ಅಮರಾವತಿ[ಸೆ.19]: ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ ಬೋಟ್‌ ಮುಳುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೆ 6 ಶವಗಳನ್ನು ಪತ್ತೆ ಮಾಡಲಾಗಿದ್ದು, ದುರಂತದಲ್ಲಿ ಮೃತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

ಪತ್ತೆಯಾಗಿರುವ ಇನ್ನೂ 13 ಜನರ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಎಸ್‌ಡಿಆರ್‌ಎಫ್‌ ತಂಡ ಮುಂದುವರೆಸಿದೆ. ದುರಂತದಲ್ಲಿ 23 ಪುರುಷರು, 8 ಮಹಿಳೆಯರು ಮತ್ತು 3 ಮಕ್ಕಳು ಮೃತಪಟ್ಟಿದ್ದಾರೆ.

ಪ್ರವಾಸಿ ತಾಣವೊಂದಕ್ಕೆ 8 ಜನ ಸಿಬ್ಬಂದಿ ಒಳಗೊಂಡು 73 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಭಾನುವಾರ ಗೋದಾವರಿ ನದಿಯಲ್ಲಿ ಬಂಡೆಗಲ್ಲೊಂದಕ್ಕೆ ಡಿಕ್ಕಿ ಸಂಭವಿಸಿ ಮುಳುಗಿತ್ತು. ಈ ವೇಳೆ 73 ಪ್ರವಾಸಿಗರ ಪೈಕಿ 26 ಜನರು ಬದುಕುಳಿದಿದ್ದರು.