'ದೇಸಿ ಜುಗಾಡ್' ಅಂದ್ರೆ ಆನಂದ್ ಮಹೀಂದ್ರಾಗೆ ಇಷ್ಟದೇಶೀಯ ಟ್ಯಾಲೆಂಟ್ ಹಂಟ್‌ಗೆ ಮುಂದಾಗಿರುವ ಆನಂದ್'ಜುಗಾಡ್ ಮ್ಯೂಸಿಯಂ'ಸ್ಥಾಪಿಸಲು ಮುಂದಾದ ಆನಂದ್ ಮಹೀಂದ್ರಾ
ಮುಂಬೈ(ಜೂ.೨೩): ಮಹೀಂದ್ರಾ ಸಂಸ್ಥೆಯ ಆನಂದ್ ಮಹೀಂದ್ರಾ ಅವರಿಗೆ 'ದೇಸಿ ಜುಗಾಡ್'(ಸಮಸ್ಯೆಗಳಿಗೆ ದೇಶೀಯ ಪರಿಹಾರ ಕಂಡುಕೊಳ್ಳುವ ವಿಧಾನ) ಅಂದ್ರೆ ಬಲು ಪ್ರೀತಿ. ದೇಶದ ಮೂಲೆ ಮೂಲೆಗಳಲ್ಲಿರುವ ಈ ರೀತಿಯ ಜುಗಾಡ್ ಪ್ರೇಮಿಗಳನ್ನು ಒಮದೆಡೆ ಕಲೆ ಹಾಕವುದು ಅವರ ಕನಸ್ಸು.
ಜುಗಾಡ್ ಅಂದ್ರೆ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳುವುದು. ಭಾರತೀಯರು ಇಂತಹ ಪರಿಹಾರದ ಹುಡುಕಾಟದಲ್ಲಿ ಮೊದಲಿಗರು ಎಂಬುದು ಆನಂದ್ ಮಹೀಂದ್ರಾ ಅವರ ಅಭಿಪ್ರಾಯ. ಅದರಲ್ಲೂ ಯಾವುದೇ ಇಂಜಿನಿಯರಿಂಗ್ ಕೌಶಲ್ಯ ಇಲ್ಲದೇಯೂ ಹಲವಾರು ಅದ್ಭುತಗಳನ್ನು ಭಾರತೀಯರು ಸೃಷ್ಟಿ ಮಾಡಬಲ್ಲರು ಎಂಬುದು ಅವರ ನಂಬಿಕೆ.
ಇತ್ತೀಚೆಗೆ ತನ್ನ ಆಟೋವನ್ನು ಮಹೀಂದ್ರಾ ಸ್ಕಾರ್ಪಿಯೋ ರೀತಿ ಬದಲಾಯಿಸಿಕೊಂಡಿದ್ದ ಆಟೋ ಚಾಲಕನಿಗೆ ಆನಂದ್ ಸ್ಕಾರ್ಪಿಯೋ ಗಿಫ್ಟ್ ನೀಡಿದ್ದರು. ಅದರಂತೆ ಇತ್ತೀಚಿಗೆ ಸಾರ್ವಜನಿಕ ರಸ್ತೆಗಖಳ ಕಸ ಗುಡಿಸಲು ವ್ಯಕ್ತಿಯೋರ್ವ ತಯಾರಿಸಿದ್ದ ಪೊರಕೆ ಮಷಿನ್ ಇದೀಗ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ.
ಚಕ್ರದ ಆಕಾರದಲ್ಲಿರುವ ಮಷಿನ್ ಸುತ್ತಲೂ ನಾಲ್ಕು ಪೊರಕೆ ಕಟ್ಟಿ ಆ ಚಕ್ರ ತಿರುಗುವಂತೆ ಮಾಡಿದ್ದು, ನಾಲ್ಕು ಪೊರಕೆಗಳು ಇಡೀ ರಸ್ತೆಯ ಕಸವನ್ನು ಕ್ಷಣಾರ್ಧದಲ್ಲಿ ಗುಡಿಸಿ ಸ್ವಚ್ಛಗೊಳಿಸುತ್ತವೆ. ಈ ವಿಡಿಯೋ ನೋಡಿ ಬಹುವಾಗಿ ಮೆಚ್ಚಿಕೊಂಡಿರುವ ಆನಂದ್ ಮಹೀಂದ್ರಾ, ಈ ರೀತಿಯ ಪ್ರತಿಭೆಗಳನ್ನು ಗುರುತಿಸಲು 'ಜುಗಾಡ್ ಮ್ಯೂಸಿಯಂ' ಸ್ಥಾಪನೆಗೆ ಮುಂದಾಗಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಆನಂದ್ ಮಹೀಂದ್ರಾ, ದೇಶದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರು ಆವಿಷ್ಕರಿಸಿರುವ ವಸ್ತುಗಳನ್ನು ಒಂದೆಡೆ ಸಂಗ್ರಹಿಸಲು 'ಜುಗಾಡ್ ಮ್ಯೂಸಿಯಂ'ನ್ನು ಸ್ಥಾಪಿಸಲು ಚಿಂತಿಸುತ್ತಿರುವುದಾಗಿ ತಿಳಿಸಿದ್ದಾರೆ. ಚೆನ್ನೈನಲ್ಲಿರುವ ತಮ್ಮ ಮಹೀಂದ್ರಾ ಸಂಶೋಧನಾ ಕೇಂದ್ರದಲ್ಲಿ ಈ ಜುಗಾಡ್ ಮ್ಯೂಸಿಯಂ ಸ್ಥಾಪಿಸಲು ಆನಂದ್ ಮಹೀಂದ್ರಾ ಮುಂದಾಗಿದ್ದಾರೆ.
