ಬೆಂಗಳೂರು ರಸ್ತೆಗೆ ಖ್ಯಾತ ಉದ್ಯಮಿಯಿಂದ ಪ್ರಶಂಸೆ 

ಬೆಂಗಳೂರು: ಕೆಲದಿನಗಳ ಹಿಂದೆ ಲಾಸ್ ಏಂಜಲೀಸ್ ಟೈಮ್ಸ್’ನಲ್ಲಿ ಕರ್ನಾಟಕದ ಪಾವಗಡ ಸೌರ ವಿದ್ಯುತ್ ಕೇಂದ್ರಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಇದೀಗ ದೇಶದ ಖ್ಯಾತ ಉದ್ಯಮಿ ಹಾಗೂ ಕಾರು ತಯಾರಕ ಆನಂದ್ ಮಹೀಂದ್ರಾ ಬೆಂಗಳೂರಿನ ಟೆಂಡರ್ ಶ್ಯೂರ್ ರಸ್ತೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಟ್ವೀಟ್ ಆಡಿರು ಆನಂದ್ ಮಹೀಂದ್ರಾ, ನಾನು ಬೆಂಗಳೂರಿನ ಸೈಂಟ್ ಮಾರ್ಕ್ಸ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್’ಗೆ ಭೇಟಿ ನೀಡಿದ್ದೆ. ಪಾದಾಚಾರಿಗಳಿಗೆ ರಸ್ತೆಗಳನ್ನು ಮರಳಿಪಡೆಯುವ ಚಳುವಳಿ ಆರಂಭವಾಗಿದೆಯೆಂದು ಅನಿಸುತ್ತದೆ. ಈ ನಡೆ ಪ್ರಶಾಂಸಾರ್ಹ. ನಾನು ಕಾರು ತಯಾರಕನಾಗಿರಬಹುದು, ಆದರೆ ನಗರಗಳು ಜನಸ್ನೇಹಿಯಾಗಿರಬೇಕು ಎಂಬುವುದರಲ್ಲಿ ವಿಶ್ವಾಸವಿಟ್ಟವನು ನಾನು, ಆ ನಿಟ್ಟಿನಲ್ಲಿ ‘ಪಾದಾಚಾರಿ ಮಾತ್ರ’ ಸೌಲಭ್ಯಗಳು ಮುಖ್ಯ. ಎಂದು ಹೇಳಿದ್ದಾರೆ.

Scroll to load tweet…