ಮಂಡ್ಯದಲ್ಲಿ ಬಸ್ ಅಪಘಾತವಾಗಿ 30 ಮಂದಿ ಪ್ರಾಣ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೆರಡು ಬಸ್ ಅಪಘಾತವಾಗಿದೆ. 

ಕುಶಾಲನಗರ/ಯಲ್ಲಾಪುರ: ಮಂಡ್ಯ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಬಸ್ ದುರಂತ ಮರೆಯುವ ಮುನ್ನವೇ ರಾಜ್ಯದ ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿ ಸೋಮವಾರ ಮತ್ತೆರಡು ಪ್ರತ್ಯೇಕ ಬಸ್ ಅಪಘಾತಗಳು ನಡೆದಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆ ಸಮಾರಂಭಕ್ಕೆಂದು ಹೊರಟಿದ್ದ ಎರಡು ಬಸ್‌ಗಳು ಚಾಲಕರ ನಿಯಂತ್ರಣ ಪಟ್ಟಿ ಪಲ್ಟಿಯಾಗಿದ್ದು ಅದೃಷ್ಟವಶಾತ್ ಪ್ರಾಣಾ ಪಾಯವಾಗಿಲ್ಲ. ಹಾಸನ-ಮಡಿಕೇರಿ ಮುಖ್ಯ ರಸ್ತೆಯ ಕೊಣನೂರು ಪಟ್ಟಣದ ಉಳ್ಳೇನಹಳ್ಳಿ ಸಮೀಪದ ಭತ್ತದ ಗದ್ದೆಗೆ ಸೋಮವಾರ ಮಧ್ಯಾಹ್ನ ಖಾಸಗಿ ಬಸ್ ಉರುಳಿ ಬಿತ್ತು. 

ಬಸ್‌ನಲ್ಲಿದ್ದ 46 ಜನರಿಗೆ ಗಾಯಗಳಾಗಿದ್ದು ಅವರಲ್ಲಿ 12 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಮತ್ತೊಂದು ಬಸ್ ಅಪಘಾತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ. ಬೇಡ್ತಿ ನದಿ ಸೇತುವೆಯ ತಿರುವಿನಲ್ಲಿ ಬಸ್ಸು ಉರುಳಿ 13 ಪ್ರಯಾಣಿಕರು ಗಾಯಗೊಂಡಿದ್ದಾರೆ.