ಅನಂತಕುಮಾರ್ ಅವರು ಲಾಲ್‌'ಬಾಗ್ ಇಳಿದು ಸಮೀಪದಲ್ಲಿರುವ ತಮ್ಮ ಮನೆಗೆ ಕಾಲ್ನಡಿಗೆಯಲ್ಲೇ ತೆರಳಿದರು. ಜೋಶಿ ಅವರು ಬನಶಂಕರಿಯಲ್ಲಿ ಇಳಿದು ಮನೆ ಸೇರಿದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆ ಮತ್ತು ಅದರಿಂದ ಉಂಟಾದ ವಾಹನಗಳ ಸಂಚಾರ ದಟ್ಟಣೆಯ ಪರಿಣಾಮ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರ ಮೇಲೂ ಉಂಟಾಯಿತು. ಬಿಜೆಪಿ ಕಚೇರಿಯಲ್ಲಿದ್ದ ಉಭಯ ನಾಯಕರು ಶೇಷಾದ್ರಿಪುರದ ಬಳಿಯ ಮೆಟ್ರೋ ನಿಲ್ದಾಣದಲ್ಲಿ ಕಾರು ಬಿಟ್ಟು ಮೆಟ್ರೋ ರೈಲು ಏರಿದರು. ಅನಂತಕುಮಾರ್ ಅವರು ಲಾಲ್'ಬಾಗ್'ನಲ್ಲಿ ಇಳಿದು ಅಲ್ಲೇ ಸಮೀಪದಲ್ಲಿರುವ ತಮ್ಮ ಮನೆಗೆ ಕಾಲ್ನಡಿಗೆಯಲ್ಲೇ ತೆರಳಿದರು. ಜೋಶಿ ಅವರು ಬನಶಂಕರಿಯಲ್ಲಿ ಇಳಿದು ಸುರಕ್ಷಿತವಾಗಿ ಮನೆ ಸೇರಿದರು ಎಂದು ಮೂಲಗಳು ತಿಳಿಸಿವೆ.
epaperkannadaprabha.com
