‌ಮಂಡ್ಯದ ಶಂಕರ ನಗರದ ನಾಗೇಶ್ ಮತ್ತು ಗೊರವಾಲೆಯ ನಾಗೇಶ್ ಎಂಬ ಇಬ್ಬರು ಸ್ನೇಹಿತರು ಮಾಜಿ ಪ್ರಧಾನಿ ದೇವೇಗೌಡರ ಮೇಲಿನ ಅಭಿಮಾನದಿಂದ ಈ ಕ್ಯಾಂಟೀನ್ ಆರಂಭಿಸಿದ್ದಾರೆ
ಮಂಡ್ಯ(ಅ.12): ಇಂದಿರಾ ಕ್ಯಾಟೀನ್ ಪರ್ಯಾಯವಾಗಿ ಅಪ್ಪಾಜಿ ಕ್ಯಾಟೀನ್ ಒಂದು ಹೆಚ್ಚೆ ಮುಂದು ಹೋಗಿ ಸಕ್ಕರೆ ನಗರಿ ಮಂಡ್ಯದಲ್ಲಿ ಇಂದು ರಾಜ್ಯದ ಎರಡನೇ ಅಪ್ಪಾಜಿ ಕ್ಯಾಂಟೀನ್'ಅನ್ನು ಆರಂಭಿಸಿದೆ.
ಮಂಡ್ಯದ ಮಹಾವೀರ್ ವೃತ್ತದಲ್ಲಿ ಈ ಕ್ಯಾಂಟೀನ್ ಆರಂಭಗೊಂಡಿದ್ದು ಸಾರ್ವಜನಿಕರಿಗೆ 10 ರೂಗೆ ಊಟ ತಿಂಡಿ 5 ರೂ.ಗೆ ಕಾಫಿ ಇಲ್ಲಿ ದೊರೆಯುಲಿದೆ. ಮಂಡ್ಯದ ಶಂಕರ ನಗರದ ನಾಗೇಶ್ ಮತ್ತು ಗೊರವಾಲೆಯ ನಾಗೇಶ್ ಎಂಬ ಇಬ್ಬರು ಸ್ನೇಹಿತರು ಮಾಜಿ ಪ್ರಧಾನಿ ದೇವೇಗೌಡರ ಮೇಲಿನ ಅಭಿಮಾನದಿಂದ ಈ ಕ್ಯಾಂಟೀನ್ ಆರಂಭಿಸಿದ್ದಾರೆ. ಮಂಡ್ಯದ ಸಂಸದ ಪುಟ್ಟರಾಜು, ಕ್ಯಾಂಟೀನ್'ಗೆ ಅಪ್ಪಾಜಿ ಕ್ಯಾಂಟೀನ್ ಎಂದು ಉದ್ಘಾಟಿಸಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ನಾಯಕರಾದ ಡಾ. ಕೃಷ್ಣ, ನಾಯಕಿ ಪ್ರಭಾವತಿ ಜಯರಾಂ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
