ಶ್ರೀ ದೇವಿ ನಿಧನದ ಬಗ್ಗೆ ಅನಿಲ್ ಕಪೂರ್ ಬರೆದ ಪತ್ರದಲ್ಲೇನಿದೆ ..?

First Published 2, Mar 2018, 12:41 PM IST
Anil Kapoor Pens A Letter For Mumbai Police
Highlights

ಭಾರತದ ಮಹಿಳಾ ಸೂಪರ್ ಸ್ಟಾರ್ ಎಂದೇ ಖ್ಯಾತರಾದ ಶ್ರೀ ದೇವಿ ನಿಧನರಾಗಿದ್ದು, ಅವರ ಅಭಿಮಾನಿಗಳಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ನಿಧನರಾಗಿ 2ನೇ ದಿನಕ್ಕೆ ನಿರ್ದೇಶಕ ರಾಂ ಗೋಪಾಲ್ ವರ್ಮಾ ಪತ್ರ ಬರೆದು ತಮ್ಮ ನೋವನ್ನು ತೋಡಿಕೊಂಡಿದ್ದರು.

ಮುಂಬೈ : ಭಾರತದ ಮಹಿಳಾ ಸೂಪರ್ ಸ್ಟಾರ್ ಎಂದೇ ಖ್ಯಾತರಾದ ಶ್ರೀ ದೇವಿ ನಿಧನರಾಗಿದ್ದು, ಅವರ ಅಭಿಮಾನಿಗಳಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ನಿಧನರಾಗಿ 2ನೇ ದಿನಕ್ಕೆ ನಿರ್ದೇಶಕ ರಾಂ ಗೋಪಾಲ್ ವರ್ಮಾ ಪತ್ರ ಬರೆದು ತಮ್ಮ ನೋವನ್ನು ತೋಡಿಕೊಂಡಿದ್ದರು.

ಬಳಿಕ  ಅವರ ಪತಿಯು ತಮ್ಮ ಪತ್ನಿಯ ಪ್ರೀತಿಯ ಬಗ್ಗೆ ಪತ್ರವನ್ನು ಬರೆದು ತಮ್ಮ ನೋವನ್ನು ಹೊರಹಾಕಿದ್ದರು. ಇದೀಗ ಶ್ರೀ ದೇವಿ ಅವರ ಮೈದುವ ಬೋನಿ ಕಪೂರ್ ಸಹೋದರ ಅನಿಲ್ ಕಪೂರ್ ಕೂಡ ಇದೀಗ ಪತ್ರವನ್ನು ಬರೆದಿದ್ದಾರೆ.

ಈ ವೇಳೆ ನಮ್ಮ ಸುತ್ತ ಒಂದು ರಕ್ಷಣಾತ್ಮಕತೆ ನಿರ್ಮಾಣ ಮಾಡಿಕೊಟ್ಟಿದ್ದಕ್ಕೆ  ಸ್ನೇಹಿತರೇ ನಿಮಗೆಲ್ಲರಿಗೂ ಕೂಡ ಧನ್ಯವಾದ.  ಅಲ್ಲದೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದ ವೇಳೆಯೂ ಕೂಡ ಶಾಂತಿ ಸುವ್ಯವಸ್ಥೆ ಕಾಪಾಡಿದ್ದ ಮುಂಬೈ ಪೊಲೀಸರಿಗೂ ಕೂಡ ಧನ್ಯವಾದ.

ನಿಮ್ಮೆಲ್ಲರ ಹಾರೈಕೆ ಪ್ರೀತಿಗೆ ನಾವು ಚಿರ ಋಣಿ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಂಬೈ ಪೊಲೀಸರು ಕೂಡ ನಾವು ಸದಾ ಕಾಲ ನಿಮ್ಮ ಕುಟುಂಬದೊಂದಿಗೆ ಇದ್ದೇವೆ ಎಂದು ಮರು ಟ್ವೀಟ್ ಮಾಡಿದ್ದಾರೆ.

loader