ಭೋಜನ ಪ್ರಿಯರಿಗೆ ಅಪ್ಪಾಜಿ ಕ್ಯಾಂಟೀನ್ ಭರ್ಜರಿ ಗುಡ್ ನ್ಯೂಸ್ : ಏನದು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 8:08 AM IST
Appaji canteen food Competition For anniversary
Highlights

ಭೋಜನ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್. ಅಪ್ಪಾಜಿ ಕ್ಯಾಂಟೀನ್ ಒಂದು ವರ್ಷ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಫುಡ್ ಕಾಂಪಿಟೇಷನ್ ಹಮ್ಮಿಕೊಂಡಿದೆ. 

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ .ಡಿ.ದೇವೇಗೌಡರ ಹೆಸರಿನಲ್ಲಿ ವಿಧಾನ ಪರಿಷತ್ ಸದಸ್ಯ  ಟಿ.ಎ.ಶರವಣ ಪ್ರಾರಂಭಿಸಿರುವ ಅಪ್ಪಾಜಿ ಕ್ಯಾಂಟೀನ್‌ನ ಮೊದಲ ವಾರ್ಷಿಕೋತ್ಸವ ಅಂಗವಾಗಿ ‘ರಾಗಿಮುದ್ದೆ, ಬಸ್ಸಾರು, ಜೋಳದ, ರೊಟ್ಟಿ ಎಣ್ಣೆಗಾಯಿ ಭೋಜನ ಸ್ಪರ್ಧೆ’  ಹಮ್ಮಿಕೊಳ್ಳ ಲಾಗಿದೆ. ಹನುಮಂತನಗರದ 50 ಅಡಿ ರಸ್ತೆಯಲ್ಲಿರುವ ಅಪ್ಪಾಜಿ ಕ್ಯಾಂಟೀನ್‌ಲ್ಲಿ ಆ.4 ರಂದು (ಶನಿವಾರ) ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 

ಸ್ಪರ್ಧೆಯಲ್ಲಿ ಉತ್ತರ ಕರ್ನಾಟಕ ಮೂಲದ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕದ ರಾಗಿಮುದ್ದೆ ಸಾರನ್ನು ತಿನ್ನುವವವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ರೊಟ್ಟಿ ಮತ್ತು ಮುದ್ದೆ ಸೇವಿಸುವವರಿಗೆ  ಬಹುಮಾನಗಳನ್ನು ನೀಡಲಾಗುವುದು. 

ಮೊದಲ ಬಹುಮಾನವಾಗಿ 30 ದಿನಗಳವರೆಗೆ ಉಚಿತ ಉಪಹಾರ ಮತ್ತು ಮಧ್ಯಾಹ್ನದ ಭೋಜನ, ಎರಡನೇ ಬಹುಮಾನವಾಗಿ 20 ದಿನಗಳವರೆಗೆ ಉಚಿತ ಉಪಹಾರ ಮತ್ತು ಮಧ್ಯಾಹ್ನದ ಭೋಜನ, ತೃತಿಯ ಬಹುಮಾನವಾಗಿ 10 ದಿನಗಳ ಕಾಲ ಉಚಿತ ಉಪಹಾರ ಮತ್ತು ಭೋಜನ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊದಲು ನೋಂದಣಿ ಮಾಡಿಕೊಂಡ 10 ಮಂದಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಆದ್ಯತೆ ನೀಡಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೊಬೈಲ್ ಸಂಖ್ಯೆ 8553466275 ಗೆ ನೋಂದಾಯಿಸಿಕೊಳ್ಳಬಹುದು.

loader