ:
ಮೊದಲಿಗೆ ಬಾದಾಮಿಯನ್ನು ಬೇಯಿಸಿ ಪೇಸ್ಟ್ ಮಾಡಿಕೊಳ್ಳಿ, ನಂತರ ಒಂದು ದಪ್ಪತಳದ ಪಾತ್ರಗೆ ತುಪ್ಪ ಹಾಕಿ ಅದಕ್ಕೆ ತುರಿದ ಸೇಬು ಹಣ್ಣು ಮತ್ತು ಸಕ್ಕರೆ ಹಾಕಿ ಮಿಶ್ರ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಬೇಕು, ನಂತರ ಅದಕ್ಕೆ ಏಲಕ್ಕಿ ಮತ್ತು ಬಾದಾಮಿ ಪೇಸ್ಟ್ ಸೇರಿಸಿ 2-3 ನಿಮಿಷ ಬೇಯಿಸಿ. ನಂತರ ಅದಕ್ಕೆ ಹಾಲು ಅಥವಾ ಹಾಲಿನ ಪುಡಿ ಸೇರಿಸಿ.ಹಲ್ವದ ಹದಕ್ಕೆ ಬರುವವರೆಗೂ ಚನ್ನಾಗಿ ಕುದಿಸಿ. ಈ ಎಲ್ಲಾ ಮಿಶ್ರಣವೂ ಪಾತ್ರೆಯ ತಳ ಬಿಟ್ಟ ಮೇಲೆ ಅದಕ್ಕೆ ದ್ರಾಕ್ಷಿ ಅಥವಾ ಗೋಡಂಬಿ ಅಥವಾ ಬಾದಾಮಿಯಿಂದ ಅಲಂಕಾರ ಮಾಡಿದರೆ ರುಚಿರುಚಿಯಾದ ಸೇಬು ಮತ್ತು ಬಾದಾಮಿ ಹಲ್ವ ಸವಿಯಲು ಸಿದ್ದ.
