ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ಆರೋಪಿ ತಲೆಮರೆಸಿಕೊಳ್ಳಲು ಬೆಂಗಳೂರು ಪೊಲೀಸರು ನಿರ್ಲಕ್ಷವೇ ಎಂಬ ಆರೋಪ ಕೇಳಿ ಬಂದಿದೆ. ಫಿಂಗರ್ ಫ್ರಿಂಟ್ ಕಲೆಹಾಕುವಲ್ಲಿ ಸಾಕಷ್ಟು ದೋಷಗಳಾಗಿವೆ. ಆದರೆ, ಆಂಧ್ರ ಪೊಲೀಸರದ್ದೇ ತಪ್ಪು ಎನ್ನುತ್ತಿದ್ದಾರೆ ಬೆಂಗಳೂರು ಪೊಲೀಸರು. ಅಷ್ಟಕ್ಕೂ ಈ ಆರೋಪ ಪ್ರತ್ಯಾರೋಪಗಳೇನು...? ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು(ಫೆ.07): ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ಆರೋಪಿ ತಲೆಮರೆಸಿಕೊಳ್ಳಲು ಬೆಂಗಳೂರು ಪೊಲೀಸರು ನಿರ್ಲಕ್ಷವೇ ಎಂಬ ಆರೋಪ ಕೇಳಿ ಬಂದಿದೆ. ಫಿಂಗರ್ ಫ್ರಿಂಟ್ ಕಲೆಹಾಕುವಲ್ಲಿ ಸಾಕಷ್ಟು ದೋಷಗಳಾಗಿವೆ. ಆದರೆ, ಆಂಧ್ರ ಪೊಲೀಸರದ್ದೇ ತಪ್ಪು ಎನ್ನುತ್ತಿದ್ದಾರೆ ಬೆಂಗಳೂರು ಪೊಲೀಸರು. ಅಷ್ಟಕ್ಕೂ ಈ ಆರೋಪ ಪ್ರತ್ಯಾರೋಪಗಳೇನು...? ಇಲ್ಲಿದೆ ಸಂಪೂರ್ಣ ವಿವರ
2013ರ ನವೆಂಬರ್ 19ರಂದು ಬೆಂಗಳೂರಲ್ಲಿ ಕಾರ್ಪೊರೇಷನ್ ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬಾಕೆಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಪರಾರಿಯಾಗಿದ್ದ. ಆದರೆ ಘಟನೆ ನಡೆದ 3 ವರ್ಷಗಳ ಬಳಿಕ ಆಂಧ್ರದ ಮದನಪಲ್ಲಿಯಲ್ಲಿ ಆರೋಪಿ ಅರೆಸ್ಟಾಗಿದ್ದಾನೆ.. ಮಧುಕರ್ ರೆಡ್ಡಿ ಎಂಬಾತನನ್ನು ಬಂಧಿಸಲಾಗಿದೆ. ಇದೇ ವಿಚಾರ ಈಗ ಆಂಧ್ರ ಹಾಗೂ ಕರ್ನಾಟಕ ಪೊಲೀಸರ ಕೆಸರೆರಚಾಟಕ್ಕೆ ಕಾರಣವಾಗಿದೆ. ಘಟನೆ ನಡೆದ ದಿನ ಚಿತ್ತೂರು ಪೊಲೀಸರಿಗೆ ಬೆಂಗಳೂರು ಪೊಲೀಸರು ಕಳುಹಿಸಿದ್ದ ಪಿಂಗರ್ ಪ್ರಿಂಟ್ ಮ್ಯಾಚಾಗಿರಲಿಲ್ವಂತೆ. ಸರಿಯಾಗಿ ಪಿಂಗರ್ ಪ್ರಿಂಟ್ ಕಲೆಹಾಕಿದ್ದರೆ ಅವತ್ತೇ ಮಧುಕರ್ ರೆಡ್ಡಿ ಹಿಡಿಯಬಹುದಿತ್ತು ಎಂದು ಆಂಧ್ರ ಪೊಲೀಸರು ಆರೋಪಿಸಿದ್ದಾರೆ.
ಬೆಂಗಳೂರು ಪೊಲೀಸರಿಂದ ಪ್ರತ್ಯಾರೋಪ
ಅವತ್ತು ಬರಿಗೈಲಿ ವಾಪಾಸ್ ಬಂದ ಬೆಂಗಳೂರು ಪೊಲೀಸರು ಮಾತ್ರ ಆಂಧ್ರ ಪೊಲೀಸರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ. ಚಿತ್ತೂರು ಜೈಲಿನಲ್ಲಿ ಸಂಗ್ರಹಿಸಿದ್ದ ಪಿಂಗರ್ ಪ್ರಿಂಟ್'ನಲ್ಲೇ ದೋಷವಿತ್ತು. ಆಗ ಮ್ಯಾಚ್ ಆಗದ ಫಿಂಗರ್ ಪ್ರಿಂಟ್ ಈಗ ಹೇಗೆ ಮ್ಯಾಚ್ ಆಯ್ತು ಎಂದು ಬೆಂಗಳೂರು ಪೊಲೀಸರು ಮರು ಪ್ರಶ್ನಿಸಿದ್ದಾರೆ.
ಆಂಧ್ರ ಪೊಲೀಸರೋ ಅಥವಾ ಬೆಂಗಳೂರು ಪೊಲೀಸರೋ, ತಪ್ಪಾಗಿರೋದಂತೂ ಇಲ್ಲಿ ಎದ್ದು ಕಾಣುತ್ತಿದೆ. ಪ್ರತಿಷ್ಟೆಗೆ ಬಿದ್ದ ಎರಡು ರಾಜ್ಯದ ಪೊಲೀಸರು ಪರಸ್ಪರ ಕೆಸರು ಎರೆಚಾಡುತ್ತಿರುವುದು ಮಾತ್ರ ದುರಂತ.
