'ತೆರೆದಿದೆ ಮನೆ ಬಾ ಅತಿಥಿ’: ನಮ್ಮದಲ್ಲದ ಕ್ಷುದ್ರಗ್ರಹ ಪತ್ತೆ

news | Tuesday, May 22nd, 2018
Suvarna Web Desk
Highlights

ಗುರುಗ್ರಹದ ಕಕ್ಷೆ ಸುತ್ತುತ್ತಿರುವ ನೂತನ ಕ್ಷುದ್ರಗ್ರಹವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 2015 BZ509 ಎಂದು ಹೆಸರಿಸಿರುವ ಈ ಕ್ಷುದ್ರಗ್ರಹ ಅಸಲಿಗೆ ನಮ್ಮ ಸೌರಮಂಡಲದ ಸದಸ್ಯ ಅಲ್ಲ ಎಂಬ ಕುತೂಹಲಕಾರಿ ಅಂಶವನ್ನು ವಿಜ್ಞಾನಿಗಳು  ಬಯಲು ಮಾಡಿದ್ದಾರೆ.

ಲಂಡನ್ (ಮೇ.22): ಬ್ರಹ್ಮಾಂಡ ತನ್ನ ಒಡಲಲ್ಲಿ ಅದೆಷ್ಟೋ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಮಾನವ ತನ್ನ ಬುದ್ದಿಮತ್ತೆಯಿಂದ ಈ ರಹಸ್ಯಗಳನ್ನು ಭೇಧಿಸಲು ಪ್ರಯತ್ನ ನಡೆಸುತ್ತಲೇ ಇದ್ದಾನೆ. ಇಂತದ್ದೇ ರಹಸ್ಯವೊಂದನ್ನು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿ ಬಿಚ್ಚಿಟ್ಟಿದೆ. ಗುರುಗ್ರಹದ ಕಕ್ಷೆ ಸುತ್ತುತ್ತಿರುವ ನೂತನ ಕ್ಷುದ್ರಗ್ರಹವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 2015 BZ509 ಎಂದು ಹೆಸರಿಸಿರುವ ಈ ಕ್ಷುದ್ರಗ್ರಹ ಅಸಲಿಗೆ ನಮ್ಮ ಸೌರಮಂಡಲದ ಸದಸ್ಯ ಅಲ್ಲ ಎಂಬ ಕುತೂಹಲಕಾರಿ ಅಂಶವನ್ನು ವಿಜ್ಞಾನಿಗಳು  ಬಯಲು ಮಾಡಿದ್ದಾರೆ. 

2015 BZ509 ಕ್ಷುದ್ರಗ್ರಹ ಗುರುಗ್ರಹದ ವಿರುದ್ದ ದಿಕ್ಕಿನಲ್ಲಿ ಸೂರ್ಯನನ್ನು ಸುತ್ತುತ್ತಿದ್ದು, ಇದು ಬಿಲಿಯಾಂತರ ವರ್ಷಗಳ ಹಿಂದೆ ಬೇರೊಂದು ನಕ್ಷತ್ರದ ಗುರುತ್ವ ಬಲದಿಂದ ತಪ್ಪಿಸಿಕೊಂಡು ನಮ್ಮ ಸೌರಮಂಡಲ ಪ್ರವೇಶಿಸಿದೆ ಎಂದು ಸಂಸ್ಥೆಯ ಫಾತಿ ನಮೌನಿ ತಿಳಿಸಿದ್ದಾರೆ.  ಇತ್ತಿಚೀಗಷ್ಟೇ ಸೌರಮಂಡಲದ ಆಚೆಗಿನ ಮತ್ತೊಂದು ಕ್ಷುದ್ರಗ್ರಹವೊಂದನ್ನು ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೆ 2015 BZ509 ಕ್ಷುದ್ರಗ್ರಹ ಗುರುಗ್ರಹದ ಗುರುತ್ವ ಬಲದೊಳಗೆ ಬಂದಿದ್ದು, ಸೌರಮಂಡಲದ ಸದಸ್ಯನಾಗಿ ಪರಿವರ್ತನೆಗೊಂಡಿರುವುದು ಖಗೋಳ ವಿಜ್ಞಾನಿಗಳ ಕುತೂಹಲ ಇಮ್ಮಡಿಗೊಳ್ಳುವಂತೆ ಮಾಡಿದೆ. ಈ ಕ್ಷುದ್ರಗ್ರಹದ ಕುರಿತು ಮತ್ತಷ್ಟು ಅಧ್ಯಯನದ ಅವಶ್ಯಕತೆ ಇದೆ ಎಂದು  ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿ  ಸ್ಪಷ್ಟಪಡಿಸಿದೆ.

Comments 0
Add Comment

    Related Posts