ನನ್ನ ಮಗನನ್ನು ಸಾಯಿಸಿದ್ದು ಸಿಎಂ ಸಿದ್ದರಾಮಯ್ಯ: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ತಂದೆ ಗಂಭೀರ ಆರೋಪ

Anurag Tiwari Father Blame on CM Siddaramaiah for His son Death
Highlights

ನನ್ನ ಮಗನ ಸಾವಿಗೆ ನ್ಯಾಯ ಬೇಕು. ‘ಸಿಬಿಐ ತನಿಖೆ ಬಗ್ಗೆ ಭರವಸೆ ಮೂಡುತ್ತಿಲ್ಲ’ ಎಂದು ಅನುರಾಗ್ ತಿವಾರಿ ಅವರ ತಂದೆ ಬಿ.ಎನ್.ತಿವಾರಿ ಆರೋಪಿಸಿದ್ದಾರೆ.

ಲಖನೌ(ಮಾ.08): ರಾಜ್ಯದ ಐಎಎಸ್ ಅಧಿಕಾರಿ ಅನುರಾಗ್​ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗನ ಹತ್ಯೆಯ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ. ನನ್ನ ಮಗನ ಶಿಸ್ತಿನ ಆಡಳಿತ ಸಹಿಸದ ಮುಖ್ಯಮಂತ್ರಿ ಕೊಂದವರಿಗೆ ಕುಮ್ಮಕ್ಕು ನೀಡಿದ್ದಾರೆ. ‘ನನ್ನ ಮಗ ಪ್ರಾಮಾಣಿಕನಾಗಿದ್ದ ಕಾರಣ ಹತ್ಯೆಯಾಗಿದ್ದಾನೆ’. ‘ನನ್ನ ಮಗನ ಸಾವಿಗೆ ನ್ಯಾಯ ಬೇಕು. ‘ಸಿಬಿಐ ತನಿಖೆ ಬಗ್ಗೆ ಭರವಸೆ ಮೂಡುತ್ತಿಲ್ಲ’ ಎಂದು ಅನುರಾಗ್ ತಿವಾರಿ ಅವರ ತಂದೆ ಬಿ.ಎನ್.ತಿವಾರಿ ಆರೋಪಿಸಿದ್ದಾರೆ.

ರಾಜ್ಯದ ಆಹಾರ ಇಲಾಖೆ ಆಯುಕ್ತರಾಗಿದ್ದ ಅನುರಾಗ್ ತಿವಾರಿ(36) 2017ರ ಮೇ 17 ರಂದು ಉತ್ತರಪ್ರದೇಶದ ಲಖ್ನೋದಲ್ಲಿ ರಸ್ತೆ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದರು. ಉತ್ತರ ಪ್ರದೇಶ ಸರ್ಕಾರ  ಪ್ರಕರಣವನ್ನು ಸಿಬಿಐ'ಗೆ ವಹಿಸಿತ್ತು.

loader