ಸೌತ್‌ವೆಲ್‌ನಲ್ಲಿರುವ ಐತಿಹಾಸಿಕ ಕ್ಯಾಥೆಡ್ರಲ್ ಪಂಥದ ಚರ್ಚ್‌ನಲ್ಲಿ ಆಕರ್ಷಣೀಯವಾದ ನೂರಾರು ಹಾಸ್ಯಮಯವಾದ ಕೆತ್ತನೆಯ ಚಿತ್ರಗಳಿವೆ.
ಲಂಡನ್(ಫೆ.4): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖವನ್ನೇ ಹೋಲುವ ವಾಸ್ತುಶಿಲ್ಪವೊಂದು ಇಂಗ್ಲೆಂಡ್ನ 700 ವರ್ಷಗಳ ಐತಿಹಾಸಿಕ ‘ಸೌತ್ವೆಲ್ ಮಿನ್ಸ್ಟರ್’ ಚರ್ಚ್ನಲ್ಲಿ ಪತ್ತೆಯಾಗಿದೆ. ಸೌತ್ವೆಲ್ನಲ್ಲಿರುವ ಐತಿಹಾಸಿಕ ಕ್ಯಾಥೆಡ್ರಲ್ ಪಂಥದ ಚರ್ಚ್ನಲ್ಲಿ ಆಕರ್ಷಣೀಯವಾದ ನೂರಾರು ಹಾಸ್ಯಮಯವಾದ ಕೆತ್ತನೆಯ ಚಿತ್ರಗಳಿವೆ. ಈ ಪೈಕಿ ಒಂದು ವಾಸ್ತುಶಿಲ್ಪ ಟ್ರಂಪ್ ಅವರ ಮುಖ ಮತ್ತು ಕೇಶಶೈಲಿಯನ್ನು ಹೋಲುತ್ತಿದ್ದು, ಈ ಪ್ರದೇಶವೀಗ ಜನರ ಹೊಸ ಆಕರ್ಷಣೆಯ ಕೇಂದ್ರವಾಗಿದೆ.
