ಪತಿಯ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬಳು, ತನ್ನ ಗಂಡನನ್ನು ಆನ್‌ಲೈನಲ್ಲಿ ಮಾರಾಟ ಮಾಡಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.

ಹಳೇ ವಸ್ತುಗಳಿಗೆ ಒಳ್ಳೊಳ್ಳೇ ಕ್ಯಾಪ್ಷನ್‌ ಹಾಕಿ ಇ-ಬೇ ಅಥವಾ ಒಎಲೆಕ್ಸ್‌ ಎಂಬ ಆನ್‌ಲೈನ್‌ ಮಾರುಕಟ್ಟೆಗಳ ಮೂಲಕ ಮಾರಾಟ ಮಾಡೋದು ಆಶ್ಚರ್ಯಕರ ಸಂಗತಿಯೇನಲ್ಲ ಬಿಡಿ.

ಆದ್ರೆ, ಜರ್ಮನಿಯಲ್ಲಿ ತನ್ನ ಗಂಡನ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬರು ‘ಬಳಕೆಯಾದ ಪತಿ ಮಾರಾಟಕ್ಕಿದ್ದಾನೆ’ ಎಂಬ ಕ್ಯಾಪ್ಷನ್‌ನೊಂದಿಗೆ ಇ-ಬೇ ವೆಬ್‌ಸೈಟಿನಲ್ಲಿ ತನ್ನ ಗಂಡನ ಫೋಟೋವನ್ನು ಪ್ರಕಟಿಸಿದ್ದಾಳೆ. ‘ನನ್ನ ಗಂಡನ ಋುಣಾತ್ಮಕ ಚಿಂತನೆಗಳಿಂದ ನಾನು ಸಾಕಷ್ಟುಬೇಸತ್ತಿದ್ದೇನೆ. ದಯವಿಟ್ಟು ನನ್ನ ಗಂಡ ಯಾರಿಗಾದರೂ, ಬೇಕಿದ್ದರೆ ಕರೆ ಮಾಡಿ’ ಎಂದು ತಿಳಿಸಿದ್ದಾಳೆ.

ತನ್ನ ಗಂಡನ ಖರೀದಿಗೆ ಹೆಚ್ಚು ಮಂದಿ ಉತ್ಸುಕ ತೋರಿದ್ದಾರೆ ಎಂದು ಆಕೆ ಹೇಳಿಕೊಂಡಿದ್ದಾಳೆ!