ಬಿಎಸ್’ವೈ ಅವಿಶ್ರಾಂತ ಚೇತನ –ರೈತ ಪರ ನಾಯಕ : ಅನಂತ್ ಕುಮಾರ್

Ananth Kumar Interview
Highlights

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ರಸಗೊಬ್ಬರ ಖಾತೆ ಅನಂತ್‌ ಕುಮಾರ್‌ ಅವರುಗಳು ರಾಜ್ಯ ಬಿಜೆಪಿಯ ಅಗ್ರ ಪಂಕ್ತಿಯ ನಾಯಕರು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ಯಡಿಯೂರಪ್ಪ ಅವರಿಗೀಗ 75ರ ಹರೆಯ. ಈ ಸಂದರ್ಭದಲ್ಲಿ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಕಳೆದ ಮೂರು ದಶಕಗಳಲ್ಲಿ ತಾವಿಬ್ಬರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಬಗೆ, ಯಡಿಯೂರಪ್ಪ ಅವರೊಂದಿಗಿನ ಒಡನಾಟ, ಹೋರಾಟದ ಹಾದಿಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಂತಿದೆ.

ಬಿಎಸ್’ವೈ ಅವಿಶ್ರಾಂತ ಚೇತನ –ರೈತ ಪರ ನಾಯಕ : ಅನಂತ್ ಕುಮಾರ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ರಸಗೊಬ್ಬರ ಖಾತೆ ಅನಂತ್‌ ಕುಮಾರ್‌ ಅವರುಗಳು ರಾಜ್ಯ ಬಿಜೆಪಿಯ ಅಗ್ರ ಪಂಕ್ತಿಯ ನಾಯಕರು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ಯಡಿಯೂರಪ್ಪ ಅವರಿಗೀಗ 75ರ ಹರೆಯ. ಈ ಸಂದರ್ಭದಲ್ಲಿ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಕಳೆದ ಮೂರು ದಶಕಗಳಲ್ಲಿ ತಾವಿಬ್ಬರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಬಗೆ, ಯಡಿಯೂರಪ್ಪ ಅವರೊಂದಿಗಿನ ಒಡನಾಟ, ಹೋರಾಟದ ಹಾದಿಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಂತಿದೆ.

ಅನಂತಕು​ಮಾರ್‌ ಮತ್ತು ಯಡಿ​ಯೂ​ರಪ್ಪ ಬಿಜೆ​ಪಿಯ ಹಕ್ಕ-ಬುಕ್ಕ ಅಂತಾರೆ. ನೀವು ಕರ್ನಾಟಕ ಬಿಜೆಪಿಯ ಅವಳಿ-ಜವಳಿ. ಇಂದು ಯಡಿಯೂರಪ್ಪನವರಿಗೆ 75ನೇ ಹುಟ್ಟುಹಬ್ಬ. ಹೇಗಿತ್ತು ಬಿಜೆಪಿ ಕಟ್ಟುವ ಆ ದಿನಗಳು?

ವಿಜ​ಯ​ನ​ಗ​ರ ಸಾಮ್ರಾ​ಜ್ಯದ ಸ್ಥಾಪಕರಾದ ಹಕ್ಕ-ಬುಕ್ಕ ಕಡು ​ಬ​ಡ​ತ​ನ​ ಹಿನ್ನೆ​ಲೆ​ಯಿಂದ ಬಂದ, ಕಾಡಿ​ನಲ್ಲಿ ದನ ಕಾಯಿಸುತ್ತಾ ಬೆಳೆ​ದ ಬಾಲ​ಕರು. ಆ ಇಬ್ಬ​ರಿಗೆ ಆಚಾರ್ಯ ವಿದ್ಯಾ​ರ​ಣ್ಯರು ತರ​ಬೇತಿ ನೀಡಿ ನಾಯಕರನ್ನಾಗಿ ರೂಪಿಸುತ್ತಾರೆ. ಮುಂದೆ ಆ ಇಬ್ಬರು ಬಾಲಕರೇ ವಿಜಯನಗರ ಸಾಮ್ರಾ​ಜ್ಯ​ ಕಟ್ಟು​ತ್ತಾರೆ. ಹಾಗಂತ ಆ ಕಥೆಗೆ ನಮ್ಮನ್ನು ಹೋಲಿ​ಸು​ವುದು ಬೇಡ. ನಾವು ಅಷ್ಟುಮಹಾನ್‌ ಅಲ್ಲ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ನಾವು ಜೋಡೆತ್ತುಗಳಂತೆ ದುಡಿದಿದ್ದೇವೆ. ಯಡಿಯೂರಪ್ಪನವರಂಥ ಜನನಾಯಕನ ಜೊತೆ ಸೇರಿ ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದದ್ದು ಈಗಲೂ ನನಗೆ ಹೆಮ್ಮೆಯ ವಿಷಯ. 1987ರಲ್ಲಿ ಯಡಿ​ಯೂ​ರಪ್ಪ ಅವರು ರಾಜ್ಯ ಬಿಜೆಪಿ ಅಧ್ಯ​ಕ್ಷರು. ಅದೇ ಇಸ್ವಿ​ಯಲ್ಲಿ ಎಬಿ​ವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯ​ದ​ರ್ಶಿ​ಯಾ​ಗಿದ್ದ ನನ್ನನ್ನು ರಾಜ್ಯ ಬಿಜೆ​ಪಿಯ ಪ್ರಧಾನ ಕಾರ್ಯ​ದ​ರ್ಶಿ​ಯಾಗಿ ನೇಮಿಸಲಾಯಿತು. ಆಗ ನಮ್ಮ ಪಕ್ಷದ ಒಟ್ಟಾರೆ ಮತ ಗಳಿಕೆ ಪ್ರಮಾಣ ಇದ್ದದ್ದು ಶೇ. 2.6 ಮಾತ್ರ. ಆ ಚುನಾ​ವ​ಣೆ​ಯಲ್ಲಿ ಬಿಜೆಪಿಯ ಇಬ್ಬರು ಮಾತ್ರ ಗೆದ್ದಿದ್ದರು. ಆ ಪೈಕಿ ವಸಂತ ಬಂಗೇರಾ ಪಕ್ಷ ತ್ಯಜಿ​ಸಿ​ದ್ದರು. ಉಳಿದ ಇನ್ನೊ​ಬ್ಬ ಶಾಸಕರೇ ಯಡಿ​ಯೂ​ರಪ್ಪ. ಅಲ್ಲಿಂದ ಆರಂಭವಾದ ನಮ್ಮ ದುಡಿತ ಈಗಲೂ ಮುಂದುವರಿದಿದೆ. ನನ್ನ ಸಹವರ್ತಿ ಹಾಗೂ ಜನನಾಯಕ ಯಡಿಯೂರಪ್ಪನವರಿಗೆ 75ನೇ ಹುಟ್ಟುಹಬ್ಬದ ಶುಭಾಶಯಗಳು.

