ಕಳೆದ ವರ್ಷ ಮಾರ್ಚ್’ನಲ್ಲಿ ಯಮುನಾ ನದಿ ತಟದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿತ್ತು. ಯಮುನಾ ನದಿ ತಟದ ಪುನರ್ನಿರ್ಮಾಣಕ್ಕೆ ರೂ.13.29 ಕೋಟಿ ರೂ. ಬೇಕಾಗುವುದು ಹಾಗೂ ಹತ್ತು ವರ್ಷಗಳ ಅವಧಿ ತಗಲುವುದು ಎಂದು ಸಮಿತಿಯು ಹಸಿರು ಪೀಠಕ್ಕೆ ತಿಳಿಸಿದೆ.
ನವದೆಹಲಿ (ಏ.12): ಯಮುನಾ ನದಿ ತಟ ಹಾಳಾಗಲು ಶ್ರೀ ಶ್ರೀ ರವಿಶಂಕರ್ ಗುರೂಜಿಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೇ ಕಾರಣವೆಂದು ರಾಷ್ಟ್ರೀಯ ಹಸಿರು ಪೀಠವು ನೇಮಿಸಿದ್ದ ಸಮಿತಿಯು ಹೇಳಿದೆ.
ಕಳೆದ ವರ್ಷ ಮಾರ್ಚ್’ನಲ್ಲಿ ಯಮುನಾ ನದಿ ತಟದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿತ್ತು. ಯಮುನಾ ನದಿ ತಟದ ಪುನರ್ನಿರ್ಮಾಣಕ್ಕೆ ರೂ.13.29 ಕೋಟಿ ರೂ. ಬೇಕಾಗುವುದು ಹಾಗೂ ಹತ್ತು ವರ್ಷಗಳ ಅವಧಿ ತಗಲುವುದು ಎಂದು ಸಮಿತಿಯು ಹಸಿರು ಪೀಠಕ್ಕೆ ತಿಳಿಸಿದೆ.
3 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಯಮುನಾ ತಟಕ್ಕೆ ಭಾರೀ ಹಾನಿಯಾಗಿರುವ ಹಿನ್ನೆಲೆಯಲ್ಲಿ ಹಸಿರು ಪೀಠವು ರವಿಶಂಕರ್ ಗುರೂಜಿ ಸಂಸ್ಥೆಗೆ ರೂ. 5 ಕೋಟಿ ಮಧ್ಯಂತರ ದಂಡವನ್ನು ವಿಧಿಸಿತ್ತು. ಆದರೆ ಸಂಸ್ಥೆಯು. 4.75 ಕೋಟಿ ರೂ.ವನ್ನು ಪಾವತಿಸಿದೆ.