Asianet Suvarna News Asianet Suvarna News

2019ರಲ್ಲಿ 1996ರ ರಾಜಕೀಯ ಮರುಕಳಿಸುತ್ತಾ? ಅಂದೇನಾಗಿತ್ತು? ಎಚ್‌ಡಿಕೆ ಹಿಂಗ್ಯಾಕಂದ್ರು?

ಮುಂದಿನ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದು ಸಿಎಂ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದ್ರು. ಹೀಗೆ ಬಗ್ಗೆ ಕುಮಾರಸ್ವಾಮಿ ಏನು ಹೇಳಿದ್ರು? ನೋಡಿ

Andhra Pradesh CM Chandrababu Naidu meets CM HD Kumaraswamy in Bengaluru
Author
Bengaluru, First Published Nov 8, 2018, 7:59 PM IST

ಬೆಂಗಳೂರು, [ನ.08]: ಮುಂದಿನ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎಲ್ಲ ಜಾತ್ಯತೀತ ಪಕ್ಷಗಳ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿ ಹೇಳಿದರು.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭೇಟಿಯ ನಂತರ ಇಂದು [ಗುರುವಾರ] ಸುದ್ದಿಗಾರರೊಂದಿಗೆ ಮಾತನಾಡಿ ಎಚ್ ಡಿಕೆ, 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗಿನ ಕಾಲ 2019ರ ಲೋಕಸಭಾ ಚುನಾವಣೆಯಲ್ಲಿ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಉಳಿವಿಗಾಗಿ ನಾವೆಲ್ಲ ಒಂದಾಗಿ, ಮಹಾಘಟಬಂಧನ ನಡೆಸುತ್ತಿದ್ದೇವೆ. ದೇವೆಗೌಡರ ಹಿರಿತನ, ರಾಜಕೀಯ ಅನುಭವ, ಅವರಿಗೆ ಇರುವ ಹಿನ್ನೆಲೆಯನ್ನು ಗುರುತಿಸಿ ಈ ಒಗ್ಗಟ್ಟಿನ ನೇತೃತ್ವ ವಹಿಸಲು ಚಂದ್ರಬಾಬು ನಾಯ್ಡು ಕೇಳಿಕೊಂಡಿದ್ದಾರೆ. 

ರಾಷ್ಟ್ರದ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಶಕ್ತಿ ದೇವೇಗೌಡರಿಗೆ ಇದೆ. ನಾಯ್ಡು ಅವರು ಈಗಾಗಲೇ ರಾಹುಲ್​ ಗಾಂಧಿಯವರನ್ನೂ ಭೇಟಿ ಮಾಡಿದ್ದರು. ಜನವರಿಯಲ್ಲಿ ಮಮತಾ ಬ್ಯಾನರ್ಜಿಯವರು ಕೋಲ್ಕತಾದಲ್ಲಿ ಒಂದು ವೇದಿಕೆ ಸಿದ್ಧಪಡಿಸಿದ್ದು ಎಲ್ಲರಿಗೂ ಆಹ್ವಾನ ನೀಡಿದ್ದಾರೆ. ನಾವೆಲ್ಲ ಒಂದಾಗಿದ್ದೇವೆ ಎಂದರು.

Follow Us:
Download App:
  • android
  • ios