ನಿಮ್ಮ ಈ ಮೂರು ದಶ​ಕಗಳ ಹಾದಿ ಹೇಗಿತ್ತು?

1987ರಲ್ಲಿ ರಾಜ್ಯಕ್ಕೆ ಬಂದ ನಾನು ಹಾಗೂ ರಾಜ್ಯಾ​ಧ್ಯ​ಕ್ಷ​ರಾ​ಗಿದ್ದ ಯಡಿ​ಯೂ​ರಪ್ಪ ಪುನಃಶ್ಚ ಹರಿವೋಂ ಅಂತ ಕೆಲಸ ಶುರು ಮಾಡಿ​ದೆವು. (ಇದು ಸ್ವಾತಂತ್ರ ಸಂಗ್ರಾ​ಮದ ವೇಳೆ ಮಂಡಾಲ ಜೈಲಿ​ನಿಂದ ಹೊರ ಬಂದ ತಿಲಕ್‌ ಅವರು ತಮ್ಮ ಕೇಸರಿ ಪತ್ರಿ​ಕೆ​ಯಲ್ಲಿ ಬರೆದ ಮೊದಲ ಸಂಪಾ​ದ​ಕೀ​ಯದ ಶೀರ್ಷಿಕೆ. ಇದ​ರರ್ಥ ಮತ್ತೆ ಹೋರಾಟ ಆರಂಭ.) ಇದಾದ ನಂತರ 1991ರ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ನಾವು ನಾಲ್ಕು ಲೋಕ​ಸಭಾ ಸೀಟು ಗಳಿ​ಸಿ​ದೆವು ಹಾಗೂ ಪಕ್ಷದ ವೋಟ್‌ ಶೇರ್‌ 28.6ಕ್ಕೆ ಏರಿತ್ತು. ಅಂದರೆ, ಶೇ. 2.6 ಇದ್ದ ಬಿಜೆ​ಪಿಯ ಮತ​ಗ​ಳಿಕೆ ಪ್ರಮಾಣ ನಾವಿಬ್ಬರು ಜತೆ​ಗೂ​ಡಿದ ಕೆಲವೇ ವರ್ಷ​ದಲ್ಲಿ 28.6ಕ್ಕೇರಿತ್ತು. ಇದನ್ನು, ಅಂದು ಪ್ರಖ್ಯಾತ ಪತ್ರ​ಕರ್ತ ಪ್ರಣಯ್‌ ರಾಯ್‌ ಅವರು, ದೇಶದ ಇತಿ​ಹಾ​ಸದ ಅತಿ ದೊಡ್ಡ ವೋಟ್‌ ಸ್ವಿಂಗ್‌ ಎಂದು ಬಣ್ಣಿ​ಸಿ​ದ್ದರು. ಅನಂತರ ನಾಗಾ​ಲೋಟ ಆರಂಭ​ವಾ​ಯಿತು. 1994ರ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ 40 ಸೀಟು, 1996ರ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಆರು ಲೋಕ​ಸಭಾ ಸ್ಥಾನ ದೊರ​ಕಿತು. ಇನ್ನು 1998ರ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಬಿಜೆಪಿ 13 ಸ್ಥಾನ​ಗ​ಳಿ​ಸಿ​ದರೆ, ರಾಮ​ಕೃಷ್ಣ ಹೆಗಡೆ ಅವರ ಲೋಕ​ಶ​ಕ್ತಿಗೆ 3 ಸ್ಥಾನ ದೊರ​ಕಿತ್ತು. ಇದಾದ ನಂತರ 1999ರ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ನಾವು ಮಾಡಿಕೊಂಡ ತಪ್ಪು ಹೊಂದಾ​ಣಿ​ಕೆಯಿಂದಾಗಿ ನಷ್ಟಅನು​ಭ​ವಿ​ಸಿ​ದೆವು. ಆಗಿನ ರಾಜ​ಕೀಯ ಸ್ಥಿತಿ​ಯಿಂದಾಗಿ ಬಿಜೆಪಿಯು ಜೆ.ಎಚ್‌.ಪಟೇ​ಲ​ರೊಂದಿಗೆ ಚುನಾ​ವಣೆ ಎದು​ರಿ​ಸಿತು. ಇದನ್ನು ಜನ ಒಪ್ಪ​ಲಿಲ್ಲ. ಇದರ ಬದ​ಲಾಗಿ ಆಗ ನಾವು ಏಕಾಂಗಿಯಾಗಿ ಚುನಾ​ವ​ಣೆಗೆ ಹೋಗಿ​ದ್ದರೆ, ಆಗಲೇ ಅಧಿ​ಕಾ​ರಕ್ಕೆ ಬರು​ತ್ತಿ​ದ್ದೆವು. ಆದರೆ, ಆ ರೀತಿ ಆಗ​ಲಿಲ್ಲ. ಇದ​ರಿಂದಾಗಿ ಬಿಜೆಪಿ 44 ಎಂಎ​ಲ್‌ಎ ಸೀಟು ಹಾಗೂ 7 ಲೋಕ​ಸಭಾ ಸೀಟು ಸಿಕ್ಕಿತ್ತು. 2003ರಲ್ಲಿ ನಾನು ಪಕ್ಷದ ಅಧ್ಯ​ಕ್ಷ​ನಾದೆ. ಆಗ ಯಡಿ​ಯೂ​ರಪ್ಪ ಅವರು ಪ್ರಚಾರ ಸಮಿತಿ ಅಧ್ಯ​ಕ್ಷ​ರಾ​ದರು. ಅವಿರತ ಶ್ರಮಿಸಿದೆವು. ಪರಿಣಾಮವಾಗಿ ನಾವು 79 ಸೀಟು ಪಡೆ​ದವು ಹಾಗೂ 18 ಲೋಕ​ಸಭಾ ಸೀಟು ದೊರ​ಕಿತ್ತು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಮೊತ್ತಮೊದಲ ಬಾರಿಗೆ ಅಧಿಕಾರಕ್ಕೆ ಬಂತು. ನಂತರ ನಡೆದ ಚುನಾ​ವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದು, ಯಡಿ​ಯೂ​ರಪ್ಪ ಸಿಎಂ ಪರಿ​ಪೂರ್ಣ ಸಿಎಂ ಆದದ್ದು, ಕರ್ನಾಟಕದಲ್ಲಿ ಬಿಜೆಪಿ ಭದ್ರವಾಗಿ ನೆಲೆ ಊರಿದ್ದು ಎಲ್ಲ ಈಗ ಇತಿಹಾಸ.

