ಅಮರಾವತಿ[ಜು.30]: ಆಂಧ್ರಪ್ರದೇಶd ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಆಗಸ್ಟ್‌ನಲ್ಲಿ ಕ್ರೈಸ್ತರ ಪವಿತ್ರ ಸ್ಥಳ ಜೆರುಸಲೇಂಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ತಂದೆ ವೈ.ಎಸ್‌. ರಾಜಶೇಖರ್‌ ರೆಡ್ಡಿ ಅವರಂತೆ ಜಗನ್‌ ಮೋಹನ್‌ ರೆಡ್ಡಿ ಕೂಡ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ. ಆ.1ರಿಂದ 4ರವೆಗೆ ಜೆರುಸಲೇಂಗೆ ಅವರು ಕುಟುಂಬ ಸದಸ್ಯರ ಜೊತೆ ಜಗನ್‌ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಂದ್ರಬಾಬು ನಾಯ್ಡುರನ್ನು ಸೋಲಿಸಿ ಆಂಧ್ರ ಸಿಎಂ ಆದ ಜಗನ್ ಮೋಹನ್ ರೆಡ್ಡಿ ಈವರೆಗೆ ಹಲವಾರು ಜನೋಪಯೋಗಿ ಯೋಜನೆಗಳನ್ನು ಜರಿಗೊಳಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