ರಾಜ್ಯಮಟ್ಟದಲ್ಲಿ ಈಗ ಎಡಬಿಡಂಗಿ ಮಾಧ್ಯಮ ಮಿತ್ರರು ಇದ್ದಾರೆ. ಅವರಿಗೆ ಮಾಧ್ಯಮ ಕೌಶಲ್ಯವೇ ಗೊತ್ತಿಲ್ಲಾ.

ಕುಮಟಾ(ಸೆ.11): ಇತ್ತೀಚಿಗಷ್ಟೆ ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು' ಏನ್ ಬೇಕಾದ್ರು ಬರ್ಕೊಳ್ಳಿ,ಏನ್ ಬೇಕಾದ್ರು ಹಾಕೊಳ್ಳಿ, ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮ ಮಿತ್ರರು ಹೊರತುಪಡಿಸಿ ರಾಜ್ಯಮಟ್ಟದಲ್ಲಿ ಈಗ ಎಡಬಿಡಂಗಿ ಮಾಧ್ಯಮ ಮಿತ್ರರು ಇದ್ದಾರೆ. ಅವರಿಗೆ ಮಾಧ್ಯಮ ಕೌಶಲ್ಯವೇ ಗೊತ್ತಿಲ್ಲಾ. ಅವರಿಗೆ ಹೇಗೆ ಮಾತಾಡಬೇಕೆಂದು ಗೊತ್ತಿಲ್ಲ. ಹೇಗೆ ಬರೆಯಬೇಕೆಂದು ಗೊತ್ತಿಲ್ಲ. ಅಕ್ಷರದ ಬೆಲೆಯೂ ಗೊತ್ತಿಲ್ಲ. ಅವರ ಬದುಕು ಕೂಡ ಗೊತ್ತಿಲ್ಲ.

ನನ್ನ ಮಾತು ತೀಕ್ಷ್ಣವಾದರೆ ಕ್ಷಮಿಸಿಬಿಡಿ. ನನ್ನ ಜಿಲ್ಲೆಯವರು ಸಭ್ಯತೆಯ ಗೆರೆಯನ್ನು ದಾಟಿಲ್ಲ. ಕೆಲವರು ಎಡಬಿಡಂಗಿ ಪ್ರಶ್ನೆ ಕೇಳುತ್ತಾರೆ ಕೇಂದ್ರ ಮಂತ್ರಿಯಾಗಿದ್ದೀರಿ ಉತ್ತರ ಜಿಲ್ಲೆಗೆ ಏನು ಪ್ಯಾಕೇಜ್ ಕೊಡುತ್ತೀರಿ ಎಂದು ಒಬ್ಬ ಸಚಿವನಾಗಿ ನಾನು ಜಿಲ್ಲೆಗೆ ಪ್ಯಾಕೇಜ್ ಕೊಡಬೇಕು ಎನ್ನುವುದು ಮೂರ್ಖ ಪ್ರಶ್ನೆ. ರಾಜಕೀಯ ಎನ್ನುವುದು ಪ್ಯಾಕೇಜ್ ಕೊಡುವುದಕ್ಕಾಗಿ ಇರುವ ವ್ಯವಸ್ಥೆಯಲ್ಲ. ಒಬ್ಬ ಶಾಸಕರ ಆಯ್ಕೆಗಾಗಿ 5 ಕೋಟಿ ರೂ. ಪ್ಯಾಕೇಜ್, ಸಂಸದರ ಆಯ್ಕೆಗೆ ಸುಮಾರು 15–20 ಕೋಟಿ ಪ್ಯಾಕೇಜ್ ಎಂದು ನಿಗದಿ ಮಾಡಲು ಸಾಧ್ಯವೇ?’ ಎಂದು ಪ್ರಶ್ನಿಸಿದರು. ಕೆಲ ಮಾಧ್ಯಮದವದರು ಬೇಡದ ಅಪಪ್ರಚಾರ ಮಾಡುತ್ತಿದ್ದಾರೆ. ನಿಷ್ಠುರವಾಗಿ ಹೇಳುತ್ತೇನೆ ನಿಮ್ಮ ಪತ್ರಿಕೆ, ಮಾಧ್ಯಮಗಳಲ್ಲಿ ಏನು ಬೇಕಾದರೂ ಬರೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.