ಕೇವಲ ಎರಡು ಸ್ಥಾನ​ದಿಂದ ಪಕ್ಷ​ವನ್ನು ಅಧಿ​ಕಾ​ರಕ್ಕೆ ತರಲು ನಡೆಸಿದ ಕಾರ್ಯಾಚರಣೆ ಹೇಗಿತ್ತು?

ಮುಖ್ಯ​ವಾಗಿ ಬಿ.ಎಸ್‌. ಯಡಿ​ಯೂ​ರಪ್ಪ ಅವರು ರಾಜ್ಯ​ದಲ್ಲಿ ಬಿಜೆ​ಪಿಗೆ ರೈತ ಹೋರಾ​ಟದ ಹರ​ವನ್ನು ದೊರ​ಕಿ​ಸಿ​ಕೊ​ಟ್ಟರು. 1987ರಲ್ಲಿ ಬಿಜೆ​ಪಿಯು ಮೂರು ನಿಟ್ಟಿನ ರಣ​ನೀತಿ ಹೊಂದಿತ್ತು - ರೈತ, ರಾಮ ಮಂದಿರ ಹಾಗೂ ರಾಷ್ಟ್ರ​ಧ್ವಜ. ಯಡಿ​ಯೂ​ರಪ್ಪ ಬಗ​ರ್‌​ಹುಕುಂ ಸಾಗು​ವಳಿದಾರರ ಕಾಯಂ ಹೋರಾಟ, ಸಾಲ ಮನ್ನಾ, ರೈತರ ಬೆಳೆಗೆ ಯೋಗ್ಯ ಬೆಲೆ ದೊರ​ಕಿ​ಕೊ​ಡುವ ಹೋರಾಟಗಳನ್ನು ನಡೆ​ಸುತ್ತಾ ಬಂದರು. ಈ ಹೋರಾ​ಟಗಳು, ಮುಂದೆ ಅವರು ಉಪ ಮುಖ್ಯ​ಮಂತ್ರಿ ಹಾಗೂ ಮುಖ್ಯ​ಮಂತ್ರಿ ಆದಾಗ ಶೂನ್ಯ ಬಡ್ಡಿ​ದರದ ಸಾಲ, ರೈತ ಬಜೆಟ್‌ ನೀಡಲು ಪ್ರೇರ​ಣೆ​ಯಾ​ಗಿತ್ತು. ಇದರ ಜತೆ​ಯಲ್ಲಿ ಇಡೀ ದೇಶ​ದಲ್ಲಿ ರಾಮ​ಮಂದಿ​ರದ ಹೋರಾಟ ನಡೆ​ಯು​ತ್ತಿತ್ತು. ಅದು ಕರ್ನಾ​ಟ​ಕ​ದಲ್ಲಿ ವ್ಯಾಪ​ಕ​ವಾ​ಗಿತ್ತು. ಅನಂತರ ಮೊಯ್ಲಿ ಸರ್ಕಾ​ರದ ಅವ​ಧಿ​ಯಲ್ಲಿ ಈದ್ಗಾ ಮೈದಾ​ನ​ದಲ್ಲಿ ರಾಷ್ಟ್ರ​ಧ್ವಜ ಹಾರಿ​ಸುವ ವಿಚಾರ ಬಂತು. ಹುಬ್ಬಳ್ಳಿ-ಧಾರ​ವಾ​ಡ​ದಲ್ಲಿ ಬಿಜೆಪಿ ಮೂರು ಲೋಕ​ಸಭಾ ಸೀಟು ಗೆದ್ದಿತ್ತು. ಆ ಹೋರಾ​ಟದ ಮುಂಚೂ​ಣಿ​ಯಲ್ಲಿ ಯಡಿ​ಯೂ​ರಪ್ಪ ಇದ್ದರು. ನಾನು ಸಂಘ​ಟನೆ, ಹೋರಾಟದ ರಣ​ನೀತಿ, ಸಾಹಿತ್ಯ ಮೊದ​ಲಾದ ಎಲ್ಲಾ ಸಂಗ​ತಿ​ಗ​ಳನ್ನು ನೋಡು​ತ್ತಿದ್ದೆ. ಹೀಗೆ ಇನ್ನೂ ಅನೇಕ ನಾಯಕರ ಸಂಘಟಿತ ಹೋರಾಟದಿಂದ ಪಕ್ಷ ರಾಜ್ಯ​ದಲ್ಲಿ ಭದ್ರ ಬುನಾದಿ ದೊರ​ಕಲು ಹಾಗೂ ಪಕ್ಷ ಬಲ​ಶಾ​ಲಿ​ಯಾಗಿ ಬೆಳೆ​ಯಲು ಕಾರ​ಣ​ವಾ​ಯಿ​ತು.

