100 ಕೋಟಿ ರು. ಮೌಲ್ಯದ ಆಸ್ತಿ ಮತ್ತು ಮೂರು ವರ್ಷದ ಮಗುವನ್ನು ತೊರೆದು ಜೈನ ದೀಕ್ಷೆ ಪಡೆದು ಸುಮೀತ್ ರಾಥೋರ್ ಸನ್ಯಾಸಿಯಾದ ಎರಡು ದಿನಗಳಲ್ಲೇ ಅವರ ಪತ್ನಿ ಅನಾಮಿಕಾ ರಾಥೋರ್ ಸಹ ಸೋಮವಾರ ಹಲವರ ವಿರೋಧದ ನಡುವೆ ಸಾಧ್ವಿಯಾಗಿದ್ದಾರೆ.
ಸೂರತ್: 100 ಕೋಟಿ ರು. ಮೌಲ್ಯದ ಆಸ್ತಿ ಮತ್ತು ಮೂರು ವರ್ಷದ ಮಗುವನ್ನು ತೊರೆದು ಜೈನ ದೀಕ್ಷೆ ಪಡೆದು ಸುಮೀತ್ ರಾಥೋರ್ ಸನ್ಯಾಸಿಯಾದ ಎರಡು ದಿನಗಳಲ್ಲೇ ಅವರ ಪತ್ನಿ ಅನಾಮಿಕಾ ರಾಥೋರ್ ಸಹ ಸೋಮವಾರ ಹಲವರ ವಿರೋಧದ ನಡುವೆ ಸಾಧ್ವಿಯಾಗಿದ್ದಾರೆ.
ಸುಮೀತ್ ಅವರಿಗೆ ಜೈನ ದೀಕ್ಷೆ ನೀಡಿದ ಆಚಾರ್ಯ ರಾಮ್‌ಲಾಲ್ ಜೀ ಮಹಾರಾಜ್ ಅವರೇ ಸುಮೀತ್ ಪತ್ನಿ ಅನಾಮಿಕ ರಾಥೋರ್ ಅವರಿಗೆ ಜೈನ ದೀಕ್ಷೆ ನೀಡಿದ್ದಾರೆ ಎಂದು ಅಖಿಲ ಭಾರತೀಯ ಸಾಧುಮಾರ್ಗಿ ಜೈನ್ ಶ್ರಾವಕ್ ಸಂಘದ ನೀಮಚ್ ಜಿಲ್ಲೆಯ ಅಧ್ಯಕ್ಷ ಸಂದೀಪ್ ಖಾಬಿಯಾ ಅವರು ತಿಳಿಸಿದ್ದಾರೆ.
