Asianet Suvarna News Asianet Suvarna News

ರಾಜ್ಯದಿಂದ ಕೇಂದ್ರದತ್ತ ತಿರುಗಿದ ಅಂಗನವಾಡಿ ಕಾರ್ಯಕರ್ತೆಯರ ಸಿಟ್ಟು

ಐಸಿಡಿಎಸ್‌ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಅನುದಾನ ಕಡಿಮೆ ಮಾಡಿರು ವುದನ್ನು ವಿರೋಧಿಸಿ ಸದ್ಯದಲ್ಲೇ ರಾಜ್ಯ ದಲ್ಲಿರುವ ಕೇಂದ್ರ ಸಚಿವರು, ಸಂಸದರ ಮನೆ ಮುಂದೆ ಧರಣಿ ಆರಂಭಿಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಹೇಳಿದ್ದಾರೆ.

Anganavadi Activists Are Now Against Central govt

ಬೆಂಗಳೂರು(ಎ.11):ಐಸಿಡಿಎಸ್‌ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಅನುದಾನ ಕಡಿಮೆ ಮಾಡಿರು ವುದನ್ನು ವಿರೋಧಿಸಿ ಸದ್ಯದಲ್ಲೇ ರಾಜ್ಯ ದಲ್ಲಿರುವ ಕೇಂದ್ರ ಸಚಿವರು, ಸಂಸದರ ಮನೆ ಮುಂದೆ ಧರಣಿ ಆರಂಭಿಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಹೇಳಿದ್ದಾರೆ.

ಅಂಗನವಾಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ರಾಜ್ಯ ಸರ್ಕಾರ ಖಂಡನಾ ನಿರ್ಣಯ ಕೈಗೊಳ್ಳಬೇಕಿದೆ. ಈ ಬಗ್ಗೆ ನಾವು ಸಲಹೆ ನೀಡಿದ್ದೇವೆ. ಇದರೊಂದಿಗೆ ಕೇಂದ್ರದ ವಿರುದ್ಧ ಹೋರಾಟ ರೂಪಿಸು ತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಸಭೆಯ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿದ್ದರೂ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿದೆ. ಆದರೆ ಕೇಂದ್ರ ಸರ್ಕಾರ ಈ ಹಿಂದೆ ನೀಡುತ್ತಿದ್ದ ಅನುದಾನವನ್ನೂ ಕಡಿಮೆ ಮಾಡಿದೆ. ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಕೇಂದ್ರವನ್ನು ಸಾಕಷ್ಟುಬಾರಿ ಒತ್ತಾಯಿಸಿದ್ದೇವೆ ಎಂದರು.

ಆದರೆ ಕೇಂದ್ರದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಷ್ಟೇ ಏಕೆ, ಕೇಂದ್ರ ಸಚಿವರೂ ಅಂಗನವಾಡಿ ಹೋರಾಟಗಾ ರರನ್ನು ಅಲಕ್ಷ್ಯ ಮಾಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆ ಅನುಷ್ಠಾನ ಮಾಡುವ ಅಂಗನವಾಡಿ ಕಾರ್ಯಕರ್ತೆ ಯರನ್ನು ಕೇಂದ್ರದವರೇ ನಿರ್ಲಕ್ಷ್ಯ ಮಾಡುತ್ತಿರುವುದು ದೊಡ್ಡ ಅನ್ಯಾಯ. ಆದ್ದರಿಂದ ಈ ವಿಚಾರವಾಗಿ ದೇಶದ ರಾಜಧಾನಿ ದೆಹಲಿಯಲ್ಲೂ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ವರಲಕ್ಷ್ಮಿ ತಿಳಿಸಿದರು.

Follow Us:
Download App:
  • android
  • ios