ಯಡಿ​ಯೂ​ರಪ್ಪ ಅಂದರೆ...?

ಯಡಿ​ಯೂ​ರಪ್ಪ ಎಂದರೆ ಅವಿ​ಶ್ರಾಂತ ಚೇತನ. ಹಗ​ಲಿ​ರುಳು ಕೆಲಸ ಮಾಡುವ ನಾಯಕ. ರೈತರು, ಕೃಷಿ ಕಾರ್ಮಿ​ಕರು, ಬಡ​ವರು, ಮಹಿ​ಳೆ​ಯರ ಬಗ್ಗೆ ಅಪಾರವಾದ ಕಾಳಜಿ ಹೊಂದಿ​ರುವ ನಾಯಕ. ಇವು ಅವರ ಎಲ್ಲಾ ಮುಂಗ​ಡ​ಪತ್ರ ಹಾಗೂ ಯೋಜ​ನೆ​ಗ​ಳಲ್ಲಿ ಕಂಡು ಬರು​ತ್ತವೆ. ಹೀಗಾ​ಗಿಯೇ ಅವರು ರಾಜ್ಯದ ಬಹುದೊಡ್ಡ ಜನ​ನಾ​ಯ​ಕ​ನಾಗಿ ಬೆಳೆ​ದರು. ಈಗಲೂ ನೋಡಿ, ರಾಜ್ಯದ ಎಲ್ಲಾ 224 ಕ್ಷೇತ್ರ​ಗ​ಳಲ್ಲಿ ಖುದ್ದು ಪ್ರವಾಸ ತೆರಳಿ, ಸಭೆ, ಸಂವಾದ ನಡೆ​ಸಿದವರು ಯಡಿ​ಯೂ​ರಪ್ಪ. ನನ್ನ ಪ್ರಕಾ​ರ ಈ ರೀತಿ ರಾಜ್ಯ​ದ ಎಲ್ಲಾ 224 ಕ್ಷೇತ್ರಗಳಿಗೂ ಭೇಟಿ ನೀಡಿ ಪ್ರಚಾರ ನಡೆ​ಸಿದ ಏಕೈಕ ಮುಖ್ಯ​ಮಂತ್ರಿ ಅಭ್ಯರ್ಥಿ ಯಡಿ​ಯೂ​ರಪ್ಪ ಮಾತ್ರ. ಇದು ಅವರ ಸಾಹಸ, ಪರಿ​ಶ್ರಮ ಹಾಗೂ ಛಲ​ವನ್ನು ತೋರಿ​ಸು​ತ್ತದೆ. ಇದು ಯಡಿ​ಯೂ​ರಪ್ಪ ಅವರ ವಿಶೇಷ ಗುಣ. ಯಡಿಯೂರಪ್ಪ ಓರ್ವ ದಣಿವರಿಯದ ಶಕ್ತಿ.

ಯಡಿ​ಯೂ​ರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ... ಮೂವರೂ ಕರ್ನಾಟಕ ಯಾತ್ರೆ ಮಾಡಿದ್ದಾರಲ್ಲ?

