ಬಿಡದಿ ಆಶ್ರಮದಲ್ಲಿ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ನೀಡದೇ ನಿತ್ಯಾನಂದ ವಂಚಿಸಿದ್ದಾನೆ ಅಂತಾ ಆರೋಪಿಸಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು(ಜ.28): ಬಿಡದಿ ಆಶ್ರಮದಲ್ಲಿ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ನೀಡದೇ ನಿತ್ಯಾನಂದ ವಂಚಿಸಿದ್ದಾನೆ ಅಂತಾ ಆರೋಪಿಸಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ನೆಲಕ್ಕೆ ಕಲ್ಲು ಹಾಕುವುದು, ಪೈಂಟಿಂಗ್, ಕ್ರೇನ್, ಜೆಸಿಬಿ, ಕಾರ್ಪೆಂಟರಿ, ಹೌಸ್ ಕೀಪಿಂಗ್ ಲೇಬರ್ ಸೇರಿದಂತೆ ಹಲವು ಕೆಲಸ ಮಾಡಿಸಿಕೊಂಡಿದ್ದ ಕೆಲಸಗಾರರಿಗೆ ಆಶ್ರಮದೀಮದ ಹಣ ಸಂಧಾಯವಾಗಿಲ್ಲ. ಇನ್ನು ಕಳೆದ 2 ತಿಂಗಳಿಂದ ಕೆಲಸ ಮಾಡಿಸಿಕೊಂಡಿರುವ ಆಶ್ರಮದ ಆಡಳಿತ ಮಂಡಳಿ ಸುಮಾರು ಒಂದು ಕೋಟಿ ಹಣ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಆಶ್ರಮದ ಜ್ಞಾನಮೂರ್ತಿ, ಯೋಗಪ್ರಿಯ, ಹಂಸ ಸ್ವಾಮಿ, ಮತ್ತಿತರರಿಂದ ಕೆಲಸಗಾರರಿಗೆ ವಂಚನೆ ಮಾಡಲಾಗಿದೆ.
ಇನ್ನು ಕೂಲಿ ಹಣ ಕೇಳಲು ಹೋದ ಕಾರ್ಮಿಕರ ಮೇಲೆ ಆಶ್ರಮದ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಕೂಲಿ ಹಣ ಸಿಗದ ಕಾರ್ಮಿಕರು ಬಿಡದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆದ್ರೆ ಪೊಲೀಸರು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ ಅನ್ನೋದು ಕೂಲಿಕಾರರ ಆರೋಪ. ಹೀಗಾಗಿ ನೊಂದ ಕಾರ್ಮಿಕರು ಪೊಲೀಸ್ ಠಾಣೆ ಎದುರು ಧರಣಿ ಆರಂಭಿಸಿದ್ದಾರೆ.
