ಯೂನಿಯನ್ ಬ್ಯಾಂಕ್’ಗೆ ಕೋಟ್ಯಾಂತರ ರೂ. ವಂಚನೆ ಟೋಟೆಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಹೈದರಾಬಾದಿನ ಖಾಸಗಿ ಕಂಪನಿಯಿಂದ ವಂಚನೆ

ಹೈದರಾಬಾದ್: ನೀರವ್ ಮೋದಿ ಬ್ಯಾಂಕ್ ಹಗರಣ ಬಯಲಾದ ಬೆನ್ನಲ್ಲೇ ಬೇರೆ ಬೇರೆ ಬ್ಯಾಂಕುಗಳಲ್ಲಿ ನಡೆದ ಹಗರಣಗಳು ಬಯಲಿಗೆ ಬರುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದ ಹಗರಣವೊಂದು ಹೊರಬಿದ್ದಿದೆ. 

ಟೋಟೆಮ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಹೈದರಾಬಾದಿನ ಖಾಸಗಿ ಕಂಪನಿಯೊಂದು ಬ್ಯಾಂಕಿಗೆ ₹313.84 ಕೋಟಿ ವಂಚಿಸಿರುವ ಬಗ್ಗೆ ಸಿಬಿಐ ಪ್ರಕರಣ ದಾಖಲಿಸಿದೆ. ಇದನ್ನು 30 ಜೂನ್ 2012 ರಂದು ಎನ್’ಪಿಏ ಎಂದು ಘೋಷಿಸಲಾಗಿತ್ತು ಎಂದು ತಿಳಿದು ಬಂದಿದೆ.

ಒಟ್ಟು 8 ಬ್ಯಾಂಕುಗಳಿಗೆ 1394.43 ಕೋಟಿ ಹಣವನ್ನು ಸಾಲ ಬಾಕಿಯಿದೆಯೆಂದು ಹೇಳಲಾಗಿದೆ.

ಕಂಪನಿಯ ನಿರ್ದೇಶಕರಾಗಿರುವ ಟೋಟೆಂಪುಡಿ ಸಲಲಿತ್ ಹಾಗೂ ಟೋಟೆಂಪುಡಿ ಕವಿತಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.