ಯಡಿ​ಯೂ​ರಪ್ಪ ಅವರ ನೇತೃ​ತ್ವ​ವನ್ನು ಇಡೀ ಕರ್ನಾ​ಟ​ಕ​ದ ಜನ ಸ್ವಾಗ​ತಿ​ಸಿದ್ದಾರೆ. ತಮ್ಮ ಈ ಇಳಿ ವಯ​ಸ್ಸಿ​ನಲ್ಲಿ ಕೂಡ ಈ ರೀತಿ ದಣಿ​ವ​ರಿ​ಯದೇ ಓಡಾ​ಡು​ತ್ತಿ​ದ್ದಾ​ರಲ್ಲ, ಜನ​ರನ್ನು ಸಂಪ​ರ್ಕಿ​ಸು​ತ್ತಿ​ದ್ದಾ​ರಲ್ಲ. ಅದನ್ನ ಜನ ಗಮ​ನಿ​ಸಿ​ದ್ದಾರೆ. ಈ ಯಾತ್ರೆಗೆ ಇತರ ಯಾತ್ರೆ​ಗ​ಳನ್ನು ಹೋಲಿಸಿ ನೋಡಿ. ಕುಮಾ​ರ​ಸ್ವಾಮಿ ಅವರ ಯಾತ್ರೆ ಪಾಪ... ಆರಂಭ​ದಲ್ಲೇ ಪಂಕ್ಚರ್‌ ಆಗಿತ್ತು. ಇನ್ನು ಸಿದ್ದ​ರಾ​ಮಯ್ಯ ಅವರ ಪ್ರವಾಸ ಆರಂಭ​ದ ಒಂದು ತಿಂಗಳು ನೆನೆ​ಗು​ದಿಗೆ ಬಿದ್ದಿತ್ತು. ಯಾರು ಎಲ್ಲಿಗೆ ಪ್ರವಾಸ ಮಾಡ​ಬೇಕು. ಪರ​ಮೇ​ಶ್ವರ್‌ ಎಲ್ಲಿಗೆ ಹೋಗ​ಬೇಕು. ಸಿದ್ದ​ರಾ​ಮಯ್ಯ ಎಲ್ಲಿ ಪ್ರವಾಸ ಮಾಡ​ಬೇಕು ಎಂಬು​ದನ್ನು ನಿರ್ಧ​ರಿ​ಸ​ಲಾ​ಗದೇ ಗೊಂದ​ಲ​ದ​ಲ್ಲಿತ್ತು. ಅಂತಿ​ಮ​ವಾಗಿ ಅದು ಸರ್ಕಾರಿ ಜಾತ್ರೆ​ಯಾಗಿ ಸಂಪ​ನ್ನ​ವಾ​ಯಿತು. ಹಾಗೆ ನೋಡಿ​ದರೆ, ಜನರ ಪ್ರತಿ​ಕ್ರಿ​ಯೆ​ಯೊಂದಿಗೆ ಯಶ​ಸ್ವಿ ಯಾತ್ರೆ ನಡೆ​ಸಿದ್ದು ಯಡಿ​ಯೂ​ರಪ್ಪ ಮಾತ್ರ.

ಇತ್ತೀಚೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಿ ಚುನಾವಣೆಗೆ ಹೋಗುವುದನ್ನು ಬಿಜೆಪಿ ನಿಲ್ಲಿಸಿದೆ. ಆದರ, ಕರ್ನಾಟಕದಲ್ಲಿ ಯಡಿ​ಯೂ​ರಪ್ಪ ಅವ​ರನ್ನು ಮುಖ್ಯ​ಮಂತ್ರಿ ಅಭ್ಯ​ರ್ಥಿ​ಯಾಗಿ ಬಿಂಬಿ​ಸಲಾಗಿದೆ?

ಯಡಿ​ಯೂ​ರಪ್ಪ ಅವ​ರನ್ನು ಮುಖ್ಯ​ಮಂತ್ರಿ ಅಭ್ಯ​ರ್ಥಿ​ಯಾಗಿ ಘೋಷಿ​ಸಿ​ರು​ವುದು ನೂರಕ್ಕೆ ನೂರ​ರಷ್ಟುಲಾಭವನ್ನು ಪಕ್ಷಕ್ಕೆ ತಂದು​ಕೊ​ಡು​ತ್ತದೆ. ಏಕೆಂದರೆ, ರೈತರ ಪರ, ಜನರ ಪರ ದಿಟ್ಟನಿರ್ಧಾ​ರ​ಗ​ಳನ್ನು ಕೈಗೊಂಡ ಮೊದಲ ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ. ಅವರು ಹಣ​ಕಾಸು ಸಚಿವ ಹಾಗೂ ಮುಖ್ಯ​ಮಂತ್ರಿ​ಯಾ​ಗು​ವ​ವ​ರೆಗೂ ಕರ್ನಾ​ಟ​ಕದ ಯಾವೊಬ್ಬ ಮುಖ್ಯ​ಮಂತ್ರಿಯೂ ರೈತರ ಸಾಲ ಮನ್ನಾ ಮಾಡುವ ದಿಟ್ಟನಿರ್ಧಾ​ರ​ವನ್ನು ಕೈಗೊ​ಳ್ಳ​ಲಿಲ್ಲ. ಅದಕ್ಕೂ ಮೊದಲು ರೈತರು ಶೇ. 14, ಶೇ. 16ರ ಬಡ್ಡಿ​ದ​ರ​ದಲ್ಲಿ ಸಾಲ ಪಡೆ​ಯು​ತ್ತಿ​ದ್ದರು. ಇದನ್ನು ಶೂನ್ಯ ಬಡ್ಡಿ​ದ​ರದ ಸಾಲ ಮಾಡಿದ ಶ್ರೇಯಸ್ಸು ಯಡಿ​ಯೂ​ರಪ್ಪ ಅವ​ರದ್ದು. ಯಡಿ​ಯೂ​ರಪ್ಪ ಅವರ ಈ ನಿರ್ಧಾ​ರ​ದಿಂದ ಪ್ರೇರಣೆ ಪಡೆದು ಭಾರ​ತದ ಇನ್ನೂ ಹಲವು ರಾಜ್ಯ​ಗ​ಳಲ್ಲೂ ಶೂನ್ಯ ಬಡ್ಡಿ​ದ​ರ​ದಲ್ಲಿ ಸಾಲ ನೀಡುವ ಕಾರ್ಯ​ಕ್ರಮ ಜಾರಿಗೆ ಬಂದಿ​ವೆ. ಇವತ್ತು ಸಿದ್ದ​ರಾ​ಮಯ್ಯ ಅವರ ನೇತೃ​ತ್ವ​ದಲ್ಲಿ 3780 ಮಂದಿ ರೈತರು ರಾಜ್ಯ​ದಲ್ಲಿ ಆತ್ಮ​ಹತ್ಯೆ ಮಾಡಿ​ಕೊಂಡಿ​ದ್ದಾರೆ. ಅವರ ಸಚಿ​ವರೇ ವಿಧಾ​ನ​ಸ​ಭೆ​ಯಲ್ಲಿ ಹೇಳಿ​ರುವ ಪ್ರಕಾರ ಮೀಟರ್‌ ಬಡ್ಡಿ​ಯಿಂದಾಗಿ ರೈತರು ಆತ್ಮ​ಹತ್ಯೆ ಮಾಡಿ​ಕೊಂಡಿ​ದ್ದಾರೆ. ಇನ್ನು ರೈತರ ಬಜೆಟ್‌, ಭಾಗ್ಯ​ಲಕ್ಷ್ಮೇ, ಸೈಕಲ್‌ ಯೋಜನೆ, ಬೆಂಬಲ ಬೆಲೆ, ಸಂಧ್ಯಾ​ಸು​ರಕ್ಷಾದಂತಹ ಜನ ಪರ ಯೋಜನೆ ಕೊಟ್ಟವರು ಯಡಿ​ಯೂ​ರಪ್ಪ ಎಂಬುದು ಜನ​ಜ​ನಿತ. ಹೀಗಾಗಿ ಯಡಿ​ಯೂ​ರಪ್ಪ ನೇತೃ​ತ್ವ​ದಲ್ಲಿ ಬಿಜೆಪಿ ಚುನಾ​ವಣೆ ಎದು​ರಿ​ಸು​ತ್ತಿ​ರು​ವುದ​ರಿಂದ ರಾಜ್ಯದ ಜನತೆ ಬಿಜೆ​ಪಿಯು ಜನ​ಪರ, ರೈತ​ಪರ ಹಾಗೂ ಬಡ​ವರ ಪರ ಪಕ್ಷ ಎಂದು ಗುರು​ತಿ​ಸಿ​ದ್ದಾರೆ. ಇದ​ರಿಂದ ಪಕ್ಷಕ್ಕೆ ನೆರ​ವಾ​ಗ​ಲಿ​ದೆ.

