ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ಏರ್ಪಡಿಸಿದ್ದ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಅಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಬಿಪಿಎಲ್ ಕಾರ್ಡ್'ದಾರರಿಗೆ ತಲಾ ವ್ಯಕ್ತಿಗೆ ನೀಡುತ್ತಿದ್ದ 5 ಕೆ.ಜಿ ಅಕ್ಕಿ ಸಾಲುತ್ತಿಲ್ಲ, ಹೀಗಾಗಿ ಎರಡು ಕೆಜಿ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು (ಮಾ.30): ಅನ್ನಭಾಗ್ಯ ಯೋಜನೆಯಿಂದ ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ಏರ್ಪಡಿಸಿದ್ದ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಅಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಬಿಪಿಎಲ್ ಕಾರ್ಡ್'ದಾರರಿಗೆ ತಲಾ ವ್ಯಕ್ತಿಗೆ ನೀಡುತ್ತಿದ್ದ 5 ಕೆ.ಜಿ ಅಕ್ಕಿ ಸಾಲುತ್ತಿಲ್ಲ, ಹೀಗಾಗಿ ಎರಡು ಕೆಜಿ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಅನ್ನಭಾಗ್ಯವನ್ನು ಪ್ರತಿಪಕ್ಷಗಳು ಟೀಕಿಸುತ್ತಿವೆ, ಅವರಿಗೆಲ್ಲ ನೀವೇ ಉತ್ತರಿಸಬೇಕು ಎಂದು ಸಭಿಕರಿಗೆ ಸಿ.ಎಂ ಕರೆ ನೀಡಿದರು.
ಈ ಮೊದಲು ಮಾತನಾಡಿದ ಆಹಾರ ಖಾತೆ ಸಚಿವ ಯು.ಟಿ. ಖಾದರ್, ಸಂಘ ಸಂಸ್ಥೆಗಳಿಗೂ ಅನ್ನ ಭಾಗ್ಯ ಯೋಜನೆ ವಿಸ್ತರಣೆಯಾಗಿದೆ. ಉಚಿತ ಊಟ ವಸತಿ ಕೊಡುವ ಸಂಘ ಸಂಸ್ಥೆಗಳಿಗ ಪ್ರತಿಯೊಬ್ಬರಿಗೂ 15 ಕೆಜಿ ಅಕ್ಕಿ ನೀಡಲಾಗುವುದು ಎಂದು ತಿಳಿಸಿದ್ದಾರೆ.