Asianet Suvarna News Asianet Suvarna News

ಅನುರಾಗ್ ತಿವಾರಿ ನಿಗೂಡ ಸಾವಿನ ಪ್ರಕರಣದ ತನಿಖೆ ಚುರುಕು

ಅನುರಾಗ್ ತಿವಾರಿ ನಿಗೂಡ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದೆ. ಯುಪಿಎಸ್​ಐಟಿ ತಂಡ ಬೆಂಗಳೂರಿಗೆ ಬಂದು ಪ್ರಕರಣದ ಸಾಕ್ಷ್ಯಗಳಿಗೆ ಹುಡುಕಾಟ ನಡೆಸುತ್ತಿದೆ. ಅನುರಾಗ್ ತಿವಾರಿ​​ ಕೆಲಸ ಮಾಡುತ್ತಿದ್ದ ಕಚೇರಿಯ ದಾಖಲೆಗಳ ಪರಿಶೀಲನೆ ನಡೆಸಿದ್ದು, ಅವರ ಸಹೋದರ ವ್ಯವಸ್ಯೆಯ ಬಗ್ಗೆ ಹಲವು ಆರೋಪ ಮಾಡಿದ್ದಾರೆ.

Anurag Tiwari Murder Investigation procees going on Fastly
  • Facebook
  • Twitter
  • Whatsapp

ಬೆಂಗಳೂರು (ಜೂ.01): ಅನುರಾಗ್ ತಿವಾರಿ ನಿಗೂಡ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದೆ. ಯುಪಿಎಸ್​ಐಟಿ ತಂಡ ಬೆಂಗಳೂರಿಗೆ ಬಂದು ಪ್ರಕರಣದ ಸಾಕ್ಷ್ಯಗಳಿಗೆ ಹುಡುಕಾಟ ನಡೆಸುತ್ತಿದೆ. ಅನುರಾಗ್ ತಿವಾರಿ​​ ಕೆಲಸ ಮಾಡುತ್ತಿದ್ದ ಕಚೇರಿಯ ದಾಖಲೆಗಳ ಪರಿಶೀಲನೆ ನಡೆಸಿದ್ದು, ಅವರ ಸಹೋದರ ವ್ಯವಸ್ಯೆಯ ಬಗ್ಗೆ ಹಲವು ಆರೋಪ ಮಾಡಿದ್ದಾರೆ.