ಮೋದಿ, ಶಾ ಇಲ್ಲದೆ ಗೆಲ್ಲಲು ಅಸಾಧ್ಯವೇ?

ಯಡಿ​ಯೂ​ರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ... ಮೂವರೂ ಕರ್ನಾಟಕ ಯಾತ್ರೆ ಮಾಡಿದ್ದಾರಲ್ಲ?

ಅವರು ನಮ್ಮ ದೊಡ್ಡ ಶಕ್ತಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಅವರ ಮಾರ್ಗದರ್ಶನ, ನಾಯಕತ್ವದಲ್ಲೇ ನಾವು 19 ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಅದರಂತೆಯೇ, ಅವರು ರಾಜ್ಯಕ್ಕೆ ಬರು​ವು​ದಕ್ಕಿಂತ ಮೊದಲೇ 86 ದಿನದ ಪರಿ​ವ​ರ್ತನಾ ಯಾತ್ರೆ​ಯನ್ನು ರಾಜ್ಯ ನಾಯ​ಕರೇ ಕೈಗೊಂಡಿ​ದ್ದಾರೆ. ಪ್ರತಿ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ 50ರಿಂದ 60 ಸಾವಿರ ಜನರ ರಾರ‍ಯಲಿ​ಗಳು ನಡೆ​ದಿವೆ. ಕಾಂಗ್ರೆಸ್‌ ಶೂನ್ಯ ಪ್ಲಸ್‌ ಶೂನ್ಯ ಇಕ್ವಲ್ಸ್‌ ಶೂನ್ಯ ಅರ್ಥಾತ್‌ ಸಿದ್ದ​ರಾ​ಮಯ್ಯ ಪ್ಲಸ್‌ ರಾಹುಲ್‌ ಗಾಂಧಿ ಇಕ್ವಲ್ಸ್‌ ಶೂನ್ಯ. ಆದರೆ, ನರೇಂದ್ರ ಮೋದಿ, ಅಮಿತ್‌ ಶಾ ಪ್ಲಸ್‌ ಯಡಿಯೂರಪ್ಪ ಅಂದರೆ ತ್ರಿಬಲ್‌ ಶಕ್ತಿ. ರಾಜ್ಯ​ದಲ್ಲಿ ಯಡಿ​ಯೂ​ರಪ್ಪ ಹಾಗೂ ಕೇಂದ್ರ​ದಲ್ಲಿ ಮೋದಿ ಅವ​ರಿ​ದ್ದರೆ ಕರ್ನಾ​ಟ​ಕ ಮುನ್ನ​ಡೆ ಹಾಗೂ ಪ್ರಗ​ತಿ ಕಾಣಲು ಸಾಧ್ಯ​ ಎಂದು ಕರ್ನಾಟಕದ ಜನತೆ ನಂಬಿದ್ದಾರೆ. ಏಕೆಂದರೆ, ಕೇಂದ್ರ​ದಲ್ಲಿ ಮೋದಿ ಸರ್ಕಾ​ರ​ವಿದೆ. ಕಳೆದ ಮೂರು​ವರೆ ವರ್ಷ ಆಡ​ಳಿ​ತದ ಬಗ್ಗೆ ಜನರ ಬೆಂಬ​ಲ​ವಿದೆ. ಅದು ಇಲ್ಲ​ದಿ​ದ್ದರೆ ಇತಿ​ಹಾ​ಸ​ದಲ್ಲೇ ಅತಿ ಹೆಚ್ಚು ರಾಜ್ಯ​ಗ​ಳಲ್ಲಿ ಗೆಲುವು ಸಾಧಿಸಿ, ಬಿಜೆಪಿ ಸರ್ಕಾರ ಪ್ರತಿ​ಷ್ಠಾ​ಪನೆ ಮಾಡಲು ಆಗು​ತ್ತಿ​ರ​ಲಿಲ್ಲ. ಹೀಗಾಗಿ ಮೋದಿ ನೇತೃ​ತ್ವದ ಕೇಂದ್ರ ಸರ್ಕಾ​ರದ ಅಡಿ​ಯಲ್ಲಿ ಕರ್ನಾ​ಟ​ಕ​ದಲ್ಲಿ ಯಡಿ​ಯೂ​ರಪ್ಪ ಅವರ ಸರ್ಕಾರ ಬಂದರೆ ಕರ್ನಾ​ಟ​ಕದ ಅಭ್ಯು​ದ​ಯದ ಬಾಗಿಲು ತೆರೆ​ಯು​ತ್ತದೆ ಎಂಬ ಭ​ರವಸೆ ರಾಜ್ಯದ ಜನ​ತೆಗೆ ಇದೆ.

