ನಿನ್ನೆಯಷ್ಟೇ ವಿದೇಶಿ ಮಹಿಳೆಯೊಂದಿಗೆ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಅಶ್ಲೀಲವಾಗಿ ನಡೆದುಕೊಂಡಿದ್ದ. ಇಂದು ಮತ್ತೇ ಇಂತಹದ್ದೇ ಕಾಮುಕನ ಚೇಷ್ಠೆಯೊಂದು ನಡೆದಿದೆ.

ಹಂಪಿ(ನ.05): ವಿಶ್ವಪ್ರಸಿದ್ಧ ಹಂಪಿ‌ ಉತ್ಸವದಲ್ಲಿ ಮತ್ತೆ ಕಾಮುಕರ ಚೇಷ್ಠೆ ಮುಂದುವರೆದಿದೆ.

ನಿನ್ನೆಯಷ್ಟೇ ವಿದೇಶಿ ಮಹಿಳೆಯೊಂದಿಗೆ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಅಶ್ಲೀಲವಾಗಿ ನಡೆದುಕೊಂಡಿದ್ದ. ಇಂದು ಮತ್ತೇ ಇಂತಹದ್ದೇ ಕಾಮುಕನ ಚೇಷ್ಠೆಯೊಂದು ನಡೆದಿದೆ.

ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಶೆಡ್'ನಲ್ಲಿ ಮಹಿಳೆಯರು ಮಲಗಿದ್ದರು. ಈ ವೇಳೆಯಲ್ಲಿ ಕಾಮುಕನೋರ್ವ, ಮಹಿಳೆಯರ ಪಕ್ಕದಲ್ಲಿ ಮಲಗಿದ್ದ. ಇದನ್ನು ಗಮನಿಸಿದ ಮಹಿಳೆಯರು ಕಿರುಚಾಡಿದ್ದಾರೆ ಕೂಡಲೇ ಸ್ಥಳೀಯ ವ್ಯಾಪಾರಸ್ಥರು ಕಾಮುಕನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಸತತವಾಗಿ ಮಹಿಳೆಯರ ಮೇಲೆ ಕಾಮುಕರ ಚೇಷ್ಠೆಗಳು ನಡೆಯುತ್ತಿವೆ. ಆದರೆ ಪೊಲೀಸ್ ಇಲಾಖೆಯವರು ಯಾವುದೇ ಗಸ್ತು ತಿರುಗುವ ಕೆಲಸವನ್ನು ಮಾಡುತ್ತಿಲ್ಲ.‌ ಇದರಿಂದಾಗಿ ಕಾಮುಕರ ಚೇಷ್ಠೆಗಳು ನಡೆಯುತ್ತಿವೆ ಎನ್ನುವುದು ಸ್ಥಳಿಯರ ಮಾತು.