ಉತ್ತರ ಪ್ರದೇಶದಿಂದ ಬಂದ ವಿಶೇಷ ತನಿಖಾ ತಂಡ ಆಹಾರ ಇಲಾಖೆ ಆಯುಕ್ತರ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು. ಅನುರಾಗ ತಿವಾರಿ ಸಹೋದರ ಮಾಯಂಕ ತಿವಾರಿ ಆರೋಪ ಮಾಡಿದಂತೆ ಹಲವು ಹಗರಣಗಳು ನಡೆದಿದ್ದು, ತನಿಖೆಗೆ ಮುಂದಾಗಿದ್ದೇ ಕೊಲೆಗೆ ಕಾರಣ ಎಂದು ಆರೋಪಿಸಿದರು. ಮಯಾಂಕ್​ ಆರೋಪದ ಮೇಲೆ ಅನುರಾಗ್​​ ಕೆಲಸದ ಸಂಪೂರ್ಣ ವಿವರಗಳನ್ನು  ಅಧಿಕಾರಿಗಳು ಪಡೆದುಕೊಂಡರು. ಇದೇ ವೇಳೆ ಮಯಾಂಕ್​​ ಹಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಉತ್ತರ ಬಂದಿಲ್ಲ. ಅನುರಾಗ್ ಹುಟ್ಟಿದಾಗಿನಿಂದ ವಾಕಿಂಗ್ ಹೋದವರಲ್ಲ. ಅನುರಾಗ್ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಸಿಕ್ಕಿದೆ. ಪೊಲಿಸರಿಗೆ ಅನುರಾಗ್​​ ಮೊಬೈಲ್​​ ಸಿಕ್ಕಾಗ ಅದರಲ್ಲಿದ್ದ ಮೆಸೆಜ್​​ ಹಾಗೂ ಡಾಟಾ ಡಿಲೀಟ್​ ಆಗಿದ್ದಲ್ಲದೆ ಲಾಕ್ ಆಗಿತ್ತು. ಇದು ಕೊಲೆಯಲ್ಲದೇ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಅನುರಾಗ್ ಡೆಡ್​ಬಾಡಿ ಸಿಕ್ಕಾಗ ಪ್ಯಾಂಟ್ನಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರು. ಕತ್ತಿನಲ್ಲಿ ಗಾಯದ ಗುರುತುಗಳು ಇದ್ದವು. ಯಾರೋ ಕತ್ತು ಹಿಸುಕಿದಂತೆ ಮಾರ್ಕ್’ಗಳಿವೆ. ಕಳೆದ 10 ವರ್ಷಗಳಲ್ಲಿ ಕೆಲವೇ ಬಾರಿ ಮಾತ್ರ ಉತ್ತರ ಪ್ರದೇಶಕ್ಕೆ ಬಂದಿದ್ರು. 10 ವರ್ಷದಲ್ಲಿ ರಜೆಗಳನ್ನೇ ಪಡೆದಿರಲಿಲ್ಲ. ಆದರೂ ಮೂರು ತಿಂಗಳಿಂದ ರಜೆಗಾಗಿ ಪರಿತಪಿಸುತ್ತಿದ್ದು, ಪದೇ ಪದೇ ಕ್ಯಾನ್ಸಲ್ ಮಾಡಿದ್ದರು. ಅಲ್ಲದೆ ಸಂಬಳವನ್ನೂ ತಡೆಹಿಡಿದಿದ್ದರು.  ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಒಂದು ವಾರದ ನಂತರ ನಾಲ್ಕು ತಿಂಗಳ ಸಂಬಳ ನೀಡಲಾಗಿತ್ತು. ಎರಡು ಬಾರಿ ನನಗೆ ಕರೆ ಮಾಡಿ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದ. ಇಲ್ಲಿಯ ವ್ಯವಸ್ಥೆ ಸರಿಯಿಲ್ಲ ಎಂದು ಅನುರಾಗ್​​ ಪದೇ ಪದೇ ಹೇಳುತ್ತಿದ್ದ ಮಯಾಂಕ್​ ಆರೋಪಿಸಿದ್ದಾರೆ.

ಸದ್ಯ ಅನುರಾಗ್​​ ಕೆಲಸ ಮಾಡುತ್ತಿದ್ದ ಕಚೇರಿಯ ದಾಖಲೆಗಳ ಪರಿಶೀಲನೆ ನಡೆಸಿರುವ ಎಸ್​​ಐಟಿ ನಾಳೆ ಸಿಎಂ ಭೇಟಿಯಾಗುವ ಸಾದ್ಯತೆ ಇದೆ. ಸಿಬಿಐ ಸರಿಯಾಗಿ ತನಿಖೆ ನಡೆಸಿದರೆ ಸತ್ಯ ಬಯಲಿಗೆ ಬರಲಿದೆ. ನನ್ನ ಸಹೋದರ ಕೊಲೆಯಾಗಿದ್ದೇನೆ. ಭ್ರಷ್ಟ ವ್ಯವಸ್ಥೆ ಸಹೋದರನ್ನು ಬಲಿ ತಗೆದುಕೊಂಡಿದ್ದು, ನ್ಯಾಯ ಸಿಗುವವರೆಗೂ ಮಯಾಂಕ್​ ಹೋರಾಡುವ ಸೂಚನೆ ನೀಡಿದ್ದಾರೆ.

 

 

 

Follow Us:
Download App:
  • android
  • ios