ಮೋದಿ ಸರ್ಕಾರ ವೈಫಲ್ಯ ಕಂಡಿದೆ ಎಂದು ಕಾಂಗ್ರೆಸ್‌ ನಾಯ​ಕತ್ವ ಆರೋ​ಪಿ​ಸು​ತ್ತ​ದೆ?

ಕೇಂದ್ರ ಸರ್ಕಾರ ನೋಟ್‌ ಅಮಾ​ನ್ಯೀ​ಕ​ರಣ ಮಾಡಿತು. ಇದಾದ ನಂತರ ಕಾಂಗ್ರೆಸ್‌ ಈ ಬಗ್ಗೆ ಅಪ​ಪ್ರ​ಚಾರ ಮಾಡಿತು. ಅದು ಈಗ ಧ್ವಂಸಗೊಂಡಿದೆ. ಇತ್ತೀ​ಚಿನ ಮುಂಗ​ಡ​ಪ​ತ್ರ​ದಲ್ಲಿ 50 ಕೋಟಿ ಬಡ​ಜ​ನ​ತೆಗೆ ಆಯು​ಷ್ಮಾನ್‌ ಭಾರತ ಎಂಬ ಆರೋಗ್ಯ ವಿಮೆ ನೀಡುವ ಕಾರ್ಯ​ಕ್ರಮ ಆರಂಭ​ವಾ​ಯಿತು. ಭಾರತ ಸ್ವತಂತ್ರ​ಗೊಂಡು 70 ವರ್ಷ​ವಾದರೂ ಇದು​ವರೆಗಿನ ಯಾವ ಸರ್ಕಾ​ರವೂ ರೈತ​ರು ಬೆಳೆ​ಯುವ ಬೆಳೆಗೆ ತಗ​ಲುವ ವೆಚ್ಚದ ಒಂದೂ​ವರೆ ಪಟ್ಟಿ​ನಷ್ಟುಬೆಂಬಲ ಬೆಲೆ ನೀಡು​ತ್ತೇವೆ ಎಂದು ಹೇಳಿ​ರ​ಲಿಲ್ಲ. ಮೋದಿ ಸರ್ಕಾರ ಆ ದಿಸೆಯಲ್ಲಿ ಹೆಜ್ಜೆ ಹಾಕಿದೆ. ಮುದ್ರಾ ಯೋಜ​ನೆ​ಯಿಂದ ಹತ್ತು ಕೋಟಿ ಯುವ​ಕ​ರಿಗೆ ಲಾಭ​ವಾ​ಗಿದೆ. ಜನ​ಧನ್‌, ಜೀವ​ನ​ಜ್ಯೋತಿ, ಜೀವ​ನ​ಸು​ರಕ್ಷಾ... ಎಷ್ಟುಯೋಜ​ನೆ​ಗಳು ಬಂದಿವೆ. ಇಂತಹ ಒಂದೂ ಯೋಜ​ನೆ​ಯನ್ನೂ ರಾಹುಲ್‌ ಗಾಂಧಿ ಆಗಲಿ ಅಥವಾ ಅವರ ಪೂರ್ವಿ​ಕ​ರಾ​ಗಲಿ ಮಾಡಿ​ದ್ದಾರೆ ಎಂದು ಹೇಳಲಿ ನೋಡೋಣ. ಗರೀಬಿ ಹಟಾವೋ ಎಂದು ಘೋಷಣೆ ಹೇಳಿದ್ದು ಬಿಟ್ಟರೆ, ರಾಷ್ಟ್ರೀಯ ಮಟ್ಟದ ಒಂದು ಯೋಜನೆಯನ್ನೂ ಅವರು ಮಾಡಲು ಆಗ​ಲಿಲ್ಲ. ಉದಾ​ಹ​ರ​ಣೆಗೆ ನನ್ನ ಖಾತೆಯನ್ನೇ ತೆಗೆ​ದು​ಕೊ​ಳ್ಳೋಣ. ಕಾಂಗ್ರೆಸ್‌ ಸರ್ಕಾ​ರ​ವಿ​ದ್ದಾಗ 1.5 ಲಕ್ಷ ರು. ಆಗಿತ್ತು ಹೃದಯ ಚಿಕಿ​ತ್ಸೆಯ ಸ್ಟೆಂಟ್‌ನ ಬೆಲೆ. ಈಗ ಅದು 28 ಸಾವಿರ ರು. ಆಗಿದೆ. ಆರು ಕೋಟಿ ಜನ ಹೃದ್ರೋ​ಗಿ​ಗ​ಳಿ​ದ್ದಾರೆ. 6 ಲಕ್ಷ ಸರ್ಜರಿ ಪ್ರತಿ ವರ್ಷ ಆಗುತ್ತೆ. 6 ಸಾವಿರ ಕೋಟಿ ರು. ಉಳಿ​ತಾಯ ಆಗು​ತ್ತದೆ. ಮಂಡಿ ಟ್ರಾನ್ಸ್‌​ಪ್ಲಾಂಟ್‌ ಬೆಲೆ ಒಂದೂ​ವರೆ ಲಕ್ಷ ರು. ನಿಂದ ಎಂಟೂ​ವರೆ ಲಕ್ಷ ರು. ಆಗು​ತ್ತಿತ್ತು. ಈಗ ಕೇವಲ 50 ಸಾವಿರ ರು.ಗೆ ಮಿತಿ ಮಾಡ​ಲಾ​ಗಿದೆ. ಇನ್ನು ಕಾಂಗ್ರೆಸ್‌ ಸರ್ಕಾ​ರ​ವಿ​ದ್ದಾಗ 99 ಜನೌ​ಷಧಿ ಕೇಂದ್ರ​ವಿತ್ತು. ಮೋದಿ ಸರ್ಕಾರ ಅಧಿ​ಕಾ​ರಕ್ಕೆ ಬಂದ ನಂತರ ದೇಶದ 555 ಜಿಲ್ಲೆ​ಗ​ಳಲ್ಲಿ 3175 ಜನೌ​ಷಧಿ ಕೇಂದ್ರ​ಗ​ಳನ್ನು ತೆರೆ​ಯ​ಲಾ​ಗಿ​ದೆ.

