ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ 'ಇಂದಿರಾ ಗಾಂಧಿ ಕ್ಯಾಂಟೀನ್' ಕಾಮಗಾರಿ ಭರದಿಂದ ಸಾಗಿದೆ. ಆಗಸ್ಟ್ 15ರಂದು ಎಲ್ಲೆಲ್ಲಿ ಕ್ಯಾಂಟೀನ್ ಆರಂಭವಾಗುವುದೋ ಕಾದುನೋಡಬೇಕಿದೆ. ಈ ನಡುವೆ ಜೆಡಿಎಸ್ ಕೂಡಾ ಅಪ್ಪಾಜಿ ಕ್ಯಾಂಟಿನನ್ನು ಸದ್ದಿಲ್ಲದೆ ಆರಂಭಿಸುತ್ತಿದೆ.
ಬೆಂಗಳೂರು(ಆ.02): ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ 'ಇಂದಿರಾ ಗಾಂಧಿ ಕ್ಯಾಂಟೀನ್' ಕಾಮಗಾರಿ ಭರದಿಂದ ಸಾಗಿದೆ. ಆಗಸ್ಟ್ 15ರಂದು ಎಲ್ಲೆಲ್ಲಿ ಕ್ಯಾಂಟೀನ್ ಆರಂಭವಾಗುವುದೋ ಕಾದುನೋಡಬೇಕಿದೆ. ಈ ನಡುವೆ ಜೆಡಿಎಸ್ ಕೂಡಾ ಅಪ್ಪಾಜಿ ಕ್ಯಾಂಟಿನನ್ನು ಸದ್ದಿಲ್ಲದೆ ಆರಂಭಿಸುತ್ತಿದೆ.
ರಾಜಧಾನಿಗರ ಹಸಿವು ನಿಗಿಸುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಊಟ-ತಿಂಡಿ ನೀಡುವ ಇಂದಿರಾ ಕ್ಯಾಂಟೀನ್ ಆರಂಭಕ್ಕೂ ಮೊದಲೇ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಸಿದ್ಧಗೊಂಡಿದೆ. ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ನೇತೃತ್ವದಲ್ಲಿ 'ನಮ್ಮ ಅಪ್ಪಾಜಿ ಕ್ಯಾಂಟೀನ್' ನಗರದಲ್ಲಿ ತಲೆ ಎತ್ತುತ್ತಿದೆ.
ಶ್ರೀ ಸಾಯಿ ಸಮರ್ಪಣ ಚಾರಿಟೇಬಲ್ ನಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಪ್ರಾರಂಭದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ನಮ್ಮ ಅಪ್ಪಾಜಿ ಕ್ಯಾಂಟಿನ್ ಲೋಕಾರ್ಪಣೆಗೊಳ್ಳಲಿದೆ.
ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಶೇಷ ಏನು..?
ಅಪ್ಪಾಜಿ ಕ್ಯಾಂಟೀನ್'ನಲ್ಲಿ 5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್, 10 ರೂ.ಗೆ ಪೊಂಗಲ್, ಮುದ್ದೆ ಬಸ್ಸಾರು, ಅನ್ನ ಸಾಂಬಾರ್,ರೈಸ್ ಬಾತ್,3 ರೂ.ಗೆ ಕಾಫಿ-ಟೀ ನೀಡಲಾಗುವುದು.ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರಲಿದೆ.
10 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್ ನಿರ್ಮಾಣ ಆಗಿದ್ದು, ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಕೆಲ ಗಂಟೆಗಳಲ್ಲಿ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿಯವ ನೇತೃತ್ವದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ್ರು ದಂಪತಿಯ ಸಮ್ಮುಖದಲ್ಲಿ ಕ್ಯಾಂಟಿನ್ ಉದ್ಘಾಟನೆಯಾಗುತ್ತಿದೆ. ಈ ಕ್ಯಾಂಟಿನ್ ಯಶಸ್ವಿಯಾದ್ರೆ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರದಲ್ಲಿ ವಿಸ್ತರಿಸಲು ನಿರ್ಧರಿಸಲಾಗಿದೆ. ಇನ್ನೂ ಮೋದಿಯ ಚಾಯ್ ಪೇ ಚರ್ಚಾ ದಂತೆ ಮುದ್ದೆ ಜತೆ ಚರ್ಚೆ ಕಾರ್ಯಕ್ರಮವನ್ನು ಜೆಡಿಎಸ್ ಹಮ್ಮಿಕೊಳ್ಳುವ ಸಾಧ್ಯತೆ ಇದೆ.