ಮೋದಿ ಕಾರ್ಯಕ್ರಮಗಳಿಂದಾಗಿ ನೀವು ಗೆದ್ದುಬಿಡುತ್ತೀರಿ ಎಂಬಷ್ಟುಸುಲಭವೇ ಕರ್ನಾಟಕ ಚುನಾವಣೆ?

ಮೋದಿಯವರ ಕಾರ್ಯಕ್ರಮ ಎಷ್ಟುಪ್ರಮುಖವೋ, ಚುನಾವಣೆ ನಡೆಸುವ ಅಮಿತ್‌ ಶಾ ಅವರ ಕಾರ್ಯತಂತ್ರ ಕೂಡ ಅಷ್ಟೇ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅಮಿತ್‌ ಶಾ ಅವರು ಕೇವಲ ಚುನಾವಣೆ ಕಾರ್ಯತಂತ್ರ ರೂಪಿಸುವುದು ಮಾತ್ರವಲ್ಲ ಅವರು ಪಕ್ಷವನ್ನು ಅತ್ಯಂತ ಪ್ರಬಲವಾಗಿ ಬೇಳೆಸಿದ್ದಾರೆ ಮತ್ತು ತಳಮಟ್ಟದಲ್ಲಿ ಅತ್ಯಂತ ಭದ್ರವಾಗಿಸಿದ್ದಾರೆ. ದೇಶ​ದಲ್ಲಿ ಬಿಜೆ​ಪಿ​ಯನ್ನು ಕಟ್ಟು​ವಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕೊಡುಗೆ ಅತ್ಯಂತ ನಿರ್ಣಾ​ಯಕ. 11 ಕೋಟಿ ಸದ​ಸ್ಯ​ರನ್ನು ಹೊಂದಿದ ವಿಶ್ವ​ದಲ್ಲೇ ಅತಿ ದೊಡ್ಡ ಪಕ್ಷ​ವಾಗಿ ಬಿಜೆಪಿ ಬೆಳೆ​ಸಿದ್ದು ಅವರು. ದೇಶದ ಇತಿ​ಹಾ​ಸ​ದಲ್ಲೇ ಅತಿ ಹೆಚ್ಚು ರಾಜ್ಯ​ಗ​ಳಲ್ಲಿ ಬಿಜೆಪಿ ಅಧಿ​ಕಾರ ಹಿಡಿ​ಯು​ವಲ್ಲಿ ಅಮಿತ್‌ ಶಾ ತೋರಿದ ಚಾಣಾ​ಕ್ಷತೆ, ರಣ​ನೀ​ತಿಯೇ ಮುಖ್ಯ ಕಾರಣ. ಅಮಿತ್‌ ಶಾ ಅವರು ಹಾಕಿದ ಅಡಿ​ಪಾ​ಯದ ಮೇಲೆ ಬಿಜೆ​ಪಿಯು ದೇಶಾ​ದ್ಯಂತ ಬೆಳೆ​ಯು​ತ್ತಿ​ದೆ. ಹಾಗಾಗಿ, ಮೋದಿಯವರ ನಾಯಕತ್ವ, ಅಮಿತ್‌ ಶಾ ಅವರ ರಣನೀತಿ ಹಾಗೂ ರಾಜ್ಯಾದ್ಯಂತ ಯಡಿಯೂರಪ್ಪವರ ಜನಪ್ರಿಯತೆ ನಮ್ಮನ್ನು ಈ ಬಾರಿ ಗೆಲ್ಲಿಸುತ್ತದೆ ಎಂಬ ವಿಶ್ವಾಸ ನಮಗಿದೆ.

ಮೋದಿ, ಶಾ ಇಲ್ಲದೆ ಗೆಲ್ಲಲು ಅಸಾಧ್ಯವೇ?

ರಾಜ್ಯ​ಬಿಜೆಪಿ ಈ ಬಾರಿ ಚುನಾವಣೆಗೆ ಮೋದಿ ಹಾಗೂ ಅಮಿತ್‌ ಶಾ ಅವ​ರನ್ನೇ ಹೆಚ್ಚು ಅವಲಂಬಿಸಿದೆ?

loader